ಸ್ಯಾಂಡಲ್‌ವುಡ್ ‘ಸಲಗ’ (Salaga) ದುನಿಯಾ ವಿಜಯ್ (Duniya Vijay) ಮತ್ತೆ ರಚಿತಾ ರಾಮ್ (Rachita Ram) ಡ್ಯುಯೇಟ್ ಹಾಡೋದಕ್ಕೆ ಸಜ್ಜಾಗಿದ್ದಾರೆ. ವಿಜಯ್ 29ನೇ ಸಿನಿಮಾಗೆ ‘ಕಾಟೇರ’ ರೈಟರ್ ಜಡೇಶ್ (Jadesh Hampi) ನಿರ್ದೇಶನ ಮಾಡುತ್ತಿದ್ದಾರೆ. ಅಪ್ಪನ ಸಿನಿಮಾದಲ್ಲೇ ಮಗಳು ರಿತಾನ್ಯಾ (Rithanya Vijay) ಲಾಂಚ್ ಆಗುತ್ತಿದ್ದಾರೆ.
Advertisement
ದುನಿಯಾ ವಿಜಯ್ ನಟನೆಯ 29ನೇ ಚಿತ್ರಕ್ಕೆ ಇಂದು (ಏ.11) ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಈ ವೇಳೆ, ತಮ್ಮ 30 ವರ್ಷಗಳ ಸಿನಿ ಜರ್ನಿಯ ಬಗ್ಗೆ ದುನಿಯಾ ವಿಜಯ್ ಸ್ಮರಿಸಿದ್ದಾರೆ. ಜೊತೆಗೆ ಮಗಳಿಗೂ ಸಿನಿಮಾರಂಗದ ಕುರಿತು ಕಿವಿ ಮಾತೊಂದನ್ನು ಹೇಳಿದ್ದಾರೆ. ಇದನ್ನೂ ಓದಿ:Bigg Boss OTT 3: ದೊಡ್ಮನೆಗೆ ವಿಕ್ಕಿ ಜೈನ್
Advertisement
Advertisement
ಈ ಸಂದರ್ಭದಲ್ಲಿ ವಿಜಯ್ ಮಾತನಾಡಿ ಇಂದು ತಂಬಾ ವಿಶೇಷವಾದ ದಿನ. ಇವತ್ತಿಗೆ ಚಿತ್ರರಂಗಕ್ಕೆ ಕಾಲಿಟ್ಟು 30 ವರ್ಷಗಳು ಕಳೆದವು. ಅದೇ ನಾನು ಮಗಳಿಗೆ ಹೇಳುತ್ತಿದ್ದೆ. ನಾನು ಸರ್ಕಸ್ ಮಾಡಿ ಇವತ್ತಿಗೆ 30 ವರ್ಷ ಆಯ್ತು. ಈ ಸ್ಥಾನಕ್ಕೆ ಬರುವುದಕ್ಕೆ 18 ವರ್ಷ ಬೇಕಾಯ್ತು. ಅದಕ್ಕೂ ಮುಂಚೆ ಹೀರೋ ಆಗುವುದಕ್ಕೆ ಸರ್ಕಸ್ ಹೊಡೆದಿದ್ದು, 10 -12 ವರ್ಷ. ಇಲ್ಲಿವರೆಗೂ ಬರೋಕೆ ನನಗಾದ ಆ ಅವಮಾನ ಹಾಗೂ ನೋವುಗಳು ನನ್ನ ಮೆಟ್ಟಿಲು ಎಂದಿದ್ದಾರೆ. ಅದನ್ನು ಸುಲಭವಾಗಿ ಹತ್ತಿಸಿಕೊಂಡು ಬಂದು ನಿನಗೆ ಕೊಡುತ್ತಿದ್ದೇನೆ. ಅದನ್ನು ಹುಷಾರಾಗಿ ಕಾಪಾಡಿಕೊಂಡು ಹೋಗು ಎಂದು ಮಗಳಿಗೆ ಹೇಳುತ್ತಿದ್ದೆ ಎಂದು ಮಾತನಾಡಿದ್ದಾರೆ.
Advertisement
ಬಳಿಕ ತಂದೆ ಏನೆಲ್ಲ ಮಾಡಬಹುದು ಎಂದರೆ ನನಗಾಗಿ ಮಾಡಿರುವ ಸ್ಕಿಪ್ಟ್‌ನಲ್ಲಿಯೂ ಅರ್ಧ ಕೊಡಬಹುದು. ಜಡೇಶ್ ನನಗೆ ನಾನೇ ಹೀರೋ ಆಗಬೇಕು ಎಂದು ಹೇಳಬಹುದಿತ್ತು. ತಂದೆ ಇದನ್ನೂ ಮಗಳಿಗಾಗಿ ತ್ಯಾಗ ಮಾಡಬಹುದು ಎಂದು ಹೇಳಲು ಇಷ್ಟಪಡುತ್ತೇನೆ. ಇದೇ ವೇಳೆ ವೇದಿಕೆಯಲ್ಲಿ ಮಗಳು ರಿತಾನ್ಯಾಗೆ ವಿಜಯ್ ಸಲಹೆ ನೀಡಿದ್ದಾರೆ. ಒಂದು ಯಾವಾಗಲೂ ನಿನ್ನನ್ನು ನೋಡುವ ಮಾಧ್ಯಮ. ಯಾವಾಗಲೂ ನಿನ್ನಲ್ಲಿ ಕಣ್ಣಿಟ್ಟು ತಿದ್ದುವುದಕ್ಕೆ ನೋಡುತ್ತಿರುತ್ತೆ. ಇನ್ನೊಂದು ಅಭಿಮಾನಿಗಳು. ನಮ್ಮನ್ನು ಪ್ರೋತ್ಸಾಹಿಸಿ ಊಟ ಕೊಡುವ ಅಭಿಮಾನಿಗಳು. ಇನ್ನೊಬ್ಬರು ದೇವರು ನೋಡುತ್ತಿರುತ್ತಾರೆ ಎಂದರು. ಕೊನೆಗೆ ದುನಿಯಾ ಅವರು ಮಗಳಿಗೆ ಸುಖವಾಗಿರು. ದೇವರು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಲಿ. ಇನ್ನೂ ನೀನು ತುಂಬಾನೇ ಕಲಿಯೋದಿದೆ ಎಂದು ತಿಳಿ ಹೇಳಿದರು.
‘ಸಲಗ’ ವಿಜಯ್ 29ನೇ ಸಿನಿಮಾಗೆ ಸತ್ಯ ಪ್ರಕಾಶ್ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಸೂರಜ್ ಗೌಡ ಸಾಥ್ ನೀಡಿದ್ದಾರೆ. ಕೋಲಾರ ಸುತ್ತಮುತ್ತ ಸಿನಿಮಾದ ಕಥೆ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನೈಜ ಕಥೆಯನ್ನು ಆಧರಿಸಿದ ಸಿನಿಮಾ ಮೂಡಿ ಬರಲಿದೆ. ಕೋಲಾರ ಭಾಷೆಯಲ್ಲಿ ಚಿತ್ರದ ಡೈಲಾಗ್ ಇರಲಿದೆ.
ಈಗಾಗಲೇ ಸಿನಿಮಾದ ಪೋಸ್ಟರ್ ರಿವೀಲ್ ಆಗಿದೆ. ಕತ್ತಿ ಹಾಗೂ ಕೊಡಲಿ ಹಿಡಿದು ದುನಿಯಾ ವಿಜಯ್ ನಿಂತಿದ್ದಾರೆ. ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ ಎನ್ನುವ ಲೈನ್ ಕೂಡ ಇದೆ. ಜಡೇಶ್ ಹಂಪಿ ಅವರಿಗೆ ನಿರ್ದೇಶನದಲ್ಲಿ ಅನುಭವ ಇದೆ. ರಾಜಹಂಸ’, ‘ಜಂಟಲ್‌ಮ್ಯಾನ್’, ‘ಗುರು ಶಿಷ್ಯರು’ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ದುನಿಯಾ ವಿಜಯ್ ಮುಂದಿನ ಸಿನಿಮಾಗೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಈ ಸಿನಿಮಾದ ಮೂಲಕ ವಿಜಯ್ ಮೊದಲ ಪುತ್ರಿ ರಿತಾನ್ಯಾ (Rithanya Vijay) ಸಿನಿಮಾಗೆ ಪಾದಾರ್ಪಣೆ ಮಾಡುತ್ತಿದ್ದು, ಅನುಪಮ್ ಖೇರ್ ಸ್ಕೂಲ್‌ನಲ್ಲಿ ತರಬೇತಿ ಪಡೆದು ಸಕಲ ತಯಾರಿ ಮಾಡಿಕೊಂಡೆ ನಟನೆಯ ಅಖಾಡಕ್ಕೆ ಇಳಿದಿದ್ದಾರೆ. ತಂದೆಯಂತೆಯೇ ಮಗಳು ಗೆದ್ದು ಬೀಗುತ್ತಾರಾ? ಎಂದು ಕಾದುನೋಡಬೇಕಿದೆ.