ಹೈದರಾಬಾದ್: ಟಾಲಿವುಡ್ ಅಂಗಳದ ಬಹುನಿರೀಕ್ಷಿತ ಸಲಾರ್ ಸಿನಿಮಾದಲ್ಲಿ ನಟ ಜಗಪತಿ ಬಾಬು ಅವರ ಖಡಕ್ ಫಸ್ಟ್ ಲುಕ್ ರಿವೀಲ್ ಆಗಿದೆ.
Advertisement
ಟಾಲಿವುಡ್ ಬಾಹುಬಲಿ ಪ್ರಭಾಸ್ ನಟನೆಯ ಹಾಗೂ ಕೆಜಿಎಫ್ ಸೂತ್ರದಾರ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ದೊಡ್ಡಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾ ಕುರಿತಾಗಿ ನಿರ್ದೇಶಕರು ಮತ್ತಷ್ಟು ಕ್ಯೂರಾಟಿಸಿ ಹುಟ್ಟಿಸುವ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.
Advertisement
Introducing #Rajamanaar. Thank you @IamJagguBhai garu for being a part of #Salaar.#Prabhas @shrutihaasan @VKiragandur @hombalefilms @HombaleGroup @bhuvangowda84 @BasrurRavi @shivakumarart @anbariv pic.twitter.com/BXbdrETQEF
— Prashanth Neel (@prashanth_neel) August 23, 2021
Advertisement
ಸಲಾರ್ ಸಿನಿಮಾ ಅಪ್‍ಡೇಟ್‍ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗ ಚಿತ್ರತಂಡ ರಾಜಮನಾರ್ ಪಾತ್ರವನ್ನು ಪರಿಚಯಿಸಿದೆ. ಇದರಲ್ಲಿ ಟಾಲಿವುಡ್‍ನ ಖ್ಯಾತ ನಟ ಜಗಪತಿ ಬಾಬು ನಟಿಸುತ್ತಿದ್ದಾರೆ. ಇವರ ಪಾತ್ರದ ಕುರಿತಾಗಿ ಪ್ರಶಾಂತ್ ನೀಲ್ ಪೋಸ್ಟರ್ ಟ್ವೀಟ್ ಮಾಡುವ ಮೂಲಕವಾಗಿ ಅಭಿಮಾನಿಗಳಿಗೆ ಸಿನಿಮಾದಲ್ಲಿರುವ ಖಡಕ್ ಪಾತ್ರದ ಕುರಿತಾಗಿ ಪರಿಚಯ ಮಾಡಿಕೊಟ್ಟಿದ್ದಾರೆ.
Advertisement
Introducing @IamJagguBhai as ???????????????????????????????????????? from #Salaar.#Prabhas @prashanth_neel @shrutihaasan @VKiragandur @hombalefilms @HombaleGroup pic.twitter.com/KGWW2fwBD8
— Hombale Films (@hombalefilms) August 23, 2021
ಈಗ ಚಿತ್ರತಂಡ ರಾಜಮನಾರ್ ಪಾತ್ರವನ್ನು ಪರಿಚಯಿಸಿದೆ. ಇದರಲ್ಲಿ ಟಾಲಿವುಡ್‍ನ ಖ್ಯಾತ ನಟ ಜಗಪತಿ ಬಾಬು ಈ ಪಾತ್ರದಲ್ಲಿ ಖಡಖ್ ಲುಕ್‍ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಬಿಡುಗಡೆಮಾಡಲಾಗಿದೆ. ಜಗಪತಿ ಬಾಬು ವಿಲನ್ ಪಾತ್ರಗಳ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಬಿಗ್ ಬಜೆಟ್‍ನಲ್ಲಿ ನಿರ್ಮಾಣ ಆಗುತ್ತಿರುವ ಸಲಾರ್ ಮೇಲೆ ಪ್ರಭಾಸ್ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ಬಿಜೆಪಿ ಬಾವುಟ – ಕಾಂಗ್ರೆಸ್, ಟಿಎಂಸಿ ಪ್ರಶ್ನೆ
ಜಗಪತಿ ಬಾಬು ಸಲಾರ್ ಗೆ ವಿಲನ್ ಆಗುತ್ತಾರೆ ಎನ್ನುವ ವಿಚಾರ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಅವರ ಖಡಕ್ ಲುಕ್ ನೋಡಿ ಫ್ಯಾನ್ಸ್ ಸಾಕಷ್ಟು ಖುಷಿಪಟ್ಟಿದ್ದಾರೆ. ಸಲಾರ್ ಸಿನಿಮಾದಲ್ಲಿ ಜಗಪತಿ ಬಾಬು ಖಡಲ್ ಅವತಾರ ಹೇಗೆ ಇರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.