ಚಾಮರಾಜನಗರ: ಸರ್ವೇಜನ ಸುಖಿನೋಭವಂತು ಎಂದು ಹೇಳಿ ದೇವರನ್ನು ಪೂಜಿಸುವವರು ಅರ್ಚಕರು. ಆದ್ರೆ ಅವರ ಜೀವನವೇ ಸುಖದಲ್ಲಿಲ್ಲ. ಯಾಕಂದ್ರೆ ಮುಜರಾಯಿ ಇಲಾಖೆಗೆ ಸೇರಿರುವ ಸಿ ದರ್ಜೆಯ ದೇವಾಲಯಗಳ ಅರ್ಚಕರ ಸಂಬಳ ಕೇಳಿದ್ರೆ ನೀವೆಲ್ಲಾ ನಿಬ್ಬೆರಗಾಗ್ತೀರಾ.
Advertisement
ಮುಜರಾಯಿ ಇಲಾಖೆಯ ಸುಪರ್ದಿಗೆ ಒಳಪಡುವ ಸಿ ಗ್ರೇಡ್ ದೇವಾಲಯದ ಅರ್ಚಕರ ತಿಂಗಳ ಸಂಬಳ ಕೇವಲ 2.50 ಪೈಸೆ ಮಾತ್ರ. ಇಂದು ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಚಾಮರಾಜನಗರದ ಹೊರವಲಯದಲ್ಲಿರುವ ಹರಳುಕೋಟೆಯ ಜನಾರ್ಧನ ಸ್ವಾಮಿ ದೇವಸ್ಥಾನಕ್ಕೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಅರ್ಚಕ ಅನಂತ ಪ್ರಸಾದ್ ತಮ್ಮ ಸಂಕಷ್ಟವನ್ನು ತೋಡಿಕೊಂಡರು. ನಮಗೆ ನಮ್ಮ ತಂದೆ ಕಾಲದಿಂದಲೂ ತಿಂಗಳಿಗೆ ಕೇವಲ 2.50 ಪೈಸೆ ಸಂಬಳ, ಪಡಿತರಕ್ಕೆ 4.74 ಪೈಸೆ ಬರುತ್ತದೆ. ಇದರಿಂದ ಜೀವನ ನಿರ್ವಹಣೆ ಮಾಡಲು ಕಷ್ಟ. ಇನ್ನು ಮುಂದಾದರೂ ನಮ್ಮ ಸಿ ಗ್ರೇಡ್ ದೇವಾಲಯದ ಅರ್ಚಕರ ಸಂಬಳ ಜಾಸ್ತಿ ಮಾಡಿಸುವಂತೆ ಮನವಿ ಮಾಡಿಕೊಂಡರು. ಇದನ್ನೂ ಓದಿ: ನಾನು ಕಾಂಗ್ರೆಸ್ ಕಾರ್ಯಕರ್ತ – ಮೊಟ್ಟೆ ಎಸೆದಿದ್ದಕ್ಕೆ ಸಂಪತ್ ಕೊಟ್ಟ ಸ್ಪಷ್ಟನೆ ಏನು..?
Advertisement
Advertisement
ದೇವಾಲಯದ ಪಡಿತರಕ್ಕೆಂದು ತಿಂಗಳಿಗೆ 4.74 ಪೈಸೆ ನೀಡಲಾಗುತ್ತದೆ. ಈ ಹಣದಲ್ಲಿ ಒಂದು ದಿನದ ಎಣ್ಣೆ ಬತ್ತಿಗೂ ಸಾಲುವುದಿಲ್ಲ. 5 ವರ್ಷದಿಂದ ಅರ್ಚಕರಿಗೆ ಸಂಬಳ ಬಂದಿಲ್ಲ ಎಂದರು. ಇದನ್ನೆಲ್ಲಾ ಕೇಳಿಸಿಕೊಂಡ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಒಂದು ಕ್ಷಣ ತಬ್ಬಿಬ್ಬಾದರು. ಅಲ್ಲದೇ ಇಂತಹ ಮುಂದುವರಿದಿರುವ ಕಾಲದಲ್ಲೂ ಇಷ್ಟು ಕಡಿಮೆ ಸಂಬಳ ಅಂದ್ರೆ ಅವರ ಜೀವನ ಹೇಗೆ. ಪರಿಸ್ಥಿತಿ ಹೀಗಿದ್ರೂ ನಾವೆಲ್ಲಾ ಏನು ಮಾಡುತ್ತಿದ್ದೇವೆ ಎಂದು ಬೇಸರಗೊಂಡ ಉಪಲೋಕಾಯುಕ್ತರು 15 ದಿನಗಳ ಒಳಗೆ ಸಮಸ್ಯೆ ಬಗೆಹರಿಸುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಯಡಿಯೂರಪ್ಪ.. ಸೇದಿ ಬಿಸಾಕಿದ ಬೀಡಿ: ಸಿಎಂ ಇಬ್ರಾಹಿಂ
Advertisement
Live Tv
[brid partner=56869869 player=32851 video=960834 autoplay=true]