ಸದ್ಯಕ್ಕೆ ‘ಸಲಾರ್ 2’ ಅನುಮಾನ: ಪ್ರಭಾಸ್ ಇದಕ್ಕೆ ಕಾರಣ

Public TV
1 Min Read
salaar1 3

ಪ್ರಭಾಸ್ (Prabhas) ನಟನೆಯ ಸಲಾರ್ ಸಿನಿಮಾ ಬಾಕ್ಸಾಫೀಸಿನಲ್ಲಿ ಸಖತ್ ಸದ್ದು ಮಾಡಿತ್ತು. ಈಗಲೂ ಕೆಲವರು ಸಲಾರ್ ಸಿನಿಮಾದ ಗುಂಗಿನಲ್ಲೇ ಇದ್ದಾರೆ. ಈ ನಡುವೆ ಸಲಾರ್ 2 (Salaar 2) ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳು ಹೊರ ಬಿದ್ದಿದ್ದವು. ಇದೇ ಏಪ್ರಿಲ್ ಕೊನೆಯ ವಾರದಿಂದ ಸಲಾರ್ 2 ಚಿತ್ರದ ಶೂಟಿಂಗ್ ಕೆಲಸದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ (Prashant Neel) ತೊಡಗಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸದ್ಯಕ್ಕೆ ಸಲಾರ್ ಅನುಮಾನ ಎನ್ನುವ ಮಾಹಿತಿ ಹೊರ ಬಿದ್ದಿದೆ.

Salaar 1

ಸದ್ಯ ಪ್ರಭಾಸ್ ಕಲ್ಕಿ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕಲ್ಕಿ ಮುಗಿಯುತ್ತಿದ್ದಂತೆಯೇ ‘ದಿ ರಾಜ ಸಾಬ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿದೆ. ಇದರ ನಂತರ ಸ್ಪಿರಿಟ್ ಚಿತ್ರಕ್ಕೆ ಅವರು ಕಾಲ್ ಶೀಟ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎರಡೂ ಸಿನಿಮಾ ಮುಗಿಯೋಕೆ ಕನಿಷ್ಠ ಎರಡು ವರ್ಷಗಳಾದರೂ ಬೇಕು. ಹಾಗಾಗಿ ಸದ್ಯಕ್ಕೆ ಸಲಾರ್ 2 ಸೆಟ್ಟೇರುವುದು ಅನುಮಾನ.

Salaar 2

ಈ ಹಿಂದೆ ಆಂಗ್ಲ ವೆಬ್ ಸೈಟ್ ಜೊತೆ ನಿರ್ಮಾಪಕ ವಿಜಯ ಕಿರಗಂದೂರು (Vijaya Kirgandur) ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದರು. ಅದರ ಪ್ರಕಾರ ಸಲಾರ್ 2 ಸಿನಿಮಾ 2025ರಲ್ಲಿ ಬಿಡುಗಡೆ ಆಗಲಿದೆಯಂತೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ, ಈಗಾಗಲೇ ಸಲಾರ್ 2 ಸಿನಿಮಾದ ಸ್ಕ್ರಿಪ್ಟ್ ರೆಡಿಯಾಗಿದ್ದು, ಸಲಾರ್ ಸಿನಿಮಾಗಿಂತಲೂ ಸಲಾರ್ 2 ಇನ್ನೂ ಅದ್ಧೂರಿಯಾಗಿ ಇರಲಿದೆ ಎಂದು ವಿಜಯ್ ತಿಳಿಸಿದ್ದರು.

 

‘ಸಲಾರ್ ’ ಪ್ಯಾನ್‍ ಇಂಡಿಯಾ ಚಿತ್ರವಾದರೂ, ಈ ಚಿತ್ರದ ಹಿಂದಿರುವ ತಾಂತ್ರಿಕ ತಂಡದವರೆಲ್ಲರೂ ಕನ್ನಡದವರಾಗಿದ್ದರು. ನಿರ್ಮಾಪಕರಾದ ವಿಜಯ್‍ ಕಿರಗಂದೂರು, ನಿರ್ದೇಶಕ ಪ್ರಶಾಂತ್‍ ನೀಲ್‍ , ಛಾಯಾಗ್ರಾಹಕ ಭುವನ್‍ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಚಿತ್ರದಲ್ಲಿ ಕೆಲಸ ಮಾಡಿರುವ ಹಲವು ತಂತ್ರಜ್ಞರು ಹಾಗೂ ಕಲಾವಿದರು  ಈ ನೆಲದ ಮಣ್ಣಿನವರಾಗಿದ್ದು, ಇದು ಕನ್ನಡದ ಪ್ರತಿಭಾ ಸಂಪತ್ತಿನ ಒಂದು ಉದಾಹರಣೆಯಷ್ಟೇ.

Share This Article