ಮುಂಬೈ: ಅತ್ಯಾಚಾರಕ್ಕೊಳಗಾಗಿ ಸಾವು- ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ಮಹಿಳೆ ಸಾವನ್ನಪ್ಪಿದ್ದು, ಇದೀಗ ಕಾಮುಕ ಆರೋಪಿಯನ್ನು ಸೆಪ್ಟೆಂಬರ್ 21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಯನ್ನು ಮೋಹನ್ ಚೌಹಾಣ್ ಎಂದು ಗುರುತಿಸಲಾಗಿದೆ. ಈತ 30 ವರ್ಷದ ಮಹಿಳೆಯನ್ನು ನಿಂತಿದ್ದ ಟೆಂಪೋದೊಳಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ಮಹಿಳೆಯ ಖಾಸಗಿ ಅಂಗಕ್ಕೆ ರಾಡ್ ತುರುಕಿ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಪ್ರಕರಣದಂತೆ ವಿಕೃತಿ ಮೆರೆದಿದ್ದಾನೆ. ಇದನ್ನೂ ಓದಿ: ಮುಂಬೈ ಅತ್ಯಾಚಾರ ಪ್ರಕರಣ- ಚಿಕಿತ್ಸೆ ಫಲಿಸದೆ ಮೃತಪಟ್ಟ ಸಂತ್ರಸ್ತೆ
ಅಲ್ಲದೆ ತನ್ನ ಕಾಮತೃಷೆ ತೀರಿಸಿಕೊಂಡ ಕಾಮುಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇತ್ತ ಘಟನೆಯಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ನೋಡಿ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಪೊಲೀಸರು ಮಹಿಳೆಯನ್ನು ಚಿಕಿತ್ಸೆಗಾಗಿ ರಾಜವಾಡಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ 33 ಗಂಟೆಗಳ ಹೋರಾಟದ ನಂತರ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಹಿಂದೂ ಹುಡುಗಿಯರ ತಂಟೆಗೆ ಬಂದ್ರೆ ಸುಮ್ನಿರಲ್ಲ: ಗುಜರಾತ್ ಸಿಎಂ
ಸಂತ್ರಸ್ತೆ ಸಾವಿನ ಬಳಿಕ ಆರೋಪಿ ಮೋಹನ್ ಚೌಹಾಣ್ ನನ್ನು ಪೊಲೀಸರು ಬಾಂದ್ರಾ ನ್ಯಾಯಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಯನ್ನು ಸೆಪ್ಟೆಂಬರ್ 21ರ ತನಕ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮಹಿಳೆಯ ಸಾವಿಗೂ ಮುನ್ನ ಪೊಲೀಸರು ಆರೋಪಿಯ ಮಾನಭಂಗ, ಕೊಲೆ ಯತ್ನ ಎಂಬಿತ್ಯಾದಿ ಕೇಸ್ ಗಳನ್ನು ಹಾಕಿದ್ದರು. ಮಹಿಳೆಯ ಸಾವಿನ ನಂತರ ಕೊಲೆ ಎಂದು ಬದಲಾಯಿಸಲಾಗಿದೆ ಎಂದು ವರದಿಗಳು ತಿಳಿಸಿವೆ.