ಮುಂಬೈ: ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮದುವೆ ಬಾಲಿವುಡ್ ಅಂಗಳದಲ್ಲಿ ಬಹುಚರ್ಚಿತ ವಿಷಯ. ಸಲ್ಮಾನ್ ಯಾವಾಗ ಮದುವೆಯಾಗ್ತಾರೆ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಈ ಹೊತ್ತಲ್ಲೇ ಸಲ್ಮಾನ್, ಮುಜೆ ಲಡ್ಕಿ ಮಿಲ್ ಗಯಿ (ನನಗೆ ಹುಡುಗಿ ಸಿಕ್ಕಿಬಿಟ್ಳು) ಎಂದು 1 ಗಂಟೆ ಹಿಂದಷ್ಟೇ ಟ್ವೀಟ್ ಮಾಡಿದ್ದು, ಈಗಾಗಲೇ ವೈರಲ್ ಆಗಿದೆ. ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ.
Advertisement
ಆದ್ರೆ ಸಲ್ಮಾನ್ ಖಾನ್ ಮಾತನಾಡುತ್ತಿರುವುದು ಯಾವ ಹುಡುಗಿ ಬಗ್ಗೆ ಅನ್ನೋದು ಸದ್ಯದ ಕುತೂಹಲ. ಅವರು ತಮ್ಮ ಮುಂದಿನ ಸಿನಿಮಾ ಭಾರತ್ ಚಿತ್ರಕ್ಕೆ ಹೀರೋಯಿನ್ ಸಿಕ್ಕಿದ್ದಾಳೆಂದು ಹೇಳುತ್ತಿರಬಹುದು.
Advertisement
Advertisement
ದೇಶಭಕ್ತಿಯ ಚಿತ್ರವಾದ ಭಾರತ್ 2019ರ ಈದ್‍ಗೆ ಬಿಡುಗಡೆಯಾಗಬೇಕಿದ್ದು, ಅಲಿ ಅಬ್ಬಾಸ್ ಝಫರ್ ನಿರ್ದೇಶನ ಮಾಡ್ತಿದ್ದಾರೆ. ಚಿತ್ರಕ್ಕೆ ನಾಯಕಿ ಅಂತಿಮವಾಗಿರಲಿಲ್ಲ. ಆದರೂ ಕತ್ರೀನಾ ಕೈಫ್ ಅವರನ್ನ ಚಿತ್ರದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಅಂತ ವದಂತಿಗಳು ಹರಿದಾಡ್ತಿದೆ.
Advertisement
ಸಲ್ಮಾನ್ ಖಾನ್ ಮುಂಬೈನಲ್ಲಿ ರೇಸ್ 3 ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಚಿತ್ರವನ್ನ ರೆಮೋ ಡಿಸೋಜಾ ನಿರ್ದೇಶಿಸುತ್ತಿದ್ದು, ಜಾಕ್ವೆಲೀನ್ ಫರ್ನಾಂಡಿಸ್, ಬಾಬಿ ಡಿಯೋಲ್, ಡೈಸಿ ಶಾಹ್, ಅನಿಲ್ ಕಪೂರ್ ಮುಂತಾದವರು ನಟಿಸಿದ್ದಾರೆ. ಇದೇ ವರ್ಷ ಈದ್‍ಗೆ ರೇಸ್-3 ಚಿತ್ರ ಬಿಡುಗಡೆಯಾಗಲಿದೆ.