‘ಸಲಾರ್’ (Salaar) ಮೊದಲ ಭಾಗವೇ ಇನ್ನೂ ರಿಲೀಸ್ ಆಗಿಲ್ಲ. ಅದಾಗಲೇ ಎರಡನೇ ಭಾಗದ ಬಿಡುಗಡೆ ದಿನಾಂಕ ಗೊತ್ತಾಗಿ ಬಿಡುತ್ತದಾ? ಅನುಮಾನ ಎದ್ದಿದೆ. ಈಗಾಗಲೇ ಹಲವು ಬಾರಿ ಬಿಡುಗಡೆ ಮುಂದೆ ಹೋಗಿದೆ. ಹೀಗಿರುವಾಗ ಎರಡನೇ ಭಾಗದ Salaar 2) ಬಿಡುಗಡೆ ದಿನಾಂಕ ಎಲ್ಲಿ ಹೇಗೆ ಗೊತ್ತಾಗಲಿದೆ? ಅದು ನಿಜವಾ? ಇಲ್ಲಿದೆ ಮಾಹಿತಿ.
ಸಲಾರ್ ಇನ್ನೇನು ಎರಡು ತಿಂಗಳಲ್ಲಿ ಹಾಜರಾಗಲಿದೆ. ಈಗಾಗಲೇ ಎರಡು ಬಾರಿ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಪ್ರಭಾಸ್ (Prabhas) ಫ್ಯಾನ್ಸ್ ಕೊತ ಕೊತ ಕುದಿಯುತ್ತಿದ್ದಾರೆ. ಆದರೆ ಬೇಸರ ಮಾಡಿಕೊಂಡಿಲ್ಲ. ಕಾರಣ ಸಿನಿಮಾ ಅದ್ಭುತವಾಗಿ ಮೂಡಬೇಕೆಂದು ಪ್ರಶಾಂತ್ ನೀಲ್ ಒದ್ದಾಡುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತು. ಈ ಹೊತ್ತಲ್ಲೇ ‘ಸಲಾರ್’ (Salaar 2) ಎರಡನೇ ಭಾಗದ ಬಿಡುಗಡೆ ದಿನಾಂಕವನ್ನು ಸಲಾರ್ ಮೊದಲ ಭಾಗದ ಕೊನೆಯಲ್ಲಿ ಅನೌನ್ಸ್ ಮಾಡಲಿದೆ ನಿರ್ಮಾಣ ಸಂಸ್ಥೆ ಎನ್ನುವ ಸುದ್ದಿ ಕಿಡಿ ಹೊತ್ತಿಸಿದೆ. ಇದನ್ನೂ ಓದಿ:Breaking: ಬಿಗ್ ಬಾಸ್ ಮನೆಯಿಂದ ರಕ್ಷಕ್ ಬುಲೆಟ್ ಔಟ್
‘ಸಲಾರ್’ ಸಿನಿಮಾದ ಕೊನೆಯಲ್ಲಿ ಇದು ಅನೌನ್ಸ್ ಆಗಲಿದೆಯಂತೆ. ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಸಲಾರ್ ಎರಡನೇ ಭಾಗ ಬರಲಿದೆ ಎನ್ನುವುದು ಸದ್ಯಕ್ಕೆ ಸಿಕ್ಕ ಮಾಹಿತಿ. ಇದರ ಅರ್ಥ ಏನು? ಈಗಾಗಲೇ ಎರಡನೇ ಭಾಗದ ಶೂಟಿಂಗ್ ಮುಗಿದಿದೆಯಾ? ಅಥವಾ ಸ್ವಲ್ಪ ಮಟ್ಟಿಗೆ ಮುಗಿಸಿದ್ದಾರಾ? ಬಾಕಿಯನ್ನು ಸದ್ಯದಲ್ಲೇ ಆರಂಭ ಮಾಡಲಿದ್ದಾರಾ? ಎಲ್ಲವೂ ಪ್ರಶ್ನೆಗಳೇ. ಹೀಗಿರುವಾಗ ಮೊದಲು ಮೊದಲ ಭಾಗ ಬರಲಿ, ಆಮೇಲೆ ಎರಡರ ಕತೆ ನೋಡೋಣ ಅಂತಿದ್ದಾರೆ ಫ್ಯಾನ್ಸ್.