ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ (Salman Khan) ಲಕ್ ಕೈಕೊಟ್ಟಿದೆ. ಸಾಲು ಸಾಲು ಸಿನಿಮಾಗಳ ಸೋಲಿನ ನಂತರ ಸೌತ್ ಸಿನಿಮಾ ನಿರ್ದೇಶಕನ ಜೊತೆ ಸಲ್ಮಾನ್ ಖಾನ್ ಕೈಜೋಡಿಸಿದ್ದಾರೆ. ತಮಿಳಿನ ಸ್ಟಾರ್ ನಿರ್ದೇಶಕನ ಸಿನಿಮಾದಲ್ಲಿ ನಟಿಸಲು ಸಲ್ಮಾನ್ ನಿರ್ಧರಿಸಿದ್ದಾರೆ.
Advertisement
‘ಕಿಸಿ ಕಾ ಭಾಯ್ ಕಿಸಿ ಕೀ ಜಾನ್’, ಟೈಗರ್ 3 ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಹಾಗಾಗಿ ಸಲ್ಮಾನ್ ಖಾನ್ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಚಿತ್ರರಂಗದಲ್ಲಿ ದಕ್ಷಿಣದ ಸಿನಿಮಾಗಳೇ ಗೆಲ್ಲುತ್ತಿರುವ ಕಾರಣ ಸೌತ್ ಕಥೆಗಳತ್ತ ನಟ ಗಮನ ನೀಡುತ್ತಿದ್ದಾರೆ. ಇದನ್ನೂ ಓದಿ:‘ಲಾಲ್ ಸಲಾಂ’ ಸೋಲಿನ ಎಫೆಕ್ಟ್- ಲೋಕೇಶ್ ಕನಕರಾಜ್‌ಗೆ ತಲೈವಾ ವಾರ್ನಿಂಗ್
Advertisement
Advertisement
ಧರ್ಮ ಪ್ರೊಡಕ್ಷನ್ಸ್ ‘ದಿ ಬುಲ್’ ಸಿನಿಮಾದಲ್ಲಿ ಸಲ್ಮಾನ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಇದರ ನಡುವೆ ತಮಿಳಿನ ನಿರ್ದೇಶಕ ಎ.ಆರ್ ಮುರುಗದಾಸ್ (A.R Murugadoss) ನಿರ್ದೇಶನದಲ್ಲಿ ಸಲ್ಮಾನ್ ನಟಿಸುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಮುಂದಿನ ವರ್ಷ ಈದ್ ಹಬ್ಬದ ವೇಳೆ, ಈ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.
Advertisement
ಎ. ಆರ್ ಮುರುಗದಾಸ್ ತಮಿಳಿನಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಈಗಾಗಲೇ ತಮ್ಮದೇ ಹಿಟ್ ಕಥೆಗಳನ್ನು ಬಾಲಿವುಡ್‌ನಲ್ಲಿ ರೀಮೆಕ್ ಮಾಡಿ ಗೆದ್ದಿದ್ದಾರೆ. ಇದೀಗ ಮತ್ತೆ ಹಿಂದಿ ಚಿತ್ರರಂಗಕ್ಕೆ ಹೋಗುತ್ತಿದ್ದಾರೆ. ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನಲಾಗ್ತಿದೆ. ಸಲ್ಮಾನ್ ಚಿತ್ರಕ್ಕೆ ಸಾಜಿದ್ ನಾಡಿಯಾಡ್ವಾಲಾ ಈ ಚಿತ್ರಕ್ಕೆ ಬಂಡವಾಳ ಹೂಡುವುದಾಗಿ ಚರ್ಚೆ ನಡೀತಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್‌ಗೆ ಮುರುಗದಾಸ್ ಮತ್ತೆ ಹಿಟ್ ಕೊಡ್ತಾರಾ? ಎನ್ನುವ ನಿರೀಕ್ಷೆ ಶುರುವಾಗಿದೆ.