ಹಾಲಿವುಡ್‌ನಲ್ಲಿ ಪ್ರಭಾಸ್ ಅಬ್ಬರ- ‘ಸಲಾರ್’ ರಿಲೀಸ್‌ಗೆ ಡೇಟ್ ಫಿಕ್ಸ್

Public TV
1 Min Read
salara 2

ಒಂದರ ಹಿಂದೊಂದು ಸಿನಿಮಾ ಫ್ಲಾಪ್ ಆಗುತ್ತಿದ್ದರೂ ಪ್ರಭಾಸ್ (Prabhas) ಹವಾ ಕಮ್ಮಿಯಾಗಿಲ್ಲ. ನನ್ನ ಹಾದಿ ನನ್ನದು ಎನ್ನುತ್ತಾ ನುಗ್ಗುತ್ತಿದ್ದಾರೆ. ಇದೀಗ ಸಲಾರ್ ಬಿಡುಗಡೆಗೆ ಸಿದ್ಧವಾಗಿದೆ. ದಿನಾಂಕ ನಿಗದಿಯಾಗಿದೆ. ಆದರೆ ಇಂಗ್ಲಿಷ್ ವರ್ಶನ್ ಸಲಾರ್ ಯಾವಾಗ ಬರಲಿದೆ? ಅದಕ್ಕೆ ಬೇರೊಂದು ದಿನ ಯಾಕೆ ಫಿಕ್ಸ್ ಮಾಡಿದರು? ಇಲ್ಲಿದೆ ಮಾಹಿತಿ.

Prabhas 2

ಸಾಹೋ, ರಾಧೇಶ್ಯಾಮ್ ಹಾಗೂ ಆದಿಪುರುಷ್. ಮೂರೂ ಅನಾಥವಾದವು. ಪ್ರಭಾಸ್ ಕತೆ ಮುಗಿಯಿತೆಂದು ಕಾದಿದ್ದವರಿಗೆ ಸಲಾರ್ (Salaar)  ಹಾಗೂ ಕಲ್ಕಿ ಕೊಟ್ಟ ಕಿಕ್ ಹೇಗಿತ್ತೆಂದು ಎಲ್ಲರಿಗೂ ಗೊತ್ತಿದೆ. ಈ ಎರಡು ಸಿನಿಮಾಗಳ ಟೀಸರ್ ಹಬ್ಬ ಮಾಡಿದ್ದು ಇಡೀ ವಿಶ್ವವನ್ನೇ ದಿಕ್ಕೆಡಿಸಿದವು. ಪ್ರಭಾಸ್ ಫ್ಯಾನ್ಸ್ ಮತ್ತೆ ಮೈ ಕೊಡವಿ ಎದ್ದು ನಿಂತರು. ಪ್ರಭಾಸ್ ಕೂಡ ಹೊಸ ಹುರುಪಿನಿಂದ ಅಖಾಡಕ್ಕೆ ಇಳಿದರು. ಸದ್ಯಕ್ಕೆ ಸಲಾರ್, ಕಲ್ಕಿ ಹಾಗೂ ರಾಜಾ ಡಿಲಕ್ಸ್ ಬಾಕಿ ಕೆಲಸ ಮುಗಿಸುತ್ತಿದ್ದಾರೆ. ಈಗಲೇ ಮತ್ತೊಂದು ಹಬ್ಬಕ್ಕೆ ಸಜ್ಜಾಗಿದೆ ಭಕ್ತಗಣ. ಇದನ್ನೂ ಓದಿ:ಸಾಗರದಾಚೆ ಯಶ್ ಪಯಣ: ಮುಂದಿನ ಚಿತ್ರಕ್ಕಿದೆಯಾ ನಂಟು?

prabhas

ಮೂರು ಸಿನಿಮಾ ಸೋತದ್ದನ್ನು ಫ್ಯಾನ್ಸ್ ಮರೆತಿದ್ದಾರೆ. ಸಲಾರ್ ಇನ್ನೆರಡು ತಿಂಗಳಿಗೆ ಮೆರವಣಿಗೆ ಹೊರಡಲಿದೆ. ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಲಿದೆ. ಅದರ ಇಂಗ್ಲಿಷ್ ವರ್ಶನ್ ಕೂಡ ನಿರ್ಮಾಣವಾಗುತ್ತಿದೆ. ಅದ್ಯಾವಾಗ ಬರಲಿದೆ? ಈ ಪ್ರಶ್ನೆಗೆ ಪಕ್ಕಾ ದಿನಾಂಕ ಸಿಗದಿದ್ದರೂ. ಅಕ್ಟೋಬರ್ ಎರಡನೇ ವಾರದಲ್ಲಿ ಹಾಲಿವುಡ್‌ನಲ್ಲಿ (Hollywood) ಪ್ರಭಾಸ್ ಮೆರವಣಿಗೆ ಹೊರಡಲಿದ್ದಾರೆ ಎನ್ನುತ್ತವೆ ಮೂಲ. ಮೊದಲ ಬಾರಿ ಪ್ರಭಾಸ್ ಇಂಗ್ಲಿಷ್‌ನಲ್ಲೂ ಕಾಣಿಸಲಿದ್ದಾರೆ. ಏನಾಗಲಿದೆಯೋ ಹಾಲಿವುಡ್ ಪ್ರಯಾಣ?

ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಕೈಚಳಕ ಪ್ಲಸ್ ಬಾಹುಬಲಿ ಪ್ರಭಾಸ್ ನಟನೆಯ ಅಬ್ಬರ. ಇದು ಎರಡು ಸಲಾರ್ ಸಿನಿಮಾದ ಶಕ್ತಿಯಾಗಿದ್ದು, ಬಹುಭಾಷೆಗಳ ಜೊತೆ ಹಾಲಿವುಡ್‌ನಲ್ಲೂ ಪ್ರಭಾಸ್ ಗೆದ್ದು ಬೀಗುತ್ತಾರಾ ಕಾದುನೋಡಬೇಕಿದೆ.

Share This Article