ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಯಾವಾಗಲೂ ತಮ್ಮ ಟೆರರ್ ಮಾತು, ಕೋಪಕ್ಕೆ ಬಿ’ಟೌನ್‌ನಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಮಾಧ್ಯಮ ಪ್ರತಿನಿಧಿಗಳಿಗೆ ಯಾವಾಗಲೂ ಸಿಡಿ-ಸಿಡಿ ಎನ್ನುವ ಸಲ್ಲು, ಆ ಕಾರಣಕ್ಕಾಗಿಯೇ ಟ್ರೋಲ್‌ಗೆ ಗುರಿ ಆಗುತ್ತಾರೆ. ಈಗ ಪತ್ರಕರ್ತರ ಫೋನ್ ಕಿತ್ತುಕೊಂಡಿದ್ದಕ್ಕೆ ಸಲ್ಲುಭಾಯ್ ಬಾಂಬೆ ಹೈಕೋರ್ಟ್ ನಲ್ಲಿ ನಿಲ್ಲುವಂತಾಗಿದೆ.
ಸಲ್ಮಾನ್‌ಗೆ ಕಾನೂನು ಸಂಬಂಧಿಸಿ ತೊಂದರೆಗಳು ಎಂದಿಗೂ ಮುಗಿಯುವುದಿಲ್ಲ ಎನ್ನುವಂತೆ ಇತ್ತೀಚೆಗಷ್ಟೇ ತಮ್ಮ ಪನ್ವೆಲ್ ಫಾರ್ಮ್‍ಹೌಸ್ ಮತ್ತು ಕೃಷ್ಣಮೃಗ ಪ್ರಕರಣದಲ್ಲಿ ಸಲ್ಲು ಸಿಲುಕಿಕೊಂಡಿದ್ದರು. ಈ ಮಧ್ಯೆ ಮತ್ತೊಂದು ಕಾನೂನು ವಿವಾದ ಇವರಿಗೆ ತಳಕು ಹಾಕಿಕೊಂಡಿದೆ. ಸಲ್ಲು 2019ರಲ್ಲಿ ಪತ್ರಕರ್ತರ ಫೋನ್ ಕಿತ್ತುಕೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸಲ್ಮಾನ್ ಅವರನ್ನು ಏಪ್ರಿಲ್ 5 ರಂದು ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕೋರ್ಟ್ ಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್
Advertisement
Advertisement
ಮುಂಬೈನ ಅಂಧೇರಿಯಲ್ಲಿರುವ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರಾಗುವುದನ್ನು ತಪ್ಪಿಸಿಕೊಳ್ಳಲು ಸಲ್ಲು ತನಗೆ ನೀಡಲಾದ ಸಮನ್ಸ್ ವಿರುದ್ಧ ಬಾಂಬೆ ಹೈಕೋರ್ಟ್ ಗೆ ಮೊರೆ ಹೋಗಿದ್ದಾರೆ. 2019ರಲ್ಲಿ ಪತ್ರಕರ್ತರು ನೀಡಿದ ದೂರಿನ ಮೇರೆಗೆ ಸಲ್ಮಾನ್ ಹಾಗೂ ಅವರ ಅಂಗರಕ್ಷಕ ನವಾಜ್ ಶೇಖ್‌ಗೆ ‘ಸಮನ್ಸ್’ ನೀಡಲಾಗಿದೆ.
Advertisement
Advertisement
ನಿಜವಾಗಲು ನಡೆದಿದ್ದೇನು?
ಮುಂಬೈನ ಬೀದಿಗಳಲ್ಲಿ ಸಲ್ಮಾನ್ ಖಾನ್ ಸೈಕಲ್ ಸವಾರಿ ಮಾಡುತ್ತಿದ್ದಾಗ ಮಾಧ್ಯಮಗಳು ಫೋಟೋ ಸೆರೆ ಹಿಡಿಯಲು ಪ್ರಯತ್ನಿಸಿದ್ದವು. ಇದರಿಂದ ಕೋಪಗೊಂಡಿದ್ದ ಸಲ್ಲು ಮಾಧ್ಯಮದವರ ಜೊತೆ ತೀವ್ರ ವಾಗ್ವಾದಕ್ಕಿಳಿದರು. ಈ ವೇಳೆ ಪತ್ರಕರ್ತರ ಮೊಬೈಲ್ ಕಸಿದುಕೊಂಡಿದ್ದಾರೆ ಎನ್ನಲಾಗಿದೆ.
ನಗರದ ಡಿಎನ್ ನಗರ ಪೊಲೀಸ್ ಠಾಣೆಯಿಂದ ಈ ವಿಷಯ ಬೆಳಕಿಗೆ ಬಂದಿದ್ದು, ಈ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ವರದಿಯನ್ನು ಸಲ್ಲಿಸಿದ್ದಾರೆ. ಘಟನೆಯ ದಿನದಂದು ದೂರುದಾರರು ಮತ್ತು ಸಲ್ಮಾನ್, ನವಾಜ್ ಶೇಖ್ ನಡುವೆ ವಾಗ್ವಾದ ಸಂಭವಿಸಿದೆ. ಈ ವೇಳೆ ಸಲ್ಮಾನ್, ನವಾಜ್ ಶೇಖ್ ವರದಿಗಾರರ ಫೋನ್ ಕಿತ್ತುಕೊಂಡಿದ್ದಾರೆ ಎಂದು ವರದಿ ಮಾಡಿದ್ದಾರೆ. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ
ತನಿಖಾಧಿಕಾರಿಯು ಸೆಕ್ಷನ್ 504(ಉದ್ದೇಶಪೂರ್ವಕವಾಗಿ), 506(ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ. ಹಾಗಾಗಿ ಸಲ್ಮಾನ್ ಖಾನ್ ಬಾಂಬೆ ಹೈಕೋರ್ಟ್ ಸಂಪರ್ಕಿಸುವಂತೆ ಮಾಡಿದೆ.