ಬೆಂಗಳೂರು: ಸಿಬ್ಬಂದಿಗೆ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ನಗರದ ಕೆಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ (Indira Canteen) ಊಟ ಸ್ಥಗಿತವಾಗಿದೆ. ಬಡವರ ಹಸಿವು ನೀಗಿಸುವ ಕೆಲ ಇಂದಿರಾ ಕ್ಯಾಂಟೀನ್‌ಗಳು ಮುಚ್ಚಿವೆ.
ಬುಧವಾರದಿಂದ ಬೆಳಗ್ಗೆ ಉಪಹಾರ, ಮಧ್ಯಾಹ್ನ, ರಾತ್ರಿ ಊಟ ಪೂರೈಕೆ ಸ್ಥಗಿತವಾಗಿದೆ. ಬಡವರ ಹಸಿವು ನೀಗಿಸುವ ಕೆಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಪೂರೈಕೆಯಾಗುತ್ತಿಲ್ಲ. ಇದರಿಂದ ಊಟ ಸಿಗದೇ ಜನ ಹಸಿದ ಹೊಟ್ಟೆಯಲ್ಲಿಯೇ ವಾಪಸ್ ಆಗುತ್ತಿದ್ದಾರೆ. ಕ್ಯಾಂಟೀನ್ ಸಿಬ್ಬಂದಿಗೆ ಆರು ತಿಂಗಳ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರಾಗಿದ್ದಾರೆ. ಇದರಿಂದ ಊಟ ಕೂಡ ಪೂರೈಕೆಯಾಗುತ್ತಿಲ್ಲ. ಇದನ್ನೂ ಓದಿ: ಮತ್ತೆ ಕೋಟ್ಯಧೀಶನಾದ ಮಲೆ ಮಾದಪ್ಪ – 2.43 ಕೋಟಿ ರೂ. ಕಾಣಿಕೆ ಹಣ ಸಂಗ್ರಹ
ಪಶ್ಚಿಮ ವಲಯದ ಮಲ್ಲೇಶ್ವರಂ (Malleshwaram), ನಂದಿನಿಲೇಔಟ್ ಇಂದಿರಾ ಕಿಚನ್‌ಗಳ ವ್ಯಾಪ್ತಿಯಲ್ಲಿ ಬರುವ ಇಂದಿರಾ ಕ್ಯಾಂಟೀನ್‌ಗಳಿಗೆ ಊಟ ಪೂರೈಕೆಯಾಗುತ್ತಿಲ್ಲ. ನೂರಾರು ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಬಳ ನೀಡಿಲ್ಲ. ಈ ಕಿಚನ್‌ಗಳನ್ನು ಚೆಫ್ ಟಾಕ್ ಕಂಪನಿ ನಿರ್ವಹಣೆ ಮಾಡುತ್ತಿದೆ. ಈ ಕಂಪನಿಗೆ ಬಿಬಿಎಂಪಿ ಹಣ ಪಾವತಿ ಮಾಡಲಿಲ್ಲ. ಪಾಲಿಕೆ, ಚೆಫ್ ಟಾಕ್ ಕಂಪನಿಗೆ ಹಣ ನೀಡದ ಕಾರಣ ಸಿಬ್ಬಂದಿಗೂ ಸಂಬಳ ಸಿಗದೇ ಕಂಗಾಲಾಗಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ವಿಧಿವಶ
ನಗರದ ಯಾವ್ಯಾವ ಇಂದಿರಾ ಕ್ಯಾಂಟೀನ್‌ಗಳಿಗೆ ಬೀಗ?
ಮಂತ್ರಿ ಮಾಲ್ ರಸ್ತೆ, ಸುಭಾಶ್ ನಗರ, ಮೆಜೆಸ್ಟಿಕ್ (Mejestic) ಮೆಟ್ರೋ ನಿಲ್ದಾಣ ಸಮೀಪ, ಗಾಂಧಿನಗರ, ಅರಮನೆ ನಗರ, ಸರ್ಕಲ್ ಮಾರಮ್ಮ ದೇವಸ್ಥಾನ ಯಶವಂತಪುರ ರಸ್ತೆ, ಮಲ್ಲೇಶ್ವರಂ ಇಂದಿರಾ ಕಿಚನ್‌ಗಳಿಗೆ ಬೀಗ ಬಿದ್ದಿದೆ. ಇದನ್ನೂ ಓದಿ: ಧಾರವಾಡದಲ್ಲಿ ತಾಯಂದಿರಿಂದಲೇ ಮಕ್ಕಳ ಕಿಡ್ನ್ಯಾಪ್ – ತಾಯಂದಿರು, ಅವರ ಪ್ರೇಮಿಗಳು ಅರೆಸ್ಟ್
ಉತ್ತರ ಪ್ರದೇಶದ (Uttar Pradesh )ಕೆಲ ಯುವಕರು ಇಂದಿರಾ ಕ್ಯಾಂಟೀನ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೂ ವೇತನ ಆಗಿಲ್ಲ. ಮನೆ ನಿರ್ವಹಣೆ ಕಷ್ಟ ಆಗಿದೆ. ಸಂಬಳ ಕೊಟ್ಟರೆ ನಾವು ಊರಿಗೆ ಹೋಗುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಡವರ ಹಸಿವು ನೀಗಿಸಬೇಕಿದ್ದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಈಗ ಊಟ ಸಿಗದೇ ಜನ ಪರದಾಡುತ್ತಿರುವುದು ವಿಪರ್ಯಾಸ. ಮುಂದಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನ ಸ್ಥಗಿತಗೊಳಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಇದನ್ನೂ ಓದಿ: ತಾಯಿಯಿಂದ ಬೇರ್ಪಟ್ಟು ಒಂಟಿಯಾಗಿ ಅಲೆದಾಡುತ್ತಿದ್ದ ಮರಿ ಕರಡಿ ಸಾವು