ಬೆದರಿಕೆಯ ನಡುವೆಯೂ ರಶ್ಮಿಕಾ ಜೊತೆ ಶೂಟಿಂಗ್‌ನಲ್ಲಿ ಸಲ್ಮಾನ್ ಖಾನ್ ಬ್ಯುಸಿ

Public TV
3 Min Read
rashmika mandanna

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಬೆದರಿಕೆಯ ನಡುವೆಯೂ ‘ಸಿಖಂದರ್’ (Sikandar) ಸಿನಿಮಾದ ಶೂಟಿಂಗ್‌ನಲ್ಲಿ ಸಲ್ಮಾನ್ ಖಾನ್ ತೊಡಗಿಸಿಕೊಂಡಿದ್ದಾರೆ. ರಶ್ಮಿಕಾ (Rashmika Mandanna) ಜೊತೆ ಹೈದರಾಬಾದ್‌ನಲ್ಲಿ ಸಲ್ಮಾನ್ (Salman Khan) ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

Salman Khan 1ಹೈದರಾಬಾದ್‌ನ ಫಲಕ್ನುಮಾ ಪ್ಯಾಲೇಸ್‌ನಲ್ಲಿ ‘ಸಿಖಂದರ್’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಪ್ರಮುಖ ಪಾತ್ರಧಾರಿಗಳಾದ ಸಲ್ಮಾನ್, ರಶ್ಮಿಕಾ ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸೆಟ್‌ನಲ್ಲಿರುವ ಸಲ್ಮಾನ್ ಮತ್ತು ರಶ್ಮಿಕಾ ಕೆಲ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್‌ಗೆ ಕೊಲೆ ಬೆದರಿಕೆ ಇರೋ ಹಿನ್ನೆಲೆ ಸಲ್ಮಾನ್, ರಶ್ಮಿಕಾ ಸೇರಿದಂತೆ ಎಲ್ಲರಿಗೂ ಬಿಗಿ ಭದ್ರತೆ ಕೊಡಲಾಗಿದೆ. ಭದ್ರತೆಯೊಂದಿಗೆ ಶೂಟಿಂಗ್ ಮಾಡಲಾಗುತ್ತಿದೆ. ಇದನ್ನೂ ಓದಿ:ಬಿಟ್ಟಿ ಸಲಹೆ ಕೊಟ್ಟ ನೆಟ್ಟಿಗನಿಗೆ ಸಮಂತಾ ತಿರುಗೇಟು

ಇನ್ನೂ ಮೊದಲ ಬಾರಿಗೆ ಸಲ್ಮಾನ್‌ಗೆ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ಇಬ್ಬರ ನಡುವೆ ವಯಸ್ಸಿನ ಅಂತರ ಕೂಡ ಹೆಚ್ಚಿದೆ. ಈ ಬಗ್ಗೆ ಟ್ರೋಲ್ ಕೂಡ ಆಗಿತ್ತು. ಹಾಗಾಗಿ ಸಿನಿಮಾ ಬಗ್ಗೆ ಫ್ಯಾನ್ಸ್‌ಗೆ ನಿರೀಕ್ಷೆಯಿದೆ. ಇಬ್ಬರ ಕಾಂಬಿನೇಷನ್ ತೆರೆಯ ಮೇಲೆ ನೋಡಲು ಕಾತರದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.

Share This Article