ನವದೆಹಲಿ: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ 5 ವರ್ಷ ಶಿಕ್ಷೆಗೆ ಒಳಗಾಗಿದ್ದ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್‍ಗೆ ಕೊನೆಗೂ ಷರತ್ತು ಬದ್ಧ ಜಾಮೀನು ಸಿಕ್ಕಿದೆ.
ನ್ಯಾಯಾಧೀಶ ರವೀಂಧರ್ ಜೋಶಿ ಅವರು ಸಲ್ಮಾನ್ ಗೆ ಜಾಮೀನು ತೀರ್ಪು ನೀಡಿದ್ದಾರೆ. 50 ಸಾವಿರ ರೂ. ಎರಡು ಬಾಂಡ್ ಗಳನ್ನು ಸಲ್ಲಿಸಬೇಕು. 1998ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಸಿನಿಮಾದ ಚಿತ್ರೀಕರಣ ವೇಳೆ ಸಲ್ಮಾನ್ ಕೃಷ್ಣಮೃಗ ಬೇಟೆಯಾಡಿದ್ದರು. ಈ ಸಂಬಂಧ ಜೋಧಪುರ ಸಿಜೆಎಂ ಕೋರ್ಟ್ ಸಲ್ಮಾನ್ ದೋಷಿ ಅಂತಾ ಪರಿಗಣಿಸಿ, 10 ಸಾವಿರ ರೂ. ದಂಡ ಮತ್ತು 5 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು.
Advertisement
Advertisement
ಪ್ರಕರಣದ ಇತರೆ ಆರೋಪಿಗಳಾದ ಸೈಫ್ ಆಲಿ ಖಾನ್, ಟಬು, ನೀಲಂ, ಸೋನಾಲಿ ಬೇಂದ್ರೆ ಸೇರಿದಂತೆ 6 ಜನರನ್ನು ಕೋರ್ಟ್ ಖುಲಾಸೆಗೊಳಿಸಿ ಆದೇಶವನ್ನು ಹೊರಡಿಸಿತ್ತು. ಇಂದು ಸಂಜೆಯೊಳಗೆ ಎಲ್ಲ ಕಾನೂನು ನಿಯಮಗಳು ಪೂರ್ಣವಾದ್ರೆ ಸಲ್ಮಾನ್ ಇಂದೇ ಜೈಲಿನಿಂದ ಹೊರಬರಲಿದ್ದಾರೆ. ಇಲ್ಲವಾದಲ್ಲಿ ಸೋಮವಾರ ಸಲ್ಮಾನ್ ಜೈಲಿನಿಂದ ಹೊರಬರುವ ಸಾಧ್ಯತೆಗಳಿವೆ.
Advertisement
Salman Khan granted bail by Jodhpur Court in #BlackBuckPoachingCase pic.twitter.com/SvtyQk1RxY
— ANI (@ANI) April 7, 2018
Advertisement
Fans of #SalmanKhan gather outside his residence in Mumbai and celebrate following Jodhpur Court's verdict in #BlackBuckPaochingCase. The Court granted him bail in the case. pic.twitter.com/STrcQuihjY
— ANI (@ANI) April 7, 2018