– ದಬಾಂಗ್-3 ಚಿತ್ರದ ಸುದೀಪ್ ಲುಕ್ ರಿವೀಲ್
ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ‘ದಬಾಂಗ್-3’ ಚಿತ್ರದಲ್ಲಿ ನಟಿಸಿದ ಕಿಚ್ಚ ಸುದೀಪ್ ಅವರ ಹೊಸ ಲುಕ್ ರಿವೀಲ್ ಮಾಡಿದ್ದಾರೆ.
ಸಲ್ಮಾನ್ ಅವರು ತಮ್ಮ ಟ್ವಿಟ್ಟರಿನಲ್ಲಿ ಸುದೀಪ್ ಅವರ ಫಸ್ಟ್ ಲುಕ್ ಟ್ವೀಟ್ ಮಾಡಿ ಅದಕ್ಕೆ, “ವಿಲನ್ ಎಷ್ಟೇ ಶಕ್ತಿಶಾಲಿ ಆಗಿರುತ್ತಾನೋ, ಅವನ ಜೊತೆ ಹೋರಾಡಲು ಅಷ್ಟೇ ಮಜಾ ಸಿಗುತ್ತದೆ. ದಬಾಂಗ್-3 ಚಿತ್ರದಲ್ಲಿ ಬಾಲಿ ಪಾತ್ರದಲ್ಲಿ ನಟಿಸಿದ ಕಿಚ್ಚ ಸುದೀಪ್‍ರನ್ನು ಪರಿಚಯಿಸುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.
Advertisement
Villain jitna bada ho, usse bhidne mein utna hi mazaa aata hai.
Introducing Sudeep Kiccha as Balli in 'Dabangg 3'.#KicchaSudeepInDabangg3@KicchaSudeep @arbaazSkhan @sonakshisinha @saieemmanjrekar @PDdancing @nikhil_dwivedi @SKFilmsOfficial @saffronbrdmedia pic.twitter.com/vvZYvroHYF
— Salman Khan (@BeingSalmanKhan) October 8, 2019
Advertisement
ಈ ಟ್ವೀಟ್‍ಗೆ ಸುದೀಪ್, “ಹೋರಾಡುವ ಮಾತೇ ಬರುವುದಿಲ್ಲ ಸರ್. ಏಕೆಂದರೆ ವಿಲನ್‍ಗೆ ಹೀರೋ ಮೇಲೆ ಪ್ರೀತಿ ಆಗುತ್ತದೆ. ನಿಮ್ಮ ಜೊತೆ ಕೆಲಸ ಮಾಡಿದ್ದು ನನಗೆ ಖುಷಿ ತಂದಿದೆ. ನಿಮ್ಮ ಜೊತೆ ಹಂಚಿಕೊಂಡ ಎಲ್ಲ ಕ್ಷಣಗಳು ಅಮೂಲ್ಯವಾದದ್ದು” ಎಂದು ರೀ-ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
Advertisement
This's one sch moment where BHIDNE ki baath hi nahi aatha hai SIR. Problem yeh hai ki villan ko tho hero se pyaar ho jatha hai.????
Its been Wondeful working n sharing space. All the moments shared are priceless n Wil be Treasured.
Thank u @BeingSalmanKhan sir????????????????????.
BalliSingh. https://t.co/srJ1x1Uo2N
— Kichcha Sudeepa (@KicchaSudeep) October 8, 2019
Advertisement
ಇದಲ್ಲದೇ ಸುದೀಪ್ ಅವರು ದಬಾಂಗ್-3 ಚಿತ್ರದ ಕನ್ನಡ ಹಾಗೂ ಹಿಂದಿಯಲ್ಲಿರುವ ಫಸ್ಟ್ ಲುಕ್ ಟ್ವೀಟ್ ಮಾಡಿದ್ದಾರೆ. “ಬಾಲಿ ಸಿಂಗ್‍ನನ್ನು ಪರಿಚಯಿಸುತ್ತಿದ್ದೇನೆ. ಈ ಚಿತ್ರ 2019 ಕ್ರಿಸ್‍ಮಸ್ ಹಬ್ಬದಂದು ಬಿಡುಗಡೆಯಾಗಲಿದೆ. ಪ್ರಭುದೇವ ಸರ್ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.
Presenting Balli Singh.#Dabangg3
Christmas 2019 release.
Thank u Prabhu sir n th whole team for ur wonderful hospitality n gestures.
Mch luv n hugs to all. ???????????????????????? pic.twitter.com/AI0WJVPjE6
— Kichcha Sudeepa (@KicchaSudeep) October 8, 2019
ಸುದೀಪ್ ದಬಾಂಗ್- 3 ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಲಿದ್ದು, ಈ ಪಾತ್ರ ಹೀರೋ ಪಾತ್ರಕ್ಕೆ ಇರುವಷ್ಟೇ ಸಮಾನ ಪ್ರಾಮುಖ್ಯತೆಯನ್ನು ಹೊಂದಿದೆ. ಸಲ್ಮಾನ್ ಖಾನ್ ಮತ್ತು ಅರ್ಬಾಜ್ ಖಾನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ.