ನಟ ಕಮ್ ನಿರ್ದೇಶಕ ದುನಿಯಾ ವಿಜಯ್ (Duniya Vijay) ಮೊದಲ ಪುತ್ರಿ ರಿತನ್ಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ವಿಜಯ್ 2ನೇ ಪುತ್ರಿ ಮೋನಿಷಾ ಕೂಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಚೊಚ್ಚಲ ಸಿನಿಮಾದ ಪೋಸ್ಟರ್ ಕೂಡ ರಿವೀಲ್ ಮಾಡಲಾಗಿದೆ. ಇದನ್ನೂ ಓದಿ:ಇವ್ನನ್ನು ಉಳಿಸಬೇಡಿ, ಕೊಂದು ಎಸೆದು ಬಿಡಿ – ಶೆಡ್‌ನಲ್ಲಿ ಪವಿತ್ರಾ ಹೇಳಿದ್ದೇನು?
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಶುಭದಿನದಂದು ನಿಮ್ಮೊಂದಿಗೆ ನನ್ನ ಮೊದಲನೆಯ ಚಿತ್ರ ‘ಸಿಟಿ ಲೈಟ್ಸ್’ನ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಿದ್ದೇನೆ. ‘ಸಲಗ’ ಹಾಗೂ ‘ಭೀಮ’ ಚಿತ್ರದ ಯಶಸ್ಸಿನ ನಂತರ ನನ್ನ ಅಪ್ಪ ವಿಜಯ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಚಿತ್ರ ಇದಾಗಿದೆ. ಇಂತಹ ಅದ್ಭುತ ತಂಡದೊಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಮತ್ತು ಪ್ರೋತ್ಸಾಹ ಸದಾ ನಮ್ಮ ಮೇಲಿರಲಿ ಎಂದು ಮೋನಿಷಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಮೋನಿಷಾ ವಿಜಯ ಕುಮಾರ್ (Monisha Vijay Kumar) ಹೆಸರಿನಲ್ಲಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸಂಪೂರ್ಣ ತಯಾರಿಯೊಂದಿಗೆ ಅಖಾಡಕ್ಕೆ ಇಳಿದಿದ್ದಾರೆ. ಮೋನಿಷಾ ನಟನೆಯ ಮೊದಲ ಸಿನಿಮಾಗೆ ‘ಸಿಟಿ ಲೈಟ್ಸ್’ (City Lights) ಎಂದು ಟೈಟಲ್ ಇಡಲಾಗಿದೆ. ‘ಜವಾಬ್ ದಾರಿ ದೀಪಗಳು’ ಅನ್ನೋ ಟ್ಯಾಗ್ ಲೈನ್ ಕೂಡ ಈ ಸಿನಿಮಾಕ್ಕಿದೆ. ಸಿನಿಮಾ ಯಾವಾಗ ಆರಂಭವಾಗಲಿದೆ ಎಂಬುದರ ಬಗ್ಗೆ ಇನ್ನಷ್ಟೇ ಅಪ್‌ಡೇಟ್ ಹೊರಬೀಳಬೇಕಿದೆ.
ಇನ್ನೂ ವಿಶೇಷ ಅಂದರೆ, ಮಗಳ ಚೊಚ್ಚಲ ಸಿನಿಮಾ ದುನಿಯ್ ವಿಜಯ್ ಅವರೇ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ತುಂಬಾ ಕನಸುಗಳನ್ನು ಕಟ್ಟಿಕೊಂಡು ಬೆಂಗಳೂರು ಮಹಾನಗರಕ್ಕೆ ಬರುವವರ ಸುತ್ತ ಮಾಡಿರುವ ಅಪರೂಪದ ಕಥೆ ಹೇಳೋಕೆ ವಿಜಯ್ ಕುಮಾರ್ ಹೊರಟಿದ್ದಾರೆ. ಹಳ್ಳಿ ಹುಡುಗಿಯ ಮುಗ್ಧ ಪಾತ್ರದಲ್ಲಿ ಮೋನಿಷಾ ನಟಿಸುತ್ತಿದ್ದಾರೆ. ‘ಸಿಟಿ ಲೈಟ್ಸ್’ ಪೋಸ್ಟರ್ ಲುಕ್‌ನಿಂದ ಸದ್ಯ ಅಭಿಮಾನಿಗಳಿಗೆ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.