ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ಪೇಂಟಿಂಗ್ ಕಲೆಯನ್ನು ಮೊಟ್ಟಮೊದಲ ಬಾರಿಗೆ ‘ಮದರ್‌ಹುಡ್’- ಆನ್ ಆರ್ಟಿಸ್ಟಿಕ್ ಓಡ್ ಟು ಮದರ್ ತೆರೇಸಾ’ ಎಂಬ ಏಕವ್ಯಕ್ತಿ ಪ್ರದರ್ಶನದಲ್ಲಿ ಪ್ರದರ್ಶಿಸಲು ಸಿದ್ಧರಾಗಿದ್ದಾರೆ. ಈ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯುತ್ತಿದೆ ಎಂಬುದು ವಿಶೇಷ.
ಈ ಕಾರ್ಯಕ್ರಮವನ್ನು ಸಂದೀಪ್ ಮತ್ತು ಗೀತಾಂಜಲಿ ಮೈನಿ ಫೌಂಡೇಶನ್‍ನೊಂದಿಗೆ ಮತ್ತು ಎಜಿಪಿ ವರ್ಲ್ಡ್, ಬೀಯಿಂಗ್ ಹ್ಯೂಮನ್ ಜೊತೆಗೂಡಿ – ಸಲ್ಮಾನ್ ಖಾನ್ ಫೌಂಡೇಶನ್, ಗ್ಯಾಲರಿ ಜಿ ಮತ್ತು ಆರ್ಟಿಯರ್ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ.
Advertisement
Advertisement
ಸಲ್ಲು ಮಾಡಿದ ಪೇಂಟಿಂಗ್‍ನ ಎರಡು ದೊಡ್ಡ ಗಾತ್ರದ ಕಲಾಕೃತಿಗಳು ಸೇರಿದಂತೆ ಮೂರು ವರ್ಣಚಿತ್ರಗಳು ಮಾರ್ಚ್ 11 ರಿಂದ 20 ರವರೆಗೆ ಬೆಂಗಳೂರಿನ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳಲಿವೆ. ಸಲ್ಮಾನ್ ಅವರ ಕಲಾಕೃತಿಗಳು ಮಾರ್ಚ್ 4 ರಂದು ಗೂಗಲ್ ಆರ್ಟ್ಸ್ ಮತ್ತು ಕಲ್ಚರ್‌ನಲ್ಲಿ ಆನ್‍ಲೈನ್‍ನಲ್ಲಿ ಲೈವ್ ಮಾಡಲಾಗಿತ್ತು. ಅವರ ಎರಡು ಪೇಂಟಿಂಗ್ ‘ಸ್ಟಿಲ್ ಇನ್ ಹೋಪ್ ಆಫ್ ಕಂಪಾಶನ್’ ಮತ್ತು ‘ಬಿಗ್ಗಿಂಗ್ ಫಾರ್ ಪೀಸ್’ ಜಿಎಸಿ ಡಿಜಿಟಲ್ ಪ್ಲಾಟ್‍ಫಾರ್ಮ್‍ನಲ್ಲಿ ಪ್ರದರ್ಶಿಸಲಾಗುತ್ತದೆ. ಇದನ್ನೂ ಓದಿ: ಜೇಮ್ಸ್ ಸಿನಿಮಾಗೆ ಸೆನ್ಸಾರ್‌ನಿಂದ ‘UA’ ಸರ್ಟಿಫಿಕೇಟ್
Advertisement
Advertisement
