ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ (Salman Khan) ಇತ್ತೀಚಿಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ (Lawrence Bishnoi) ಜೀವ ಬೆದರಿಕೆ ಸಂದೇಶ ಕಳುಹಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು (Mumbai Police) ಜೆಮ್‌ಶೆಡ್‌ಪುರದ ತರಕಾರಿ ಮಾರಾಟಗಾರನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಶೇಖ್ ಹುಸೇನ್ ಶೇಖ್ ಮೌಸಿನ್ (24) ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಬಾಬಾ ಸಿದ್ದಿಕಿ (Baba Siddique) ಹತ್ಯೆಯ ಬಳಿಕ ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆಯ ಸಂದೇಶ ಬಂದಿತ್ತು. ಬೆದರಿಕೆಯ ಕುರಿತು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ವಾಟ್ಸಪ್ ಸಂದೇಶ ಬಂದಿತ್ತು.ಇದನ್ನೂ ಓದಿ: ಪೂಜಾ ಕೈಂಕರ್ಯದೊಂದಿಗೆ ಹಾಸನಾಂಬೆ ಗರ್ಭಗುಡಿ ಓಪನ್ – ನ.3ಕ್ಕೆ ಜಾತ್ರಾ ಮಹೋತ್ಸವ
Advertisement
Advertisement
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸಲ್ಮಾನ್ ಖಾನ್ ಅವರೊಂದಿಗಿನ ಎಲ್ಲಾ ದ್ವೇಷಗಳನ್ನು ಕೊನೆಗೊಳಿಸಲು ಈ 5 ಕೋಟಿ ರೂ.ಯ ಬೇಡಿಕೆಯನ್ನು ಇಟ್ಟಿತ್ತು. ಈ ಸಂದೇಶಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದ್ದು, ಜೆಮ್‌ಶೆಡ್‌ಪುರ್‌ನ ತರಕಾರಿ ಮಾರಾಟಗಾರನೊಬ್ಬನನ್ನು ಬಂಧಿಸಿದ್ದಾರೆ.
Advertisement
ಮಂಗಳವಾರ ಬೆದರಿಕೆ ಬಂದಿದ್ದ ಸಂಖ್ಯೆಯಂದಲೇ ಪುನಃ ಸಂದೇಶ ಬಂದಿದ್ದು, ಅದರಲ್ಲಿ ಬೆದರಿಕೆ ಸಂದೇಶವನ್ನು ತಪ್ಪಾಗಿ ಕಳುಹಿಸಲಾಗಿದೆ. ಬಳಿಕ ಕ್ಷಮೆಯಾಚಿಸಿದ ಸಂದೇಶವನ್ನು ಕಳುಹಿಸಿದ್ದಾರೆ. ಪೊಲೀಸರು ಮೊಬೈಲ್ ನಂಬರ್‌ನ್ನು ಟ್ರ್ಯಾಕ್ ಮಾಡಿದಾಗ ಜಾರ್ಖಂಡ್‌ನಲ್ಲಿ ಪತ್ತೆಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
Advertisement
ಬೆದರಿಕೆ ಸಂದೇಶದಲ್ಲಿ ಏನಿತ್ತು?
ನಟ ಸಲ್ಮಾನ್ ಖಾನ್ ಜೀವಂತವಾಗಿರಲು ಬಯಸಿದರೆ ಹಾಗೂ ಲಾರೆನ್ಸ್ ಬಿಷ್ಣೋಯಿ ಅವರೊಂದಿಗಿನ ದ್ವೇಷವನ್ನು ಕೊನೆಗೊಳಿಸಲು ಬಯಸಿದರೆ 5 ಕೋಟಿ ರೂ. ಹಣವನ್ನು ಕೋಡಿ ಎಂದು ಬೇಡಿಕೆಯಿಟ್ಟಿದ್ದರು. ಇದನ್ನು ಸಾಮಾನ್ಯವಾಗಿ ತೆಗೆದುಕೊಳ್ಳಬೇಡಿ. ಒಂದು ವೇಳೆ ತೆಗೆದುಕೊಂಡು ಹಣಕೊಡದೇ ಇದ್ದರೆ ಬಾಬಾ ಸಿದ್ದಿಕಿಗಿಂತ ಸಲ್ಮಾನ್ ಖಾನ್ ಹತ್ಯೆ ಹೀನಾಯವಾಗಿರುತ್ತದೆ ಎಂದು ಬರೆಯಲಾಗಿತ್ತು.ಇದನ್ನೂ ಓದಿ:ಕಲಬುರಗಿ| ಇಬ್ಬರು ಬೈಕ್ ಕಳ್ಳರ ಬಂಧನ- 3.5 ಲಕ್ಷ ರೂ. ಮೌಲ್ಯದ 10 ಬೈಕ್ ಜಪ್ತಿ