ಬೆಂಗಳೂರು: ಎನ್‌ಐಎ (NIA) ಹಾಗೂ ಐಎಸ್‌ಡಿ (ISD) ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಬೆಂಗಳೂರಿನಲ್ಲಿ ಬಂಧನಕ್ಕೊಳಗಾದ ಶಂಕಿತ ಉಗ್ರ ಆರೀಫ್‌ನನ್ನು (Arif) ಎನ್‌ಐಎ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಸಾಫ್ಟ್‌ವೇರ್ ಉದ್ಯೋಗಿ ಸೋಗಿನಲ್ಲಿ ಉಗ್ರ ಸಂಘಟನೆ ಸೇರಲು ಆರೀಫ್ ಮಾಡುತ್ತಿದ್ದ ಇಂಚಿಂಚು ರಹಸ್ಯವೂ ಬಯಲಾಗಿದೆ.
ಉತ್ತರ ಪ್ರದೇಶದ ಅಲಿಗಢ ಮೂಲದ ಆರೀಫ್ ಕುಟುಂಬ ಆರ್ಥಿಕವಾಗಿ ಸದೃಢವಾಗಿದೆ. ಯಾವುದೇ ಆರ್ಥಿಕ ಸಮಸ್ಯೆಗಳಿರದ ಆರೀಫ್ ಉತ್ತಮ ವ್ಯಾಸಂಗ ಮಾಡಿದ್ದು, ಪ್ರತಿ ತಿಂಗಳು ಒಂದೂವರೆ ಲಕ್ಷ ರೂ. ಸಂಬಂಳ ಪಡೆಯುತ್ತಿದ್ದ. ಬಳಿಕ ಔಟ್ ಸೋರ್ಸಿಂಗ್ ಕೆಲಸ ಮಾಡುತ್ತಿದ್ದ. ಹೆಂಡತಿ, ಮಕ್ಕಳೊಂದಿಗೆ ಸುಖ ಜೀವನ ಸಾಗಿಸಬೇಕಿದ್ದ ಆರೀಫ್ ಧರ್ಮದ ಹುಚ್ಚನ್ನು ಮೈಗೂಡಿಸಿಕೊಂಡಿದ್ದ. ಅದು ಎಷ್ಟರ ಮಟ್ಟಿಗೆ ಎಂದರೆ ಕುಟುಂಬವನ್ನೇ ಬಿಟ್ಟು ಉಗ್ರ ಸಂಘಟನೆಗೆ ಸೇರುವಷ್ಟು ಹುಚ್ಚು ಬೆಳೆಸಿಕೊಂಡಿದ್ದ.
Advertisement
Advertisement
ಕಳೆದ 3 ವರ್ಷಗಳಿಂದಲೂ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿದ್ದ ಆರೀಫ್, ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡುತ್ತಿದ್ದ. ಆದರೆ ಅದನ್ನು ಟ್ವಿಟ್ಟರ್ ಸಂಸ್ಥೆ ಡಿಲೀಟ್ ಮಾಡಿ, ಆತನ ಅಕೌಂಟ್ ಅನ್ನು ಬ್ಲಾಕ್ ಮಾಡಿತ್ತು. ಇದರಿಂದ ಆತ ಅಲರ್ಟ್ ಆಗಿದ್ದು, ಆತನ ಖಾತೆ ಒಂದೂವರೆ ವರ್ಷ ಸ್ಥಗಿತವಾಗಿತ್ತು. ಬಳಿಕ ಮತ್ತೆ ಅದರಲ್ಲಿ ಸಕ್ರಿಯನಾಗಿದ್ದ. ಟೆಲಿಗ್ರಾಂ ಹಾಗೂ ಡಾರ್ಕ್ ವೆಬ್ ಮೂಲಕ ಅಲ್ ಖೈದಾ ಸಂಪರ್ಕದಲ್ಲಿದ್ದ ಆರೀಫ್ ಮಾರ್ಚ್ 10 ರಂದು ಇತರ 4 ಶಂಕಿತ ಉಗ್ರರೊಂದಿಗೆ ದೆಹಲಿ, ಉತ್ತರ ಪ್ರದೇಶ, ಬಿಹಾರ ಬಳಿಕ ಅಲ್ಲಿಂದ ಸಿರಿಯಾಗೆ ಹೋಗುವ ಪ್ಲಾನ್ ಮಾಡಿದ್ದ. ಇದಕ್ಕಾಗಿ ವಿಮಾನದ ಟಿಕೆಟ್ ಖರೀದಿಸಿಟ್ಟಿದ್ದ.
