ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಲತಾ ಮಂಗೇಶ್ಕರ್ ಅವರ ಹಾಡನ್ನು ಹಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ.
ಲತಾ ಮಂಗೇಶ್ಕರ್ ಅವರು ಹಾಡಿರುವ ಹಲವಾರು ಫೇಮಸ್ ಹಾಡುಗಳಲ್ಲಿ ಲಗ್ ಜಾ ಗಲೇ ಸಾಂಗ್ ಕೂಡ ಒಂದು. 1964ರಲ್ಲಿ ತೆರೆಕಂಡಿದ್ದ ವೋ ಕೌನ್ ಥಿ? ಸಿನಿಮಾ ಹಾಡು ಇದಾಗಿದ್ದು, ಇದೀಗ ಈ ಹಾಡನ್ನು ಸಲ್ಮಾನ್ ಹಾಡುವ ಮೂಲಕ ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋ ಜೊತೆಗೆ ಲತಾ ಮಂಗೇಶ್ಕರ್ ಅವರಂತೆ ಯಾರು ಇಲ್ಲ, ಯಾರು ಆಗಲು ಸಾಧ್ಯವಿಲ್ಲ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.
Advertisement
View this post on Instagram
Advertisement
ಈ ಮುನ್ನ ಫೆಬ್ರವರಿ 6ರಂದು ಕೊನೆಯುಸಿರೆಳೆದ ಲತಾ ಮಂಗೇಶ್ಕರ್ ಅವರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಸಲ್ಮಾನ್ ಖಾನ್ ಅವರು, ನಾವು ಭಾರತದ ನೈಟಿಂಗೇಲ್ ಕಳೆದುಕೊಳ್ಳುತ್ತಿದ್ದೇವೆ. ಆದರೆ ನಿಮ್ಮ ಧ್ವನಿ ನಮ್ಮೊಂದಿಗೆ ಎಂದೆಂದಿಗೂ ಶಾಶ್ವತವಾಗಿರುತ್ತದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡು ಸಂತಾಪ ಸೂಚಿಸಿದ್ದರು. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ
Advertisement
View this post on Instagram
Advertisement
ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಲತಾ ಮಂಗೇಶ್ಕರ್(92) ಅವರು 2022ರ ಫೆಬ್ರವರಿ 6ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ನಂತರ ಲತಾ ಮಂಗೇಶ್ಕರ್ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ನಟ ಶಾರೂಖ್ ಖಾನ್, ಅಮೀರ್ ಖಾನ್, ಶ್ರದ್ಧಾ ಕಪೂರ್, ಅಮಿತಾಭ್ ಬಚ್ಚನ್, ಮಗಳು ಶ್ವೇತಾ ಬಚ್ಚನ್ ನಂದಾ, ಅನುಪಮ್ ಖೇರ್, ಮಧುರ್ ಭಂಡಾರ್ಕರ್, ಸಂಜಯ್ ಲೀಲಾ ಬನ್ಸಾಲಿ ಸೇರಿದಂತೆ ಅನೇಕ ಚಲನಚಿತ್ರ ತಾರೆಯರು ಲತಾ ಮಂಗೇಶ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇದನ್ನೂ ಓದಿ: ಕೊನೆಗೂ ನಮ್ಮ ಕನಸು ನನಸಾಗಿದೆ: ಆಲಿಯಾ ಹೀಗೆಂದಿದ್ದೇಕೆ?
ಭಾರತದ ನೈಟಿಂಗೇಲ್ ಎಂದು ಕರೆಯಲ್ಪಡುವ ಲತಾ ಮಂಗೇಶ್ಕರ್ ಅವರು ಹಿಂದಿ, ಮರಾಠಿ, ಬಂಗಾಳಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಹಾಡಿದ್ದಾರೆ. ಲತಾ ಮಂಗೇಶ್ಕರ್ ಅವರಿಗೆ ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳ ಜೊತೆಗೆ ಹಲವಾರು ರಾಷ್ಟ್ರೀಯ ಮತ್ತು ಫಿಲ್ಮ್‍ಫೇರ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇದನ್ನೂ ಓದಿ: ಕಡಲ ತೀರದಲ್ಲಿ ನಿಂತು ಪತಿಯನ್ನು ತಬ್ಬಿ ಚುಂಬಿಸಿದ ದೀಪಿಕಾ ಪಡುಕೋಣೆ
1942ರಲ್ಲಿ ತಂದೆ ಪಂಡಿತ್ ದೀನನಾಥ್ ಮಂಗೇಶ್ಕರ್ ನಿಧನದ ಬಳಿಕ ಕುಟುಂಬವನ್ನು ನಡೆಸಲು ಲತಾ ಮಂಗೇಶ್ಕರ್ ಅವರು ಹಾಡಲು ಪ್ರಾರಂಭಿಸಿದರು. ಲತಾ ಮಂಗೇಶ್ಕರ್ ಅವರು ಶಾಸ್ತ್ರೀಯ ಗಾಯಕಿ ಮತ್ತು ರಂಗಭೂಮಿ ಕಲಾವಿದರಾಗಿದ್ದರು. 1948ರ ಚಲನಚಿತ್ರ ಮಜ್ಬೂರ್‍ನ ದಿಲ್ ಮೇರಾ ತೋಡಾ ಹಾಡಿನ ಮೂಲಕ ಬಾಲಿವುಡ್‍ನಲ್ಲಿ ಮೊದಲ ಬಾರಿಗೆ ಬ್ರೇಕ್ ಪಡೆದರು. ನಂತರ 1949ರ ಮಹಲ್ ಚಿತ್ರದಲ್ಲಿ ಹಾಡಿದ್ದ ಆಯೇಗಾ ಆನೆವಾಲಾ ಹಾಡು ಕೂಡ ಸಖತ್ ಹಿಟ್ ಆಯಿತು.