ಮುಂಬೈ: ಸಲ್ಮಾನ್ ಖಾನ್ ಇತ್ತೀಚೆಗೆ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದು, ಚಿತ್ರದ ನಾಯಕಿ ಹಾಗೂ ಮಾಜಿ ಗೆಳತಿಯಾಗಿರುವ ಕತ್ರಿನಾ ಅವರಿಗೆ ಹತ್ತಿರವಾಗುತ್ತಾ ಲೂಲಿಯಾ ವಂಟೂರ್ ಅವರಿಗೆ ಕೊನೆಯ ಗುಡ್ ಬೈ ಹೇಳಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ.
ಈ ನಡುವೆ ಸಲ್ಮಾನ್ ಖಾನ್ ತಮ್ಮ ಮಾಜಿ ಗೆಳತಿ ಕತ್ರಿನಾ ಕೈಫ್ ಜೊತೆ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ ಎಂದು ಪ್ರತಿಕೆಯೊಂದು ವರದಿ ಮಾಡಿತ್ತು. ಸಲ್ಮಾನ್ ಬಗ್ಗೆ ಬಂದ ಎಲ್ಲಾ ರೂಮರ್ಸ್ ನಂಬಲೇಬೇಕು. ಲೂಲಿಯಾ ಭಾರತವನ್ನು ಬಿಟ್ಟು ಹೋಗುತ್ತಿರುವ ಕಾರಣ ಸಲ್ಮಾನ್ ಲೂಲಿಯಾಗೆ ಕೊನೆಯ ಬಾರಿ ಗುಡ್ ಬೈ ತಿಳಿಸಿದ್ದಾರೆ.
ಸಲ್ಮಾನ್ ಜೀವನದಲ್ಲಿ ಕತ್ರಿನಾ ಹಿಂತಿರುಗಿದ ನಂತರ ಲೂಲಿಯಾ ಮತ್ತು ಸಲ್ಮಾನ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾಹಿತಿಗಳು ಹೊರಬೀಳುತ್ತಿವೆ. ಸಲ್ಮಾನ್ ಸ್ನೇಹಿತರೊಬ್ಬರ ಪ್ರಕಾರ ಕತ್ರಿನಾ ಮತ್ತು ಲೂಲಿಯಾ ನಡುವೆ ವೈಮನಸ್ಸು ಉಂಟಾಗಿದೆ ಎಂಬ ವಿಷಯವನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾಸಗಿ ಜೀವನದಿಂದ ಕಾಣೆಯಾದ ಮಾಜಿ ಗೆಳತಿ
ಕತ್ರಿನಾ ತಮ್ಮ ಹಳೆಯ ಬಾಯ್ ಫ್ರೆಂಡ್ ರಣ್‍ಬೀರ್ ಕಪೂರ್ ಜೊತೆ ಬ್ರೇಕ್ ಅಪ್ ಆಗಿತ್ತು. ಇತ್ತೀಚಿನೆ ಕೆಲವು ದಿನಗಳಲ್ಲಿ ಕತ್ರಿನಾರ ಕೆರಿಯರ್ ಹಾಗೂ ಅವರ ಜೀವನದ ಬಗ್ಗೆ ಸಲ್ಮಾನ್ ಸಾಕಷ್ಟು ಕಾಳಜಿಯನ್ನು ತೋರಿಸುತ್ತಿದ್ದಾರೆ. ಟೈಗರ್ ಜಿಂದಾ ಹೈ ಚಿತ್ರದ ಶೂಟಿಂಗ್ ವೇಳೆ ಕತ್ರಿನಾ ಮತ್ತು ಸಲ್ಮಾನ್ ಗೆ ಹತ್ತಿರವಾಗುತ್ತಿದ್ದಾರೆ.
ಸಲ್ಮಾನ್ ‘ಟೈಗರ್ ಜಿಂದಾ ಹೈ’ ಚಿತ್ರವನ್ನು ಅಬುದಾಭಿಯಲ್ಲಿ ಶೂಟಿಂಗ್ ನಡೆಯುತ್ತಿರುವಾಗ ಲೂಲಿಯಾ ಅಲ್ಲಗೆ ಹೋಗಲು ಸಿದ್ಧರಾಗಿದ್ದರು. ಆದರೆ ಲೂಲಿಯಾ ಅಬುದಾಭಿಗೆ ಬರುವುದನ್ನು ಸಲ್ಮಾನ್ ತಡೆದಿದ್ದರು.
ಇದನ್ನೂ ಓದಿ: 2-3 ವರ್ಷಗಳಲ್ಲಿ ನಾನು ತಂದೆಯಾಗಲಿದ್ದೇನೆ: ಸಲ್ಮಾನ್ ಖಾನ್!