ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಟಿ ಭಾಗ್ಯ ಶ್ರೀ ಜೊತೆಯಾಗಿ ಅಭಿನಯಿಸಿದ್ದ ಮೈನೆ ಪ್ಯಾರ್ ಕಿಯಾ ಸಿನಿಮಾದ ಚಿತ್ರೀಕರಣದ ವೇಳೆ ಸಲ್ಲು ತುಟಿಗೆ ಮುತ್ತಿಡಲು ಭಾಗ್ಯ ಶ್ರೀ ಗಳಗಳನೇ ಅತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
Advertisement
ಪ್ರಸ್ತುತ ಬಾಲಿವುಡ್ ಸಿನಿಮಾಗಳಲ್ಲಿ ಕಿಸ್ಸಿಂಗ್ ದೃಶ್ಯಾವಳಿಗಳು ಸರ್ವೇ ಸಾಮಾನ್ಯವಾಗಿ ಹೋಗಿದೆ. ಹಿಂದಿನ ಕಾಲದಲ್ಲಿ ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯಾವಳಿಗಳಿದೆ ಎಂದರೆ ಎಷ್ಟೋ ನಟಿಯರು ಅಭಿನಯಿಸುವುದಿಲ್ಲ ಎಂದು ಸಿನಿಮಾವನ್ನೇ ರಿಜೆಕ್ಟ್ ಮಾಡಿರುವ ಸಂಗತಿಗಳು ಇದೆ. ಇದನ್ನೂ ಓದಿ: ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಗೆ ನೋ ಅಂದ್ರು ವಿಜಯ್ ಸೇತುಪತಿ
Advertisement
Advertisement
ಸದ್ಯ ಸಂದರ್ಶನವೊಂದರಲ್ಲಿ ಮೈನೆ ಪ್ಯಾರ್ ಕಿಯಾ ಸಿನಿಮಾದ ಚಿತ್ರೀಕರಣದ ವೇಳೆ ಆನ್ ಸ್ಕ್ರೀನ್‍ನಲ್ಲಿ ಸಲ್ಮಾನ್ ತುಟಿಗೆ ಚುಂಬಿಸುವ ದೃಶ್ಯದಲ್ಲಿ ನಟಿಸಬೇಕಾದ ಸಂದರ್ಭದಲ್ಲಿ ಭಾಗ್ಯ ಶ್ರೀ ಗಳಗಳನೇ ಅತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನಟ ಗೋವಿಂದ್ ಸ್ಯಾಂಡಲ್‍ವುಡ್‍ಗೆ ಎಂಟ್ರಿ
Advertisement
ಈ ಸಿನಿಮಾದಲ್ಲಿ ನಟಿಸುವಾಗ ನನಗಿನ್ನು 18 ವರ್ಷವಾಗಿತ್ತು. ನಾನು ಆಗಲೇ ಒಬ್ಬರನ್ನು ಪ್ರೀತಿಸುತ್ತಿದ್ದೆ. ಅವರನ್ನೇ ಮದುವೆಯಾಗುವುದಾಗಿ ನಿಶ್ಚಯಿಸಿದ್ದೆ. ಹೀಗಾಗಿ ಬೇರೆ ಪುರುಷರನ್ನು ತಬ್ಬಿಕೊಳ್ಳಲು ನನಗೆ ಬಹಳ ಮುಜುಗರ ಹಾಗೂ ಕಷ್ಟವಾಗುತ್ತಿತ್ತು. ಆಗ ನಾನು ನಟಿಸುವುದಿಲ್ಲ ಎಂದು ಅತ್ತಿದ್ದೆ. ನಂತರ ಸಲ್ಮಾನ್ ಖಾನ್ ಬಂದು ಈ ದೃಶ್ಯದಲ್ಲಿ ನಟಿಸುವಂತೆ ಕೇಳಿಕೊಂಡಿದ್ದರು. ಕೊನೆಗೆ ನಿರ್ದೇಶಕರು ಇಬ್ಬರ ತುಟಿ ಮಧ್ಯೆ ಗ್ಲಾಸ್ ಇರಿಸಿ ಈ ದೃಶ್ಯವನ್ನು ಸೆರೆಹಿಡಿಯಲಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಕುರಿಗಾಯಿ ಜೊತೆಗೆ ಕುಳಿತು ಊಟ ಮಾಡಿದ ನಟ ಪುನೀತ್
ಹಿಂದೆ ಈ ಸಿನಿಮಾ ಸಲ್ಮಾನ್‍ಖಾನ್‍ಗೆ ಹಿಟ್ ತಂದು ಕೊಡುವುದರ ಜೊತೆಗೆ ಖ್ಯಾತಿ ತಂದು ಕೊಟ್ಟತ್ತು. ಜೊತೆಗೆ ಸಿನಿಮಾದ ಹಾಡುಗಳು ಕೂಡ ಸಖತ್ ಫೇಮಸ್ ಆಗಿತ್ತು.