2021ರ ಅರ್ಜೆಂಟೈನಾದ (Argentina) ಸೆವೆನ್ ಡಾಗ್ಸ್ ಸಿನೆಮಾದ ರಿಮೇಕ್ (Remake) ಸೌದಿ ಅರೇಬಿಯಾದಲ್ಲಿ ನಡೆಯುತ್ತಿದ್ದು, ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಆಟೋ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸಲ್ಮಾನ್ ಖಾನ್ ಫಸ್ಟ್ ಲುಕ್ ಆನ್‌ಲೈನ್‌ನಲ್ಲಿ ವೈರಲ್ ಆಗ್ತಿದ್ದಂತೆ, ಆಟೋ ಡ್ರೈವರ್ ವೇಷ ಧರಿಸಿರುವ ಹಲವಾರು ವಿಡಿಯೊಗಳು ವೈರಲ್ ಆಗುತ್ತಿವೆ. ಶೂಟಿಂಗ್‌ನಲ್ಲಿ ಸಲ್ಮಾನ್ ಖಾನ್ ಜೊತೆ ಸ್ನೇಹಿತ ಮತ್ತು ನಟ ಸಂಜಯ್ ದತ್ ಇದ್ದರು. ಇದನ್ನೂ ಓದಿ: ಆರ್‌ಸಿಬಿ ಹ್ಯಾಟ್ರಿಕ್ ಕನಸು ಭಗ್ನ – ಮುಂಬೈಗೆ 4 ವಿಕೆಟ್‌ಗಳ ರೋಚಕ ಜಯ
Advertisement
Bhai and Baba are in Saudi Arabia to shoot cameo for a Hollywood movie 🎥… #Salmankhan #Sanjaydutt #Sikandar pic.twitter.com/ZoTZ6mNae4
— Adil Hashmi👁🗨 (@X4SALMAN) February 19, 2025
Advertisement
ಈ ವಿಡಿಯೋದಲ್ಲಿ ಸಲ್ಮಾನ್ ಖಾನ್ ಕಂದು ಬಣ್ಣದ ಶರ್ಟ್‌ನೊಂದಿಗೆ ಚೆಕ್ಸ್ ಶರ್ಟ್, ಮ್ಯಾಚಿಂಗ್ ಪ್ಯಾಂಟ್ ಮತ್ತು ಕೂಲಿಂಗ್ ಗ್ಲಾಸ್ ಧರಿಸಿ, ಆಟೋ ರಿಕ್ಷಾದ ಮೇಲೆ ಪೋಸ್ ಕೊಟ್ಟಿದ್ದಾರೆ. ಸಂಜಯ್ ದತ್ ನೀಲಿ ಸೂಟ್ ಧರಿಸಿದ್ದಾರೆ. ಇದನ್ನೂ ಓದಿ: Champions Trophy: ರಿಯಾನ್ ರಿಕಲ್ಟನ್ ಶತಕ – ಅಫ್ಘಾನ್ ವಿರುದ್ಧ ದ.ಆಫ್ರಿಕಾಗೆ 107 ರನ್‌ಗಳ ಭರ್ಜರಿ ಜಯ
Advertisement
ಇನ್ನೊಂದು ವಿಡಿಯೋದಲ್ಲಿ ಸಲ್ಮಾನ್ ಖಾನ್ ಭಾರೀ ಭದ್ರತೆಯ ನಡುವೆ ಶೂಟಿಂಗ್ ಸ್ಥಳಕ್ಕೆ ಆಗಮಿಸುತ್ತಿರುವುದು ಸೆರೆಯಾಗಿದೆ. ದುಬೈನಲ್ಲಿ ನಿರ್ಮಿಸಲಾದ ಬೃಹತ್ ಸೆಟ್ ಮುಂಬೈನ ಧಾರಾವಿ ಸ್ಲಮ್‌ನ್ನು ಹೋಲುವಂತೆ ನಿರ್ಮಿಸಲಾಗಿದೆ. ಇದನ್ನೂ ಓದಿ: ಅಟಲ್‌ಜೀ ಸಂಘಟನೆ, ಹೋರಾಟವು ಕಾರ್ಯಕರ್ತರಿಗೆ ಪ್ರೇರಣಾಶಕ್ತಿ: ಯಡಿಯೂರಪ್ಪ
Advertisement
MEGASTAR SALMAN KHAN in Saudi Arabia today #Sikandar #SalmanKhan pic.twitter.com/pUVl8WMvoc
— Lokendra Kumar (@rasafi24365) February 19, 2025
ಇದಕ್ಕೂ ಮೊದಲು ಇನ್ಟಾಗ್ರಾಮ್‌ನಲ್ಲಿ ಸಲ್ಮಾನ್ ಖಾನ್ ಅವರ ಅಂಗರಕ್ಷಕ ಶೇರಾ, ಸೂಪರ್‌ಸ್ಟಾರ್ ಮತ್ತು ರಷ್ಯಾದ ಮಾಜಿ ಮಿಶ್ರ ಕಲಾವಿದ ಖಬೀಬ್ ನೂರ್ಮಗೊಮೆಡೋವ್ ಅವರೊಂದಿಗಿನ ಫೋಟೋಗಳನ್ನು ʻಎರಡು ಲೆಜೆಂಡ್‌ಗಳು ಒಂದೇ ಫ್ರೇಮ್‌ನಲ್ಲಿ’ ಎಂದು ಬರೆದುಕೊಂಡು ಹಂಚಿಕೊಂಡಿದ್ದರು. ಇದನ್ನೂ ಓದಿ: 43 ಬಾಲ್‌ಗೆ 81 ರನ್ ಚಚ್ಚಿದ ಎಲ್ಲಿಸ್ ಪೆರ್ರಿ – ಮುಂಬೈಗೆ 168 ರನ್‌ಗಳ ಗುರಿ ನೀಡಿದ ಆರ್‌ಸಿಬಿ
View this post on Instagram
ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಪಾತ್ರವನ್ನು ಗೌಪ್ಯವಾಗಿಡಲಾಗಿತ್ತು, ಆದರೂ ವೈರಲ್ ಆಗಿರುವ ವಿಡಿಯೋಗಳ ಮೂಲಕ ರಿವೀಲ್ ಆಗಿದೆ. ಈ ಮೂಲಕ ಬಾಲಿವುಡ್‌ನಿಂದ ಹಾಲಿವುಡ್‌ಗೆ ಕಾಲಿಟ್ಟ ಭಾರತೀಯ ನಟರ ಸಾಲಿಗೆ ಸಲ್ಮಾನ್ ಖಾನ್ ಸಹ ಸೇರಿದ್ದಾರೆ. ಇದನ್ನೂ ಓದಿ: ಟೋಲ್ ಗೇಟ್ ತಪ್ಪಿಸಲು ಹೋಗಿ ಟೋಲ್ ಸಿಬ್ಬಂದಿಗೆ ಗುದ್ದಿಸಿ ಪಿಕಪ್ ವಾಹನ ಚಾಲಕ ಎಸ್ಕೇಪ್