ಸಲ್ಮಾನ್ ಖಾನ್ (Salman Khan) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಬಹುನಿರೀಕ್ಷಿತ ‘ಸಿಕಂದರ್’ (Sikandar) ಚಿತ್ರ ರಿಲೀಸ್ ಸಜ್ಜಾಗಿದೆ. ಈ ಹಿನ್ನೆಲೆ ಸಿನಿಮಾದ ಕಲರ್‌ಫುಲ್ ಸಾಂಗ್‌ವೊಂದನ್ನು ಚಿತ್ರತಂಡ ರಿಲೀಸ್ ಮಾಡಿದೆ. ಹೋಳಿ ಹಬ್ಬದ ಕುರಿತಾದ ಹಾಡಿನಲ್ಲಿ ಸಲ್ಮಾನ್ ಜೊತೆ ‘ಪುಷ್ಪ 2’ (Pushpa 2) ಬೆಡಗಿ ರಶ್ಮಿಕಾ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ.
‘ಬಂಬಂ ಬೋಲೆ’ ಎಂಬ ಹೋಳಿ ಹಬ್ಬದ ಕಲರ್‌ಫುಲ್ ಸಾಂಗ್ ರಿಲೀಸ್ ಆಗಿದೆ. ಸಲ್ಮಾನ್ ಮತ್ತು ರಶ್ಮಿಕಾ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ಸಾಂಗ್‌ನಲ್ಲಿ ಕಾಜಲ್ ಅಗರ್‌ವಾಲ್ (Kajal Aggarwal) ಲುಕ್ ಕೂಡ ಅನಾವರಣ ಆಗಿದೆ. ಸಾಂಪ್ರದಾಯಿಕ ಲುಕ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ಕಾಜಲ್ ಪಾತ್ರದ ಬಗ್ಗೆ ಚರ್ಚೆ ಶುರುವಾಗಿದೆ. ಸಲ್ಮಾನ್‌ಗೆ ರಶ್ಮಿಕಾ ಒಬ್ಬಳೇ ನಾಯಕಿನಾ? ಅಥವಾ ಕಾಜಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಾ? ಎಂದೆಲ್ಲಾ ಫ್ಯಾನ್ಸ್ ಸಿನಿಮಾದ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ.
ಈ ಚಿತ್ರವನ್ನು ಎ.ಆರ್ ಮುರುಗದಾಸ್ ನಿರ್ದೇಶನ ಮಾಡಿದ್ದಾರೆ. ಸಾಜಿದ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಇನ್ನೂ ‘ಸಿಕಂದರ್’ ಚಿತ್ರದ ಟೀಸರ್, ಸಾಂಗ್ಸ್ ಎಲ್ಲವೂ ಫ್ಯಾನ್ಸ್‌ಗೆ ಮೆಚ್ಚುಗೆ ಆಗಿದೆ. ಈ ವರ್ಷ ಈದ್ ಹಬ್ಬದಂದು ಸಿನಿಮಾ ರಿಲೀಸ್‌ಗೆ ತಂಡ ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ:ದರ್ಶನ್ ಯಾವತ್ತಿದ್ರೂ ನನ್ನ ಮಗ: ತಾಯಿ, ಮಗನ ಸಂಬಂಧದಲ್ಲಿ ವಿವಾದ ಸೃಷ್ಟಿಸಬೇಡಿ ಎಂದ ಸುಮಲತಾ
ಇನ್ನೂ ಮೊದಲ ಬಾರಿಗೆ ಸಲ್ಮಾನ್ ಜೊತೆ ರಶ್ಮಿಕಾ ನಟಿಸಿರೋ ಕಾರಣ ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಇತ್ತೀಚಿಗೆ ರಶ್ಮಿಕಾ ನಟಿಸಿದ ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳು ಸೂಪರ್ ಸಕ್ಸಸ್ ಕಂಡಿದೆ. ಹಾಗಾಗಿ ‘ಸಿಕಂದರ್’ ಭವಿಷ್ಯ ಎನಾಗುತ್ತೆ ಎಂದು ಕಾಯಬೇಕಿದೆ.