ತನ್ನ ನೆಚ್ಚಿನ ನಟಿ ಯಾರೆಂದು ಹೇಳಿ ಮುಗುಳ್ನಕ್ಕ ಸಲ್ಮಾನ್ ಖಾನ್

Public TV
2 Min Read
salman khan dus ka dum

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಸಿನಿಮಾಗಳ ಚಿತ್ರೀಕರಣದಲ್ಲಿ ಸಖತ್ ಬ್ಯೂಸಿ ಆಗಿದ್ದರೂ, ಕಿರುತೆರೆಯಲ್ಲಿಯೂ ರಿಯಾಲಿಟಿ ಶೋಗಳ ನಿರೂಪಣೆಯನ್ನು ಮಾಡುತ್ತಿದ್ದಾರೆ. ಖಾಸಗಿ ಚಾನೆಲ್ ನ ಕಾರ್ಯಕ್ರಮದ ನಿರೂಪಣೆ ವೇಳೆ ಸಲ್ಮಾನ್ ಸದ್ಯದ ತಮ್ಮ ನೆಚ್ಚಿನ ನಟಿ ಯಾರೆಂದು ಹೇಳಿ ನಾಚಿ ನೀರಾಗಿದ್ದಾರೆ.

ಶನಿವಾರ ಪ್ರಸಾರವಾದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ನಟ ಧರ್ಮೇಂದ್ರ ಮತ್ತು ಪುತ್ರ ಬಾಬಿ ಡಿಯೋಲ್ ಆಗಮಿಸಿದ್ದರು. ಕಾರ್ಯಕ್ರಮದ ಮಧ್ಯದಲ್ಲಿ ಬಾಬಿ ಕೆಲವ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. ಈ ಹಿಂದೆ ಮತ್ತು ಇಂದು ನಿಮ್ಮ ನೆಚ್ಚಿನ ನಟಿ ಯಾರೆಂದು ಪ್ರಶ್ನಿಸಿದರು. ಮಧುಬಾಲಾ ನನ್ನ ನೆಚ್ಚಿನ ನಟಿ, ಇಂದು ಎಲ್ಲರಿಗೂ ಇಷ್ಟವಾಗುತ್ತಿರುವ ಕತ್ರಿನಾ ಕೈಫ್ ಅಚ್ಚುಮೆಚ್ಚಿನ ನಟಿ ಎಂದು ಹೇಳಿ ಮುಗಳ್ನಕ್ಕರು.

Salman katrina lulia 3

ಸಲ್ಮಾನ್ ಮತ್ತು ಕತ್ರಿನಾ ಮದುವೆ ಆಗಲಿದ್ದಾರೆ ಎಂಬ ಸುದ್ದಿಯೊಂದು ಬಹಳ ವರ್ಷಗಳ ಹಿಂದೆ ಹರಿದಾಡುತ್ತಿತ್ತು. ವೈಯಕ್ತಿಕ ಕಾರಣಗಳಿಂದ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಬ್ರೇಕಪ್ ಬಳಿಕ ಸಲ್ಮಾನ್ ಹೆಸರು ರೋಮ್ಯಾನಿಯಾ ಬೆಡಗಿ ಲುಲಿಯಾ ವಂಟೂರ್ ಜೊತೆ ಕೇಳ ಬರತೊಡಗಿತು. ಇತ್ತ ಕತ್ರಿನಾ ಹೆಸರು ಸಹ ರಣ್‍ಬೀರ್ ಕಪೂರ್ ಜೊತೆ ಕೇಳಿ ಬಂತು. ಇದಕ್ಕೆ ಸಾಕ್ಷಿ ಎಂಬಂತೆ ಕತ್ರಿನಾ ಮತ್ತು ರಣ್‍ಬೀರ್ ನಡುವಿನ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ರೋಮ್ಯಾನಿಯಾ ತೊರೆದು ಭಾರತಕ್ಕೆ ಬಂದಿರುವ ಲುಲಿಯಾ ಸಹ ಸಲ್ಮಾನ್ ಮತ್ತು ಕುಟುಂಬಸ್ಥರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

08 08 2018 sl dum de 1 18293982 124028219

ಬ್ರೇಕಪ್ ಬಳಿಕ ಕತ್ರಿನಾ ‘ಬಾಡಿಗಾರ್ಡ್’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸಲ್ಮಾನ್ ಜೊತೆ ಹೆಜ್ಜೆ ಹಾಕಿದ್ದರು. ಬಾಡಿಗಾರ್ಡ್ ನಂತರ ‘ಏಕ್ ಥಾ ಟೈಗರ್’ ನಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದರು. ಸಿನಿಮಾ ಸಹ ಬಾಕ್ಸ್ ಆಫೀಸ್ ನ್ನು ಕೊಳ್ಳೆ ಹೊಡೆದಿತ್ತು. ಇದಾದ ಬಳಿಕ ಸಲ್ಮಾನ್ ಮತ್ತು ಕತ್ರಿನಾ ಹತ್ತಿರ ಆಗುತ್ತಿದ್ದಾರೆಂದು ಎಂಬ ಗಾಸಿಪ್ ಬಾಲಿವುಡ್ ಅಂಗಳದಲ್ಲಿ ಹರಿದಾಡಲಾರಂಭಿಸಿತು. ಏಕ್ ಥಾ ಟೈಗರ್ ಸೂಪರ್ ಹಿಟ್ ಆದ ಬಳಿಕ ‘ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಕತ್ರಿನಾ ಜೊತೆಯಾದ್ರು.

ಟೈಗರ್ ಜಿಂದಾ ಹೈ ಚಿತ್ರದ ಚಿತ್ರೀಕರಣ ವಿದೇಶದಲ್ಲಿ ನಡೆದಿದ್ದರಿಂದ ಸಲ್ಮಾನ್ ಮತ್ತು ಕತ್ರಿನಾ ಖಾಸಗಿಯಾಗಿ ಸಾಕಷ್ಟು ಸಮಯ ಜೊತೆಯಾಗಿ ಕಳೆದಿದ್ದರಿಂದ ಇಬ್ಬರ ನಡುವಿನ ಮುನಿಸು ಮಾಯವಾಗಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಲುಲಿಯಾ ವಂಟೂರ್ ದೂರ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸಲ್ಮಾನ್ ಮತ್ತು ಕತ್ರಿನಾ ಮತ್ತೊಮ್ಮೆ ‘ಭಾರತ್’ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಭಾರತ್ ಮುಂದಿನ ವರ್ಷ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *