Bollywood

ಶಾರೂಖ್ ಮನೆಗೆ ಭೇಟಿ ಕೊಟ್ಟ ಸಲ್ಮಾನ್ ಖಾನ್

Published

on

Share this

ಮುಂಬೈ: ಡ್ರಗ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯುನ್ ಖಾನ್ ಬಂಧನವಾದ ಹಿನ್ನೆಲೆಯಲ್ಲಿ ಭಾನುವಾರ ತಡರಾತ್ರಿ ಶಾರೂಖ್ ಮನೆಗೆ ಸಲ್ಮಾನ್ ಖಾನ್ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

ಮುಂಬೈನಲ್ಲಿರುವ ಶಾರೂಖ್ ಮನೆಗೆ ಸಲ್ಮಾನ್ ಖಾನ್ ಭೇಟಿ ನೀಡಿದ್ದಾರೆ. ಶಾರೂಖ್ ಖಾನ್ ಪುತ್ರ ಆರ್ಯನ್ ಬಂಧನದ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಭೇಟಿ ನೀಡಿ ಈ ಕುರಿತಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ:  ಬಂಧನದ ಬಳಿಕ ಪುತ್ರನ ಜೊತೆ 2 ನಿಮಿಷ ಮಾತಾಡಿದ ನಟ ಶಾರೂಖ್!

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡ್ತಿದ್ದ ಆರೋಪದಡಿ ರಾಷ್ಟ್ರೀಯ ಮಾದಕ ದ್ರವ್ಯ ತಡೆ ದಳ (ಎನ್‍ಸಿಬಿ) ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಒಳಗೊಂಡು 3 ಮಂದಿಯನ್ನು ಬಂಧಿಸಿದೆ. ಆತನನ್ನ ನಿನ್ನೆ ಎನ್‍ಸಿಬಿ ಕೋರ್ಟ್ ಒಂದು ದಿನದ ಮಟ್ಟಿಗೆ ಎನ್‍ಸಿಬಿ ಕಸ್ಟಡಿಗೆ ಒಪ್ಪಿಸಿದೆ. ಇದನ್ನೂ ಓದಿ:  ಡ್ರಗ್ಸ್ ಪಾರ್ಟಿ ಪ್ರಕರಣ – ಇಂದು ಆರ್ಯನ್ ಖಾನ್ ಜಾಮೀನು ಅರ್ಜಿ ಸಲ್ಲಿಕೆ

ಆರ್ಯನ್ ಖಾನ್ ಇವತ್ತು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದು, ಎನ್‍ಸಿಬಿ ಮತ್ತೆ ಆತನ ಕಸ್ಟಡಿ ಕೇಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಶೀಘ್ರವೇ ಶಾರೂಖ್ ಖಾನ್ ಮಗ ಜಾಮೀನಿನಡಿ ಬಿಡುಗಡೆಯಾದರೂ ಅಚ್ಚರಿ ಇಲ್ಲ. ದಾಳಿ ವೇಳೆ ಆರ್ಯನ್ ಖಾನ್ ಬಳಿ ಮಾದಕ ದ್ರವ್ಯ ಪತ್ತೆ ಆಗಿಲ್ಲ. ಆದರೆ ಆತ ದಾಳಿಗೂ ಮೊದಲು ಮಾದಕ ದ್ರವ್ಯ ಸೇವಿಸಿರಬಹುದು ಮತ್ತು ಡ್ರಗ್ಸ್ ಪಾರ್ಟಿಗಾಗಿ ವಾಟ್ಸಾಪ್ ಚ್ಯಾಟ್, ಫೋನ್ ಮೂಲಕ ಸಂಪರ್ಕ ಮಾಡಿರಬಹುದು ಎಂದು ಎನ್‍ಸಿಬಿ ಅನುಮಾನಿಸಿದೆ. ದಾಳಿ ವೇಳೆ 13 ಗ್ರಾಂ ಕೊಕೇನ್, 21 ಎನ್‍ಡಿಎಂಎ ಮಾತ್ರೆ, 21 ಗ್ರಾಂ ಚರಸ್ ಮತ್ತು 1.33 ಲಕ್ಷ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ದ್ರವ್ಯ ಹೊಂದಿರುವ, ಮಾದಕ ದ್ರವ್ಯ ಖರೀದಿ, ಸಾಗಾಟ ಆರೋಪದಡಿ ಶಾರೂಖ್ ಪುತ್ರನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications