ಪ್ರಭಾಸ್ (Prabhas) ಮತ್ತು ಪ್ರಶಾಂತ್ ನೀಲ್ (Prashant Neel) ಕಾಂಬಿನೇಷನ್ ನ ‘ಸಲಾರ್’ (Salaar) ಸಿನಿಮಾ ಈ ತಿಂಗಳು ಅಂತ್ಯಕ್ಕೆ ರಿಲೀಸ್ (Release) ಆಗುವುದು ಬಹುತೇಕ ಅನುಮಾನ. ಆದರೆ, ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚುವುದು ಗ್ಯಾರಂಟಿ ಎನ್ನುವ ವಿಷಯ ಸಿನಿಮಾ ಟೀಮ್ ನಿಂದಲೇ ಹರಿದು ಬಂದಿದೆ. ಸಲಾರ್ ಸಿನಿಮಾಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ನಡೆಯುತ್ತಿರುವುದರಿಂದ ಬಿಡುಗಡೆಯ ದಿನಾಂಕವನ್ನು ಮುಂದೂಡುವುದು ಅನಿವಾರ್ಯವಾಗಿದೆ ಎಂದು ಹೇಳಲಾಗುತ್ತಿದೆ.
ಕೆಜಿಎಫ್, ಕಾಂತಾರ ಸಿನಿಮಾ ಮೂಲಕ ಜಗತ್ತಿನ ಪ್ರೇಕ್ಷಕರನ್ನು ಕನ್ನಡ ಸಿನಿಮಾ ರಂಗದತ್ತ ಸೆಳೆದ ಕೀರ್ತಿ ಹೊಂಬಾಳೆ ಫಿಲ್ಮ್ಸ್ (Hombale Films) ಗೆ ಸಲ್ಲುತ್ತದೆ. ಈ ಸಂಸ್ಥೆಯಿಂದ ನಿರ್ಮಾಣವಾಗುವ ಚಿತ್ರಗಳಿಗೆ ಒಂದು ಮಾರುಕಟ್ಟೆ ಸೃಷ್ಟಿಯಾಗಿದೆ. ಚಿತ್ರಗಳನ್ನು ಕಾದು ನೋಡಲಾಗುತ್ತದೆ. ಪ್ರೇಕ್ಷಕರಿಗೆ ಯಾವುದೇ ನಿರಾಸೆ ಮಾಡದೇ ಅತ್ಯುತ್ತಮ ಗುಣಮಟ್ಟದ ಸಿನಿಮಾವನ್ನು ನೀಡುವುದಕ್ಕಾಗಿಯೇ ಸಲಾರ್ ಬಿಡುಗಡೆ ಮುಂದೂಡಲಾಗುತ್ತಿದೆ ಎನ್ನುವುದು ಸತ್ಯ. ಇದನ್ನೂ ಓದಿ:ಸ್ಪಂದನಾ ಅಗಲಿಕೆಯ ಬಳಿಕ ‘ಡಿಕೆಡಿ’ಯಲ್ಲಿ ವಿಜಯ ರಾಘವೇಂದ್ರ
ಸಲಾರ್ ಸಿನಿಮಾ ಬಿಡುಗಡೆ ದಿನಾಂಕದ ಕುರಿತು ಅಧಿಕೃತವಾಗಿ ಸಂಸ್ಥೆಯು ಯಾವುದೇ ಮಾಹಿತಿ ನೀಡದೇ ಇದ್ದರೂ, ದೀಪಾವಳಿಯ ದಿನದಂದು ರಿಲೀಸ್ ಮಾಡುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎನ್ನುವುದು ಬಲ್ಲ ಮೂಲಗಳ ಮಾಹಿತಿ. ಪ್ರೇಕ್ಷಕರಿಗೆ ಥ್ರಿಲ್ ಕೊಡುವಂತಹ ಟ್ರೈಲರ್ ಅನ್ನು ಮೊದಲು ರಿಲೀಸ್ ಮಾಡುತ್ತಾರಂತೆ ಚಿತ್ರತಂಡ. ಟ್ರೈಲರ್ ರಿಲೀಸ್ ಆಗಿ ಕೆಲವು ದಿನಗಳ ನಂತರ ಚಿತ್ರವನ್ನು ಬಿಡುಗಡೆ ಮಾಡುವ ಪ್ಲ್ಯಾನ್ ಅವರದ್ದು.
ಸಲಾರ್ ಸಿನಿಮಾವನ್ನು ನೋಡಲು ಪ್ರಭಾಸ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಈ ತಿಂಗಳು ಸಿನಿಮಾ ರಿಲೀಸ್ ಆಗದೇ ಇರುವುದು ಅವರಿಗೆ ಕಂಡಿತಾ ನಿರಾಸೆ ಆಗಿರುತ್ತದೆ. ಆದರೆ, ನಿರಾಸೆಯನ್ನು ಹೋಗಲಾಡಿಸುವಂತಹ ಚಿತ್ರವನ್ನು ಕೊಡುವ ಪ್ರಾಮೀಸ್ ಹೊಂಬಾಳೆ ಸಂಸ್ಥೆಯದ್ದು.
Web Stories