ಮುಂಬೈ: ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಇಂದು 56ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಸಲ್ಲು ಪ್ರಸ್ತುತ ತಮ್ಮ 56ನೇ ಹುಟ್ಟುಹಬ್ಬವನ್ನು ಆಚರಿಸಲು ಫಾರ್ಮ್‍ಹೌಸ್‍ನಲ್ಲಿದ್ದಾರೆ. ಕಳೆದ ವರ್ಷವೂ ಸಲ್ಲು ತಮ್ಮ ಹುಟ್ಟುಹಬ್ಬವನ್ನು ಪನ್ವೆಲ್‍ನಲ್ಲಿರುವ ಫಾರ್ಮ್‍ಹೌಸ್‍ನಲ್ಲಿ ಆಚರಿಸಿಕೊಂಡಿದ್ದರು. 2020 ರ ಲಾಕ್‍ಡೌನ್ ಸಮಯದಲ್ಲಿ, ಸಲ್ಮಾನ್ ಖಾನ್ ಫಾರ್ಮ್‍ಹೌಸ್‍ನಲ್ಲಿ ಎರಡು ಮ್ಯೂಸಿಕ್ ವೀಡಿಯೋಗಳನ್ನು ಚಿತ್ರೀಕರಿಸಿದ್ದರು. ಅದರಲ್ಲಿ ತೇರೆ ಬಿನಾ ಶೀರ್ಷಿಕೆಯ ಮತ್ತೊಂದು ಟ್ರ್ಯಾಕ್ ಇದ್ದು, ಆ ವೀಡಿಯೋದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!
ಶನಿವಾರ ರಾತ್ರಿ ಪನ್ವೇಲ್ ಬಳಿಯ ತಮ್ಮ ಫಾರ್ಮ್‍ಹೌಸ್‍ನಲ್ಲಿ ಸಲ್ಮಾನ್ ಖಾನ್ ಗೆ ವಿಷರಹಿತ ಹಾವು ಕಚ್ಚಿತ್ತು. ಹಾವು ಕಚ್ಚಿದ ನಂತರ, ಸಲ್ಲುನನ್ನು ತಕ್ಷಣವೇ ನವಿ ಮುಂಬೈನ ಕಾಮೋಥೆಯಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಭಾನುವಾರ ಬೆಳಗ್ಗೆ ಅವರು ಡಿಸ್ಚಾರ್ಜ್ ಆಗಿದ್ದು ರಾತ್ರಿ, ಸಲ್ಲು ತನ್ನ ಪನ್ವೆಲ್ ಫಾರ್ಮ್‍ಹೌಸ್‍ನಲ್ಲಿ ಕುಟುಂಬದವರೊಂದಿಗೆ 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
Thank you for all your lovely wishes, there are no words to describe how happy and blessed I feel.
This is why for my birthday," Aaj ki party meri taraf se!"
Enjoy FLAT 50% off on @myntra , your nearest @bebeinghuman store or https://t.co/3eWdlFytre! pic.twitter.com/PfxO96B9kA
— Salman Khan (@BeingSalmanKhan) December 26, 2021
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದು, ಶುಭಾಶಯ ಕೋರಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದವನ್ನು ತಿಳಿಸಿದ್ದಾರೆ.
ಸಲ್ಲುಗೆ ಡಾ.ಕುಲದೀಪ್ ಸಲ್ಗೋತ್ರಾ ಅವರು ಚಿಕಿತ್ಸೆ ನೀಡಿದ್ದು, ಎರಡು ವೈದ್ಯರ ತಂಡಗಳು ಸಲ್ಮಾನ್ ಖಾನ್ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದು, ಆರೋಗ್ಯ ಚೆನ್ನಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ: ಯೋಗಿ ಆದಿತ್ಯನಾಥ್
ಪ್ರಸ್ತುತ ರಿಯಾಲಿಟಿ ಶೋ ಬಿಗ್ ಬಾಸ್ 15 ರ ನಿರೂಪಕರಾಗಿ ಕಾಣಿಸಿಕೊಂಡಿರುವ ಸಲ್ಲು, ಮಹೇಶ್ ಮಂಜ್ರೇಕರ್ ನಿರ್ದೇಶಿಸಿದ ‘ಅಂತಿಮ್’ ಸಿನಿಮಾದಲ್ಲಿ ಕೊನೆಯ ಬಾರಿಗೆ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಸಲ್ಲು ಸೋದರ ಮಾವ ಆಯುಷ್ ಶರ್ಮಾ ಕೂಡ ನಟಿಸಿದ್ದರು.
ಇದೇ ವರ್ಷ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಸಿನಿಮಾದಲ್ಲಿಯೂ ಸಲ್ಲು ಕಾಣಿಸಿಕೊಂಡಿದ್ದು, ಈ ಸಿನಿಮಾದಲ್ಲಿ ದಿಶಾ ಪಟಾನಿ, ರಣದೀಪ್ ಹೂಡಾ ಮತ್ತು ಜಾಕಿ ಶ್ರಾಫ್ ನಟಿಸಿದ್ದಾರೆ. ‘ಕಿಕ್ 2’ ಚಿತ್ರದಲ್ಲಿ ಜಾಕ್ವೆಲಿನ್ ಫೆನಾರ್ಂಡಿಸ್ ಮತ್ತು ‘ಟೈಗರ್ 3’ ಕತ್ರಿನಾ ಕೈಫ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.