ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹೊಡೆಯೋ ಕೆಲಸ ಮಾಡ್ತಿದ್ದಾರೆ- ಸಲೀಂ ಅಹ್ಮದ್

Public TV
1 Min Read
saleem ahmad

ಹಾವೇರಿ: ಎಚ್‌.ಡಿ.ಕುಮಾರಸ್ವಾಮಿ ಅವರು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ವಾಗ್ದಾಳಿ ನಡೆಸಿದ್ದಾರೆ.

KUMARASWAMY 2

ನಗರದಲ್ಲಿ ಮಾತನಾಡಿದ ಅವರು, ಪರಿಷತ್‌ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ. ಆದರೆ ಕಾಂಗ್ರೆಸ್‌ ಬಗ್ಗೆ ಎಚ್‌.ಡಿ.ಕುಮಾರಸ್ವಾಮಿ ಏನು ಹೇಳುತ್ತಿದ್ದಾರೆ ಎನ್ನುವುದು ನಮಗೆ ಅರ್ಥ ಆಗುತ್ತಿಲ್ಲ. ಅವರದೇನಿದ್ದರೂ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಸಿಟಿ ರವಿ ಅಲ್ಲ ಲೂಟಿ ರವಿ, ಡಿಕೆ ಅಲ್ಲ ಕೆಡಿ – ಪರಸ್ಪರ ವಾಗ್ದಾಳಿ ನಡೆಸಿದ ನಾಯಕರು

ನಿನ್ನೆ ಪರಿಷತ್‌ನ 15 ಕಾಂಗ್ರೆಸ್‌ ಸದಸ್ಯರನ್ನು ಅಮಾನತುಗೊಳಿಸಿದರು. ಸಚಿವ ಭೈರತಿ ಬಸವರಾಜ ಅವರ ಭೂ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ಕೇಳಿದರೆ ನಮ್ಮವರನ್ನೇ ಅಮಾನತು ಮಾಡುತ್ತಾರೆ. ಭೂ ಹಗರಣ ಮಾಡಿರುವ ಭೈರತಿ ಬಸವರಾಜ್‌ ಕೂಡಲೇ ರಾಜೀನಾಮೆ ನೀಡಬೇಕು. ಅವರನ್ನು ಸಚಿವ ಸಂಪುಟದಿಂದ ಸಿಎಂ ಬೊಮ್ಮಾಯಿ ಅವರು ಕೂಡಲೇ ಕೈಬಿಡಬೇಕು ಎಂದು ಸಲೀಂ ಅಹ್ಮದ್‌ ಆಗ್ರಹಿಸಿದ್ದಾರೆ.

vlcsnap 2021 12 15 16h38m25s374

ಪರ್ಸೆಂಟೇಜ್‌ ಬಗ್ಗೆ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದಿದ್ದು, ಇತಿಹಾಸದಲ್ಲೇ ಪ್ರಥಮ. ಪ್ರಧಾನಿಯವರಿಗೆ ಬದ್ಧತೆ ಇದ್ದರೆ ಕೂಡಲೇ ಈ ಬಗ್ಗೆ ಸಿಬಿಐ ತನಿಖೆಗೆ ಕೊಡಬೇಕಿತ್ತು. ಪರಿಷತ್ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ. ಕುಮಾರಸ್ವಾಮಿ ಏನು ಹೇಳ್ತಾರೆ ಅನ್ನೋದು ನಮಗೆ ಅರ್ಥ ಆಗೋದಿಲ್ಲ. ಸಿದ್ದರಾಮಯ್ಯ ಯಾವುದೇ ಭ್ರಷ್ಟಾಚಾರ, ಆರೋಪಗಳಿಲ್ಲದೆ ಐದು ವರ್ಷ ಸರ್ಕಾರವನ್ನು ನಡೆಸಿದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡ ಧ್ವಜಕ್ಕೆ ಬೆಂಕಿ – ಕನ್ನಡ ದ್ರೋಹಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹೆಚ್‍ಡಿಕೆ ಆಗ್ರಹ

ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಪರ್ಸೆಂಟೇಜ್ ಬಗ್ಗೆ ತನಿಖೆ ಮಾಡುತ್ತೇವೆ ಎನ್ನುವುದನ್ನು ಸ್ವಾಗತಿಸುತ್ತೇವೆ. ನಮ್ಮ ಮುಖಂಡರು ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *