ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆಗೆ ಕೊಲೆ ಬೆದರಿಕೆ ಪತ್ರ ಬರೆದು, ಮುಂಬೈ ಪೊಲೀಸರ ನಿದ್ದೆ ಗೆಡಿಸಿದ್ದ ಗ್ಯಾಂಗ್ ಅನ್ನು ಪತ್ತೆ ಹಚ್ಚುವಲ್ಲಿ ಕೊನೆಗೂ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ. ದೆಹಲಿಯ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿ ಮತ್ತು ತಂಡದವರೇ ಈ ಕೃತ್ಯ ಮಾಡಿದ್ದಾರೆ ಎಂದು ಶಂಕಿಸಲಾಗಿತ್ತು. ಹಾಗಾಗಿ ಆತನನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ, ಬಿಷ್ಣೋಯಿ ಅದನ್ನು ನಿರಾಕರಿಸಿದ್ದ. ಇದನ್ನೂ ಓದಿ: ನಾಲ್ಕು ಕೈ- ನಾಲ್ಕು ಕಾಲು ಇರುವ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವಾದ ಸೋನು ಸೂದ್
Advertisement
ಲಾರೆನ್ಸ್ ಬಿಷ್ಣೋಯಿ ನಿರಾಕರಿಸಿದ್ದರು, ಅವನ ಮತ್ತು ಆತನ ತಂಡದ ಮೇಲೆ ನಿಗಾ ಇಟ್ಟಿದ್ದ ಪೊಲೀಸ್ ಅಧಿಕಾರಿಗಳು, ಇವನ ತಂಡಕ್ಕೆ ಸೇರಿದ್ದ ಮೂವರಿಂದಲೇ ಸಲ್ಮಾನ್ ಖಾನ್‌ಗೆ ಪತ್ರ ಬರೆದದ್ದು ಎಂದು ಪತ್ತೆ ಹಚ್ಚಿದ್ದಾರೆ. ಪಂಜಾಬ್ ಗಾಯಕ ಸಿಧು ಮೂಸೆವಾಲ ಪ್ರಕರಣದಲ್ಲಿ ಇತ್ತೀಚೆಗೆ ಮೂವರನ್ನು ಬಂಧಿಸಲಾಗಿತ್ತು. ಅವರೇ ಆ ಪತ್ರಗಳನ್ನು ಬರೆದಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ ಎನ್ನಲಾಗುತ್ತಿದೆ.
Advertisement
Advertisement
Advertisement
ಸಲ್ಮಾನ್ ಖಾನ್ ತಂದೆಯು ವಾಯು ವಿಹಾರದಲ್ಲಿದ್ದಾಗ ತಂಡವೊಂದು ಇವರ ಮೇಲೆ ಪತ್ರ ಎಸೆದು ಪರಾರಿಯಾಗಿತ್ತು. ಆ ಪತ್ರದಲ್ಲಿ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬರೆದಿತ್ತು. ಪತ್ರ ಸಲ್ಮಾನ್ ಖಾನ್‌ಗೆ ತಲುಪುತ್ತಿದ್ದಂತೆಯೇ ಮುಂಬೈ ಪೊಲೀಸರು ಅವರ ಮನೆಗೆ ಹೆಚ್ಚಿನ ಭದ್ರತೆಯನ್ನು ನೀಡಿದ್ದರು. ಅಲ್ಲದೇ ತನಿಖೆಯನ್ನೂ ಚುರುಕುಗೊಳಿಸಿದ್ದರು.