ಸೌತ್ ನಟಿ ಶ್ರುತಿ ಹಾಸನ್ (Shruti Haasan) ಇತ್ತೀಚೆಗೆ ಬಹುಕಾಲದ ಗೆಳೆಯ ಶಾಂತನು (Santanu Hazarika) ಜೊತೆಗಿನ ಸಂಬಂಧಕ್ಕೆ ಅಂತ್ಯ ಹಾಡಿದರು. ತಮ್ಮ ಖಾಸಗಿ ಬದುಕಿನ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಾದ ಬೆನ್ನಲ್ಲೇ ಈಗ ತಮಗಿರುವ ಆರೋಗ್ಯ ಸಮಸ್ಯೆ ಬಗ್ಗೆ ನಟಿ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
ತನಗೆ ಪಿಸಿಓಎಸ್ ಸಮಸ್ಯೆ ಇದೆ ಎಂಬ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಮೊದಲ ಪಿರಿಯಡ್ ಆದಾಗಲೇ ದೊಡ್ಡ ಹೆಣಗಾಟವಾಗಿತ್ತು. ಈಗಲೂ ಆ ನೋವನ್ನು ಭರಿಸುತ್ತಿದ್ದೇನೆ ಎಂದಿದ್ದಾರೆ. ಈ ಪಿರಿಯಡ್ ಸಮಯದಲ್ಲಿ ಯಾವುದೇ ಕೆಲಸವನ್ನು ಸರಿಯಾಗಿ ಮಾಡಲಾಗುವುದಿಲ್ಲ. ಇದರಿಂದಾಗಿ ನಾನು ಸಾಕಷ್ಟು ದೊಡ್ಡ ದೊಡ್ಡ ಆಫರ್‌ಗಳನ್ನು ಕಳೆದುಕೊಂಡಿದ್ದೇನೆ. ಆದರೆ ಕೆಲವು ನಿರ್ಮಾಪಕರು ಕೋಟಿಗಟ್ಟಲೆ ಖರ್ಚು ಮಾಡಿ ಶೂಟಿಂಗ್ ಮಾಡುತ್ತಿರುವಾಗ ನಿಮ್ಮ ಆರೋಗ್ಯ ಸಮಸ್ಯೆಯಿಂದ ಮುಂದೂಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಇದನ್ನೂ ಓದಿ:ತಮಿಳು ನಟ ರಜನಿಕಾಂತ್ ಟೆಂಪಲ್ ರನ್
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಮಹಿಳೆಯರಲ್ಲಿ ಭಾರೀ ರಕ್ತಸ್ರಾವವನ್ನು ಉಂಟುಮಾಡುತ್ತದೆ. ಅಲ್ಲದೇ ಈ ಕಾಯಿಲೆ ಇರುವವರಲ್ಲಿ ಅನೇಕರಿಗೆ ಮಕ್ಕಳೂ ಸಹ ಆಗುವುದಿಲ್ಲ ಎಂದು ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ನಟಿ ಹೇಳಿಕೊಂಡಿದ್ದಾರೆ.
ಅಂದಹಾಗೆ, ಚೆನ್ನೈ ಸ್ಟೋರಿಸ್, ಸಲಾರ್ 2 ಸೇರಿದಂತೆ ಹಲವು ಸಿನಿಮಾಗಳು ಶ್ರುತಿ ಹಾಸನ್ ಕೈಯಲ್ಲಿವೆ.