‘ಸಲಾರ್’ ಪ್ರಮೋದ್- ಪೃಥ್ವಿ ಅಂಬರ್ ನಟನೆಯ ‘ಭುವನಂ ಗಗನಂ’ ಚಿತ್ರದ ಶೂಟಿಂಗ್ ಕಂಪ್ಲೀಟ್

Public TV
3 Min Read
pruthvi ambar 3 1

‘ಭುವನಂ ಗಗನಂ’ (Bhuvanam Gaganam Film) ಸಿನಿಮಾ ತನ್ನ ಟೈಟಲ್ ಮೂಲಕ ಗಾಂಧಿನಗರದ ಟಾಕ್ ಐಟಂ ಎನಿಸಿಕೊಂಡಿದೆ. ‘ಸಲಾರ್’ (Salaar) ಸಿನಿಮಾ ಖ್ಯಾತಿ ಪ್ರಮೋದ್, ‘ದಿಯಾ’ (Dia) ಖ್ಯಾತಿಯ ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಬೆಂಗಳೂರಿನ ಹೆಸರಘಟ್ಟದಲ್ಲಿ ಅದ್ಧೂರಿ ಸೆಟ್ ಹಾಕಿ ಕೊನೆ ದಿನ ಚಿತ್ರೀಕರಣ ನಡೆಸಲಾಗಿದೆ. ಈ ವೇಳೆ, ಚಿತ್ರತಂಡ ಮಾಧ್ಯಮದರೊಂದಿಗೆ ಮಾಹಿತಿ ಹಂಚಿಕೊಂಡಿದೆ.

Pruthvi Ambar 1

ನಟ ಪ್ರಮೋದ್ (Pramod) ಮಾತನಾಡಿ, ನನ್ನ ಭಾಗದ ಶೂಟಿಂಗ್ ಅಕ್ಟೋಬರ್ ತಿಂಗಳಲ್ಲಿಯೇ ಮುಗಿತ್ತು. ತುಂಬಾ ಚೆನ್ನಾಗಿ ಮೂಡಿಬಂದಿದೆ. ಅದ್ಭುತ ಶೂಟಿಂಗ್ ಸೆಟ್ ಹಾಕಿದ್ದಾರೆ. ಇದಕ್ಕೆಲ್ಲಾ ಮುನೇಗೌಡರ ಬೆಂಬಲವಿದೆ. ಅವರಿಗೆ ಸಿನಿಮಾ ಮೇಲೆ ಹೆಚ್ಚು ಫ್ಯಾಷನ್ ಇದೆ. ಸ್ಕ್ರಿನ್‌ ಪ್ಲೇ ಅದ್ಭುತವಾಗಿದೆ. ಈ ಚಿತ್ರದಲ್ಲಿ ನಾನು ಸ್ಟೈಲೀಶ್ ಆಗಿ ಲವ್ ಬಾಯ್ ಆಗಿ ಕಾಣಿಸಿಕೊಂಡಿದ್ದೇನೆ ಎಂದರು. ಇದನ್ನೂ ಓದಿ:ದೊಡ್ಮನೆಯಲ್ಲಿ ಬಿಗ್‌ ಫೈಟ್-‌ ಸಮರ್ಥ್‌ನ ಕೆನ್ನೆಗೆ ಬಾರಿಸಿ ಎಲಿಮಿನೇಟ್‌ ಆದ ಅಭಿಷೇಕ್‌

pramod 4

ನಟ ಪೃಥ್ವಿ ಅಂಬರ್ (Pruthvi Ambar) ಮಾತನಾಡಿ, ಮುನೇಗೌಡರ ಎಸ್‌ವಿಸಿ ಫಿಲ್ಮಂಸ್ ದೊಡ್ಡ ಸಂಸ್ಥೆಯಾಗಿ ಚಿತ್ರರಂಗದಲ್ಲಿ ಹೊರಹೊಮ್ಮಬೇಕು. ಒಬ್ಬ ಸ್ಟ್ರಾಂಗ್ ಪ್ರೊಡ್ಯೂಸರ್ ಸಿಗುವುದು ಕಷ್ಟ. ಈ ಕಂಟೆಂಟ್‌ಗೆ ಏನು ಬೇಕೋ ಅದನ್ನು ಮನಸಾರೆ, ತುಂಬಾ ಪ್ರೀತಿ ಇಟ್ಟು ಕೊಟ್ಟಿದ್ದಾರೆ. ಈ ಸಂಸ್ಥೆಯಿಂದ ತುಂಬಾ ಒಳ್ಳೆಯ ಸಿನಿಮಾಗಳು ಬರಬೇಕು. ನನ್ನ ಪಾತ್ರ ತುಂಬಾ ಭಿನ್ನವಾಗಿ ಮೂಡಿ ಬಂದಿದೆ. ಇಡೀ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು. ಇದನ್ನೂ ಓದಿ:ಗೆಳೆಯನ ಜೊತೆ ತಿಮ್ಮಪ್ಪನ ದರ್ಶನ ಮಾಡಿದ ಜಾಹ್ನವಿ ಕಪೂರ್

