BollywoodCinemaLatestMain Post

ಬ್ಯಾಡ್ ಬಾಯ್ ಅಡ್ಡಾದಲ್ಲಿ `ಪುಷ್ಪ’ ಮ್ಯೂಸಿಕ್ ಡೈರೆಕ್ಟರ್

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ನಟನೆಯ `ಕಭಿ ಈದ್ ಕಭಿ ದಿವಾಲಿ’ ಚಿತ್ರದ ಶೂಟಿಂಗ್‌ಗೆ ಸಜ್ಜಾಗಿದ್ದಾರೆ. `ಪುಷ್ಪ’ ಚಿತ್ರದ ಮ್ಯೂಸಿಕ್ ಮೂಲಕ ಮೋಡಿ ಮಾಡಿದ್ದ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಇದೀಗ ಈ ಚಿತ್ರತಂಡಕ್ಕೆ ಸಾಥ್ ಕೊಡ್ತಿದ್ದಾರೆ.

ಫರ್ಹಾದ್ ಸಮ್ಜಿ ನಿರ್ದೇಶನದಲ್ಲಿ ಮೂಡಿ ಬರಲಿರುವ `ಕಭಿ ಈದ್ ಕಭಿ ದಿವಾಲಿ’ ಚಿತ್ರ ಶೂಟಿಂಗ್‌ಗೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ. ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಲಿದ್ದು, ಚಿತ್ರಕ್ಕೆ `ಪುಷ್ಪ’ ಖ್ಯಾತಿಯ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.

`ಕಭಿ ಈದ್ ಕಭಿ ದಿವಾಲಿ’ ಚಿತ್ರ ಫ್ಯಾಮಿಲಿ ಎಂಟರ್‌ಟೈನರ್ ಜತೆಗೆ ಆಕ್ಷನ್ ಸ್ಟೋರಿಯಾಗಿದ್ದು, ಇದೇ ಮೊದಲ ಬಾರಿಗೆ ನಟಿ ಪೂಜಾ ಹೆಗ್ಡೆ ಸಲ್ಮಾನ್ ಖಾನ್‌ಗೆ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಇನ್ನು ಚಿತ್ರಕ್ಕೆ ಮಣಿಕಂದನ್ ಛಾಯಾಗ್ರಹಣವಿರಲಿದೆ. ಇದನ್ನೂ ಓದಿ:ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಸೋನಮ್ ಮಿಂಚಿಂಗ್: ನಟಿಯ ಲುಕ್ಕಿಗೆ ಬಿಟೌನ್‌ ಸ್ಟಾರ್ಸ್‌ ಫಿದಾ

ಭಿನ್ನ ಕಂಟೆಂಟ್ ಜತೆಗೆ ಡಿಫರೆಂಟ್ ಟೈಟಲ್ ಹೊತ್ತು ಬರುತ್ತಿರುವ ಈ ಚಿತ್ರ ಡಿಸೆಂಬರ್ 30, 2022ಕ್ಕೆ ತೆರೆಗೆ ಅಪ್ಪಳಿಸಲಿದೆ. ವಿಭಿನ್ನ ಕಥೆ ಜತೆ ಬರುತ್ತಿರೋ ಸಲ್ಮಾನ್ ಮತ್ತು ಪೂಜಾ ಅವರನ್ನ ತೆರೆಯ ಮೇಲೆ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

Leave a Reply

Your email address will not be published.

Back to top button