ಸಲ್ಮಾನ್ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುವ ಕುರಿತು ಮಾತನಾಡಿದ್ದು, ಪ್ರಸ್ತುತ ಜಗತ್ತಿನಲ್ಲಿ ಯುದ್ಧ ನಡೆಯುತ್ತಿದೆ. ಇದರಿಂದ ಸಾಕಷ್ಟು ನಷ್ಟವಾಗಿದೆ. ಅಲ್ಲದೇ ನಾವು ಸಾಂಕ್ರಾಮಿಕ ರೋಗಗಳನ್ನು ಎದುರಿಸುತ್ತಿದ್ದೇವೆ. ಇವುಗಳ ನಡುವೆಯೂ ‘ಮದರ್ ತೆರೇಸಾ’ ಪೇಂಟಿಂಗ್ ಚೆನ್ನಾಗಿ ಪ್ರದರ್ಶವಾಗುತ್ತೆ ಎಂಬ ನಂಬಿಕೆ, ಭರವಸೆ ಇದೆ. ಇದು ಯಾವಾಗಲೂ ಗೆಲ್ಲುತ್ತದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
ನಾನು ನನ್ನ ಭಾವನೆಗಳನ್ನು ನನ್ನ ಸಿನಿಮಾಗಳ ಮೂಲಕ, ಹಾಡು ಹಾಡುವುದರ ಮೂಲಕ, ನಾನು ಹೇಳುವ ಕಥೆಗಳೊಂದಿಗೆ ಹೇಳಲು ಇಷ್ಟಪಡುತ್ತೇನೆ. ಇದೇ ಮೊದಲ ಬಾರಿಗೆ ಬಣ್ಣ ಮತ್ತು ಖಾಲಿ ಕ್ಯಾನ್ವಾಸ್‍ನೊಂದಿಗೆ ಹೇಳಲು ಪ್ರಯತ್ನನಿಸಿದ್ದೇನೆ ಎಂದು ತಿಳಿಸಿದರು. ಮದರ್ ತೆರೇಸಾ ಅವರ ಅಪಾರ ಅಭಿಮಾನಿ, ಸಲ್ಮಾನ್ ಅವರ ಸೃಜನಶೀಲ ಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಫೆಬ್ರವರಿ 2021 ರಲ್ಲಿ ಸಂದೀಪ್ ಮತ್ತು ಗೀತಾಂಜಲಿ ಮೈನಿ ಫೌಂಡೇಶನ್ ಸಲ್ಮಾನ್ ಅವರ ಕಲಾಕೃತಿಯನ್ನು ಮೊದಲು ಗೂಗಲ್ ಕಲೆ ಮತ್ತು ಸಂಸ್ಕøತಿಯಲ್ಲಿ ಪ್ರದರ್ಶಿಸಲಾಯಿತು. ಇದಕ್ಕೆ ಎಲ್ಲ ಕಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಬೆಂಗಳೂರಿನಲ್ಲಿ ಪ್ರದರ್ಶಿಸಲು ಯೋಚಿಸಿ ಈ ನಿರ್ಧಾರಕ್ಕೆ ಬಂದಿದೆ. 2021 ರಲ್ಲಿ, ಸಲ್ಮಾನ್ ಖಾನ್ ಅವರ ಒಂದು ಪೇಂಟಿಂಗ್ ಉಂಅ ನಲ್ಲಿ ಮಾತ್ರ ಪ್ರದರ್ಶಿಸಲಾಯಿತು. ಈ ವರ್ಷ ನಾವು ಅವರ ಎರಡು ವರ್ಣಚಿತ್ರಗಳನ್ನು ಪ್ರದರ್ಶಿಸುತ್ತೇವೆ. ಇದು ಜನರನ್ನು ಆಕರ್ಷಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಂದೀಪ್ ಮತ್ತು ಗೀತಾಂಜಲಿ ಮೈನಿ ಫೌಂಡೇಶನ್‍ನ ಸಂಸ್ಥಾಪಕಿ ಗೀತಾಂಜಲಿ ಮೈನಿ ವಿವರಿಸುತ್ತಾರೆ. ಇದನ್ನೂ ಓದಿ: ಮಜಾಟಾಕೀಸ್ ರಾಣಿಯ ಸ್ನೇಹಿತೆ ಉಕ್ರೇನ್ ನಲ್ಲಿ ಕಳೆದ 10 ದಿನಗಳು: ಶ್ವೇತಾ ಚೆಂಗಪ್ಪ ಬಿಚ್ಚಿಟ್ಟ ರಹಸ್ಯ