pruthvi ambar 1

ನಿರ್ದೇಶಕ ಗಿರೀಶ್ ಮೂಲಿಮನಿ ಮಾತನಾಡಿ, ಒಂದೂವರೆ ವರ್ಷದ ಹಿಂದೆ ‘ಭುವನಂ ಗಗನಂ’ ಜರ್ನಿ ಶುರುವಾಗಿತ್ತು. ಅಲ್ಲಿಂದ ಇಲ್ಲಿವರೆಗೆ ನಾವು ನಿಮ್ಮನ್ನು ಭೇಟಿಯಾಗಲು ಆಗಿರಲಿಲ್ಲ. ಈಗ ಚಿತ್ರೀಕರಣ ಮುಕ್ತಾಯಗೊಂಡಿದೆ. ಎಲ್ಲರ ಸಹಕಾರ ನಮ್ಮ ಸಿನಿಮಾ ಮೇಲೆ ಇರಲಿ ಎಂದರು.

pruthvi ambar 2ನಿರ್ಮಾಪಕ ಎಂ ಮುನೇಗೌಡ ಮಾತನಾಡಿ, ಒಂದೂವರೆ ವರ್ಷ ಹಿಂದೆ ಶುರುವಾದ ಜರ್ನಿ ಇದು. ಸುಮಾರು 75 ದಿನಗಳ ಕಾಲ ಮೈಸೂರು, ಹಾವೇರಿ, ಕುದುರೆಮುಖ, ಕಳಸ, ಕನ್ಯಾಕುಮಾರಿ, ಬೆಂಗಳೂರು ಇಷ್ಟು ಜಾಗ ಸುತ್ತಿಕೊಂಡು ಕೊನೆಯಲ್ಲಿ ಈ ಜಾಗದಲ್ಲಿ ಅದ್ಧೂರಿಯಾಗಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿದೆ. ಒಂದೊಳ್ಳೆ ಕಥೆ ಇಟ್ಕೊಂಡು ಸಿನಿಮಾ ಮಾಡಿದ್ದೇವೆ. ನನಗೆ ಹೋಪ್ ಇದೆ. ಈ ಸಿನಿಮಾ ಯಾವುದೋ ಒಂದು ರೇಂಜ್‌ನಲ್ಲಿ ಹೋಗುತ್ತದೆ ಎಂದರು.

pruthvi ambar 3

ಪೃಥ್ವಿ ಅಂಬಾರ್, ಸಲಾರ್ (Salaar) ಖ್ಯಾತಿಯ ಪ್ರಮೋದ್ ನಾಯಕರಾಗಿ ನಟಿಸ್ತಿರುವ ‘ಭುವನಂ ಗಗನಂ’ ಸಿನಿಮಾಗೆ ಗಿರೀಶ್ ಮೂಲಿಮನಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ರಾಜರು’ ಎಂಬ ಚಿತ್ರ ಮಾಡಿದ್ದರು. ಇದೀಗ ‘ಭುವನಂ ಗಗನಂ’ ಮೂಲಕ ಮತ್ತೊಂದು ಫ್ರೆಶ್ ಕಥೆಯನ್ನು ಹೇಳೋದಿಕ್ಕೆ ಬರುತ್ತಿದ್ದಾರೆ. ಕನ್ನಡ ಸಿನಿಮಾ ರಂಗಕ್ಕೆ ಅದ್ಭುತ ಸಿನಿಮಾಗಳನ್ನು ಕೊಡುಗೆಯಾಗಿ ನೀಡ್ಬೇಕೆಂಬ ಕನಸಿನೊಂದಿಗೆ ನಿರ್ಮಾಪಕ ಎಂ ಮುನೇಗೌಡ ತಮ್ಮದೇ ಎಸ್ ವಿಸಿ ಫಿಲ್ಮಂಸ್ ಪ್ರೊಡಕ್ಷನ್ ನಡಿ ‘ಭುವನಂ ಗಗನಂ’ಗೆ ಹಣ ಹಾಕಿದ್ದಾರೆ.

‘ಭುವನಂ ಗಗನಂ’ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಸಿನಿಮಾವಾಗಿದ್ದು, ನಗರ, ಹಳ್ಳಿ ಎರಡು ಬ್ಯಾಕ್ ಡ್ರಾಪ್‌ನಲ್ಲಿ ನಡೆಯುವ ಕಥೆಯಾಗಿದ್ದು, ಪ್ರಮೋದ್‌ಗೆ ಜೋಡಿಯಾಗಿ ‘ಲವ್ ಮಾಕ್ಟೇಲ್’ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ. ಉದಯ್ ಲೀಲಾ ಕ್ಯಾಮೆರಾ ಕೈಚಳಕ, ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಕಿಕ್, ಸುನೀಲ್ ಕಶ್ಯಪ್ ಸಂಕಲನ ಸಿನಿಮಾಕ್ಕಿದೆ.

Share This Article