‘ಸಲಾರ್’ (Salaar) ನಟಿ ಶ್ರುತಿ ಹಾಸನ್ (Shruti Haasan) ಇತ್ತೀಚೆಗೆ ಶಾಂತನು ಹಜಾರಿಕಾ (Santanu Hazarika) ಜೊತೆ ಬ್ರೇಕಪ್ ಮಾಡಿಕೊಂಡರು. ಇದೀಗ ಸಿಂಗಲ್ ಇರುವ ನಟಿ, ಬ್ರೇಕಪ್ ಕುರಿತಂತೆ ಗೀತೆ ರಚಿಸಿ ಆ ಹಾಡಿಗೆ ಶ್ರುತಿ ದನಿಯಾಗಿದ್ದಾರೆ. ಬ್ರೇಕಪ್ (Breakup) ಮತ್ತು ಸೆಲ್ಫ್ ಲವ್ ಬಗ್ಗೆ ಹಾಡಿನ ಮೂಲಕ ನಟಿ ತಿಳಿಸಿದ್ದಾರೆ. ಸದ್ಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿವ್ಸ್ ಪಡೆದುಕೊಳ್ಳುತ್ತಿದೆ.
ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್‌ಗೆ ಚಿತ್ರರಂಗದಲ್ಲಿ ಭಾರೀ ಬೇಡಿಕೆ ಇದೆ. ಆದರೆ ಸಿನಿಮಾಗಿಂತ ಖಾಸಗಿ ಬದುಕಿನ ವಿಚಾರವಾಗಿ ಹೆಚ್ಚೆಚ್ಚು ಸುದ್ದಿಯಾಗುತ್ತಿದ್ದಾರೆ. ಇನ್ನೇನು ಬಹುಕಾಲದ ಗೆಳೆಯ ಶಾಂತನು ಜೊತೆ ಶ್ರುತಿ ಮದುವೆ ಸುದ್ದಿ ವೈರಲ್ ಆಗುತ್ತಿದ್ದಂತೆ ಬ್ರೇಕಪ್ ನ್ಯೂಸ್ ಕೊಟ್ಟು ನಟಿ ಶಾಕ್ ಕೊಟ್ಟಿದ್ದರು. ಇದನ್ನೂ ಓದಿ:ಸಂದೇಶ್ ಪ್ರೊಡಕ್ಷನ್ಸ್ ಜತೆ ಕೈ ಜೋಡಿಸಿದ ಕಿಚ್ಚ ಸುದೀಪ್
View this post on Instagram
ಸದ್ಯ ಮಾಜಿ ಗೆಳೆಯನ ಜೊತೆ ಬೇರೆಯಾದ್ಮೇಲೆ ಜೀವನ ಹೇಗಿದೆ ಎಂದು ತಮ್ಮ ಹಾಡಿನ ಮೂಲಕ ನಟಿ ಸುಳಿವು ನೀಡಿದ್ದಾರೆ. ನನ್ನ ಹೃದಯದ ಬಾಗಿಲು ಮುಚ್ಚಿದೆ. ಪ್ರೀತಿ ಎನ್ನುವ ಬೀಗದ ಕೈ ಬೇಕಿಲ್ಲ ಎನ್ನುವ ಅರ್ಥದಲ್ಲಿ ನಟಿ ಹಾಡಿದ್ದಾರೆ. ನಟಿಯ ಹಾಡಿಗೆ ನೆಟ್ಟಿಗರಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿದೆ.
ಅಂದಹಾಗೆ, ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಜೊತೆಗಿನ ‘ಸಲಾರ್’ ಬಳಿಕ ಇದೀಗ ‘ಚೆನ್ನೈ ಸ್ಟೋರಿಸ್’, ಸಲಾರ್ ಪಾರ್ಟ್ 2 ಸೇರಿದಂತೆ ಹಲವು ಸಿನಿಮಾಗಳು ಅವರ ಕೈಯಲ್ಲಿವೆ.