ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!

1 Min Read
salman KHAN

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಹಾವು ಕಡಿದಿದ್ದು, ಅದೃಷ್ಟವಶಾತ್ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪಾನ್ವೆಲ್ ಫಾರ್ಮ್ ಹೌಸ್‍ನಲ್ಲಿ ಸಲ್ಮಾನ್ ಖಾನ್ ಅವರಿಗೆ ಹಾವು ಕಡಿದಿದೆ. ಈ ಹಾವು ವಿಷಕಾರಿ ಆಗಿರಲಿಲ್ಲ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಶನಿವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ನಟನನ್ನು ಚಿಕಿತ್ಸೆಗಾಗಿ ಕಾಮೋಥೆಯಲ್ಲಿರುವ ಎಂಜಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ನಂತರ ಬೆಳಗ್ಗೆ 9 ಗಂಟೆಗೆ ಅವರನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಈಗ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.  ಸಲ್ಮಾನ್ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ನಾಳೆ ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬ ಇರುವುರಿಂದ (ಡಿಸೆಂಬರ್ 27ಕ್ಕೆ) ಫಾರ್ಮ್‍ಹೌಸ್‍ಗೆ ತೆರಳಿದ್ದರು. ಸಲ್ಮಾನ್ ತನ್ನ ವಿಶೇಷ ದಿನವನ್ನು ಪನ್ವೆಲ್ ಫಾರ್ಮ್‍ಹೌಸ್‍ನಲ್ಲಿ ಕುಟುಂಬ ಸದಸ್ಯರು ಮತ್ತು ಕೆಲವು ಸ್ನೇಹಿತರೊಂದಿಗೆ ಆಚರಿಸಲಿದ್ದಾರೆ. ಸಲ್ಮಾನ್ ಅವರ ಫಾರ್ಮ್‍ಹೌಸ್ ಸಾಕಷ್ಟೂ ದೊಡ್ಡದಾಗಿದೆ. ಹಲವು ಪ್ರಭೇದದ ಪಕ್ಷಿಗಳು ಮತ್ತು ಪ್ರಾಣಿ, ಸಸ್ಯಗಳು ಫಾರ್ಮ್‍ಹೌಸ್‍ನಲ್ಲಿದೆ.

Share This Article
Exit mobile version