Advertisement
ಆರೀಫ್ ಸಾಮಾಜಿಕ ಮಾಧ್ಯಮಗಳಲ್ಲಿ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದಾನೆ ಎನ್ನುವ ಮಾಹಿತಿ ಪಡೆದ ಕೇಂದ್ರ ತನಿಖಾ ಸಂಸ್ಥೆ ಕಳೆದ 3 ತಿಂಗಳಿಂದ ಆತನ ಮೇಲೆ ನಿಗಾ ಇಟ್ಟಿತ್ತು. ಅಧಿಕಾರಿಗಳು ಆತನ ಮನೆ ಬಳಿ ಮಾರುವೇಷದಲ್ಲಿ ಬಂದು ಆತನ ಪ್ರತಿ ಚಲನವಲನಗಳನ್ನು ಗಮನಿಸುತ್ತಿದ್ದರು. ಕಳೆದ ಕೆಲ ತಿಂಗಳಿನಿಂದ ಮುಸ್ಲಿಮರಂತೆ ವೇಷ ಹಾಕಿ ತಳ್ಳು ಗಾಡಿಯಲ್ಲಿ ಆತನ ಮನೆ ಮುಂದೆಯೇ ವ್ಯಾಪಾರ ಮಾಡುತ್ತಿದ್ದರು. ಇದನ್ನೂ ಓದಿ: ಜೆಮಿಮಾ, ರಿಚಾ ಭರ್ಜರಿ ಬ್ಯಾಟಿಂಗ್ – ಪಾಕ್ ವಿರುದ್ಧ 7 ವಿಕೆಟ್‌ಗಳ ಜಯ
Advertisement
ಆರೀಫ್ ತನ್ನ ಹಿರಿಯ ಮಗನನ್ನು ಮಾತ್ರ ಶುಕ್ರವಾರದಂದು ನಮಾಜ್‌ಗೆ ಕರೆದೊಯ್ಯುತ್ತಿದ್ದ. ಉಳಿದಂತೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಅಲ್ಲದೇ ಯಾರು ಕೂಡಾ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಇತ್ತ ಅದರ ಅರಿವಿಲ್ಲದ ಆರೀಫ್ ಸಿರಿಯಾಗೆ ಹಾರಲು ಪ್ಲಾನ್ ಮಾಡಿ ಫೈಟ್ ಟಿಕೆಟ್ ಬುಕ್ ಮಾಡಿದ್ದ. ಆದರೆ ಆತ ಒನ್ ಸೈಡ್ ಟಿಕೆಟ್ ಬುಕ್ ಮಾಡಿದ್ದರಿಂದ ಆತನ ಮೇಲೆ ನಿಗಾ ಇಟ್ಟಿದ್ದ ಅಧಿಕಾರಿಗಳಿಗೆ ಇದ್ದ ಅನುಮಾನ ಕನ್ಫರ್ಮ್ ಆಗಿತ್ತು. ಅದರ ಜೊತೆಗೆ ಮಾನೆ ಖಾಲಿ ಮಾಡಿ ಕುಟುಂಬವನ್ನು ಉತ್ತರ ಪ್ರದೇಶದ ಅಲಿಗಢಕ್ಕೆ ಕಳುಹಿಸಲು ಎಲ್ಲಾ ಸಿದ್ಧತೆ ಮಾಡಿದ್ದ. ಹೀಗಾಗಿ ಮನೆಯಲ್ಲಿರುವ ಪೀಠೋಪಕರಣಗಳನ್ನು ಒಎಲ್ಎಕ್ಸ್‌ನಲ್ಲಿ ಮಾರಾಟಕ್ಕೆ ಪೋಸ್ಟ್ ಮಾಡಿದ್ದ. ಈ ವಿಚಾರವನ್ನು ತನ್ನ ಕುಟುಂಬಸ್ಥರಿಗೆ ತಿಳಿಸಿದ್ದು, ಎಲ್ಲರೂ ಅದಕ್ಕೆ ಸಮ್ಮತಿ ಸೂಚಿಸಿದ್ದರು. ಆದರೆ ಕುಟುಂಬಸ್ಥರಿಗೆ ಆರೀಫ್ ಸಿರಿಯಾಗೆ ಹೋಗುವ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ.
ಯಾವಾಗ ಸದ್ದಿಲ್ಲದೆ ಬೆಂಗಳೂರಿನ ಮನೆ ಖಾಲಿ ಮಾಡಲು ಆರೀಫ್ ತಯಾರಾಗಿದ್ದನೋ ಆಗಲೇ ಐಎಸ್‌ಡಿ ಹಾಗೂ ಎನ್‌ಐಎ ಟೀಂಗಳು ದಾಳಿ ಮಾಡಲು ನಿರ್ಧಾರ ಮಾಡಿದ್ದವು. ಸದ್ಯ ಶಂಕಿತ ಉಗ್ರ ಆರೀಫ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಆತನ ಸಂಪರ್ಕದಲ್ಲಿ ಇನ್ನೂ ಯಾರುಜ ಇದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್‌ಗೆ ಅಪಮಾನ – ದಲಿತಪರ ಸಂಘಟನೆಯಿಂದ ಜೈನ್ ವಿವಿ ಬೋರ್ಡ್‌ಗೆ ಮಸಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k