ಬಾಲಿವುಡ್‌ನಲ್ಲಿ ಸ್ಟಾರ್ ನಟರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಾಗಾಗಿ ಇತ್ತೀಚೆಗೆ ಅರ್ಜಾಜ್ ಖಾನ್- ಮಲೈಕಾ ಅರೋರಾ ಪುತ್ರ ಅರ್ಹಾನ್ (Arhaan Khan) ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಸುದ್ದಿಯಾಗಿತ್ತು. ಅರ್ಹಾನ್‌ರನ್ನು ಸಲ್ಮಾನ್ ಖಾನ್ (Salman Khan) ಲಾಂಚ್ ಮಾಡ್ತಾರೆ ಎಂದೇ ಹೇಳಲಾಗಿತ್ತು. ಈ ಕುರಿತು ಸ್ವತಃ ನಟ ಅರ್ಬಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:‘ಓ ಮೈ ಲಿಲ್ಲಿ’ ಎಂದು ಅನುಪಮಾ ಜೊತೆ ಸಿದ್ದು ಡ್ಯುಯೇಟ್
ಈಗಾಗಲೇ ಶಾರುಖ್ ಖಾನ್ ಪುತ್ರಿ ಸುಹಾನಾ, ಸೈಫ್ ಪುತ್ರ ಇಬ್ರಾಹಿಂ, ಶ್ರೀದೇವಿ ಪುತ್ರಿ ಖುಷಿ ಕಪೂರ್ ಸೇರಿದಂತೆ ಅನೇಕ ಸ್ಟಾರ್ ಕಲಾವಿದರ ಮಕ್ಕಳು ಬಿಟೌನ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಹಾಗಾಗಿ ಸಹಜವಾಗಿ ಅರ್ಬಾಜ್ ಖಾನ್ ಮಗನ ಎಂಟ್ರಿಯ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.

ಅರ್ಹಾನ್ ಖಾನ್ ಅಮೆರಿಕಾದಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿದ್ದಾರೆ. ಚಿತ್ರರಂಗಕ್ಕೆ ಬರೋದಕ್ಕೆ ಅರ್ಹಾನ್ ದೇಹ ದಂಡಿಸುತ್ತಿದ್ದಾರೆ. ವಿವಿಧ ರೀತಿಯಲ್ಲಿ ತೆರೆಮರೆಯಲ್ಲಿ ತಯಾರಿ ಮಾಡುತ್ತಿದ್ದಾರೆ.


