ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಕೋಚ್ ಗಳಿಗೆ ನೀಡುವ ಸಂಭಾವನೆ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರು ಮಾಸಿಕ 36 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಈ ಮೂಲಕ ಮೂಲಕ ವಿಶ್ವದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಕೋಚ್ ರವಿಶಾಸ್ತ್ರಿ ಆಗಿದ್ದಾರೆ.
ಬಿಸಿಸಿಐ ಬಿಡುಗಡೆಗೊಳಿಸಿದ ಪಟ್ಟಿಯ ಅನ್ವಯ ರವಿಶಾಸ್ತ್ರಿ ಅವರು 2018 ಏಪ್ರಿಲ್ ನಿಂದ ಜುಲೈ 2018 ಅವಧಿಯಲ್ಲಿ ತಿಂಗಳಿಗೆ 36 ಲಕ್ಷ ರೂ. ನಂತೆ 1,89,37,500 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಇನ್ನು ಅಂಡರ್ 19 ತಂಡದ ಕೋಚ್ ಆಗಿರುವ ದ್ರಾವಿಡ್ 40,50,000 ರೂ. ಗಳನ್ನು 2018 ಮಾರ್ಚ್ ತಿಂಗಳಿನಲ್ಲಿ ಪಡೆದಿದ್ದಾರೆ. ಈ ಹಿಂದೆ ದ್ರಾವಿಡ್ ವಾರ್ಷಿಕವಾಗಿ ದ್ರಾವಿಡ್ 4.86 ಕೋಟಿ ರೂ. ಗಳನ್ನು ಪಡೆದಿದ್ದರು.
Advertisement
Advertisement
ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ರವಿ ಶಾಸ್ತ್ರಿ ಅವರನ್ನು 2017 ಜುಲೈ ನಲ್ಲಿ ನೇಮಕಗೊಂಡಿದ್ದರು. ಬಿಸಿಸಿಐ ಅಹ್ವಾನಿಸಿದ್ದ ಕೋಚ್ ಹುದ್ದೆಯ ಅರ್ಜಿಗೆ ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಸಹ ಅರ್ಜಿ ಸಲ್ಲಿಸಿದ್ದರು. ಸದ್ಯ ಬಿಸಿಸಿಐ ಅಂಡರ್ 19 ತಂಡದ ಕೋಚ್ ಹುದ್ದೆಗೆ ದ್ರಾವಿಡ್ ರೊಂದಿನ ಒಪ್ಪಂದವನ್ನು ನವೀಕರಿಸಿದ್ದು, 2019 ರ ವರೆಗೂ ದ್ರಾವಿಡ್ ಕೋಚ್ ಆಗಿ ಮುಂದುವರೆಯಲಿದ್ದಾರೆ.
Advertisement
ದ್ರಾವಿಡ್ ಅವರ ತರಬೇತಿಯಲ್ಲಿ ಅಂಡರ್ 19 ತಂಡ ವಿಶ್ವಕಪ್ ಎತ್ತಿಹಿಡಿದಿತ್ತು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲೂ ದ್ರಾವಿಡ್ ಬಾಯ್ಸ್ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.