‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾವನ್ನ ಕರಣ್ ಜೋಹರ್ (Karan Johar) ನಿರ್ದೇಶನ ಮಾಡಿದ್ದರು. ರಣ್‌ವೀರ್-ಆಲಿಯಾಗೆ (Alia Bhatt) ಆ್ಯಕ್ಷನ್ ಕಟ್ ಹೇಳಿದ್ದರು. ಸಿನಿಮಾ ಈಗ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದೇ ಖುಷಿಯಲ್ಲಿ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಜೊತೆ ಸಿನಿಮಾ ಮಾಡಲು ಕರಣ್ ಮುಂದಾಗಿದ್ದಾರೆ.
‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಸೋಲಿನಿಂದ ತತ್ತರಿಸಿರೋ ಸಲ್ಲು ಬಾಯ್‌ಗೆ ಬಿಗ್ ಬ್ರೇಕ್ ಬೇಕಾಗಿದೆ. ಹಾಗಾಗಿ ಕರಣ್ ಜೋಹರ್ ನಿರ್ಮಾಣದ ಸಿನಿಮಾದಲ್ಲಿ ಸಲ್ಲು ನಟಿಸಲು ಓಕೆ ಎಂದಿದ್ದಾರೆ. 1988ರ ‘ಕುಚ್ ಕುಚ್ ಹೋತಾ ಹೈ’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದರು. ಇದೀಗ ಹಲವು ವರ್ಷಗಳ ನಂತರ ಕರಣ್ ಜೋಹರ್ ನಿರ್ಮಾಣದಲ್ಲಿ ಸಿನಿಮಾ ಮಾಡಲು ಸಲ್ಲು ಮನಸ್ಸು ಮಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಸ್ಪಂದನಾರನ್ನ ನೋಡಬೇಕು ಎಂದು ಕಣ್ಣೀರಿಟ್ಟಿದ್ದರು ಚಿನ್ನಾರಿಮುತ್ತ ವಿಜಯ್
ಸಲ್ಮಾನ್- ಕರಣ್ ಚಿತ್ರಕ್ಕೆ ನಿರ್ದೇಶಕ ವಿಷ್ಣು ವರ್ಧನ್ (Vishnuvardhan) ಅವರು ನಿರ್ದೇಶನ ಮಾಡ್ತೀದ್ದಾರೆ. 2021ರಲ್ಲಿ ಸೂಪರ್ ಹಿಟ್ ಸಿನಿಮಾ ‘ಶೇರ್ಷಾʼ ಚಿತ್ರವನ್ನು ವಿಷ್ಣು ವರ್ಧನ್ ನಿರ್ದೇಶನ ಮಾಡಿದ್ದರು. ಕಳೆದ ಆರು ತಿಂಗಳಿಂದ ಈ ಸಿನಿಮಾದ ಮಾತುಕತೆ ನಡೆಯುತ್ತಲೇ ಇತ್ತು. ಕೊನೆಗೂ ಈ ಚಿತ್ರದಲ್ಲಿ ನಟಿಸಲು ಸಲ್ಮಾನ್ ಖಾನ್ ಅವರು ಒಪ್ಪಿದ್ದಾರೆ.
ಈ ಚಿತ್ರದ ಶೂಟಿಂಗ್ ಈ ವರ್ಷ ನವೆಂಬರ್‌ನಿಂದ ಆರಂಭ ಆಗಲಿದೆ. ಒಟ್ಟೂ 8 ತಿಂಗಳು ಈ ಚಿತ್ರಕ್ಕಾಗಿ ಸಲ್ಮಾನ್ ಖಾನ್ ಸಮಯ ಮೀಸಲಿಡಲಿದ್ದಾರೆ ಎನ್ನಲಾಗಿದೆ. 2024ರ ಕ್ರಿಸ್‌ಮಸ್‌ಗೆ ಚಿತ್ರ ರಿಲೀಸ್ ಆಗಲಿದೆ. ಮೊದಲೇ ಕರಣ್, ರೊಮ್ಯಾಂಟಿಕ್- ಆ್ಯಕ್ಷನ್ ಸಿನಿಮಾ ಮಾಡ್ರೋದಲ್ಲಿ ಎತ್ತಿದ ಕೈ. ಈ ಸಿನಿಮಾ ಮೂಲಕ ಭಿನ್ನ ಕಥೆಯನ್ನೇ ನಿರ್ದೇಶಕರು ತೆರೆಯ ಮೇಲೆ ತೋರಿಸಲಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]