ಬೆಂಗಳೂರು: ಭೂ ಮಾಪನ ಇಲಾಖೆಯ ಆಯುಕ್ತ ಮುನಿಶ್ ಮೌದ್ಗಿಲ್ ಯಾವುದೇ ನೋಟಿಸ್ ನೀಡದೇ ಸಕಾಲ ಮತ್ತು ಮೋಜಿಣಿ ಆಪರೇಟರ್‍ಗಳನ್ನು ಕೆಲಸದಿಂದ ವಜಾ ಮಾಡಿದ್ದಾರೆ.
ರಾಜಾದ್ಯಂತ ಇರುವ ನೂರಾರು ಆಪರೇಟರ್‍ಗಳನ್ನ ವಜಾ ಮಾಡಿದ್ದು, 2005ರಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು. ಈಗ ಏಕಾಏಕಿ ವಜಾ ಮಾಡಿದ್ದು, ಆಪರೇಟರ್‍ಗಳು ಕೋರ್ಟ್ ಮೊರೆಹೋಗಿ ಸ್ಟೇ ಆರ್ಡರ್ ತಂದಿದ್ದಾರೆ.
Advertisement
ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ. ರಾಜ್ಯಪಾಲರ ಪರವಾಗಿ ಸಕಾಲ ಇಲಾಖೆಯು ನೇಮಕ ಮಾಡಿಕೊಳ್ಳುವಂತೆ ಆದೇಶ ಪ್ರತಿ ತಂದಿದ್ರು. ರಾಜ್ಯಪಾಲರ ಆದೇಶಕ್ಕೂ ಇಲಾಖೆ ಆಯುಕ್ತ ಬೆಲೆ ಕೊಡುತ್ತಿಲ್ಲ. ಇದರ ಭೂಮಾಪನ ಇಲಾಖೆಯ ಆಯುಕ್ತ ಮುನಿಶ್ ಮುದ್ಗಿಲ್ ಜೊತೆ ಆಪರೇಟರ್‍ಗಳು ಎಷ್ಟು ಬೇಡಿಕೊಂಡ್ರು ಅಸಡ್ಡೆಯಾಗಿ ಮಾತನಾಡಿದ್ದಾರೆ ಅಂತ ಆರೋಪಿಸಲಾಗಿದೆ.
Advertisement
Advertisement
ಆಯುಕ್ತ ಮುನಿಶ್ ಮೌದ್ಗಿಲ್ ಜೊತೆ ಮೋಜಿನಿ ಆಪರೇಟರ್ ನಡೆಸಿದ ಫೋನ್ ಸಂಭಾಷಣೆ ಕೆಳಗಿನಂತಿದೆ:
ಮುನಿಶ್ ಮೌದಿಲ್ : ನಾನು ಬ್ಯುಸಿ ಇದ್ದೀನಿ.. ಭೇಟಿ ಮಡೋದಕ್ಕೆ ಆಗಲ್ಲ. ನಾನು ನಿಮ್ಮನ್ನ ಆಯ್ಕೆ ಮಾಡಲ್ಲ. ನಾನು ಮಾಡಲ್ಲ
ಮೋಜಿನಿ ಆಪರೇಟರ್ : ಸರ್.. ನಮ್ಮ ಹೈರಿಂಗ್ ಮಾಡಿದ್ದು ನೀವೇ ನಮ್ಮ ಕೆಲಸ ಕಂಟಿನ್ಯೂ ಮಾಡಿ ಸರ್
ಮೌದಿಲ್: ಫಸ್ಟ್ ಆಯ್ಕೆ ಮಾಡಿದ್ದು ಇ ಗೌರ್ನನ್ಸ್ ಡಿಪಾರ್ಟ್ ಮೆಂಟ್ ಇಂದಾನೆ, ನಾನು ಕಂಟಿನ್ಯೂ ಮಾಡಲ್ಲ
ಆಪರೇಟರ್: ಎಲ್ಲರ ಜೀವನ ಹಾಳಾಗ್ತಿದೆ ದಯವಿಟ್ಟು ಕಂಟಿನ್ಯೂ ಮಾಡಿ ಸರ್
ಮೌದ್ಗಿಲ್: ಇಲ್ಲ ಇಲ್ಲ, ಇವಾಗ ಬಂದರೆ ಕಂಟಿನ್ಯೂ ಮಾಡೋದಕ್ಕೆ ಆಗಲ್ಲ
Advertisement
ಆಪರೇಟರ್: ಕರ್ಟಸಿ ಮೇಲಾದ್ರು ಮಾಡಿ ಸರ್. ಪ್ಲೀಸ್ ಸರ್
ಮೌದ್ಗಿಲ್: ಕರ್ಟಸಿ, ಗಿರ್ಟಸಿ ನಮ್ಮ ಹತ್ತಿರ ಇಲ್ಲಪ್ಪ . ನಮಗೆ ಬೇಕಾಗಿಲ್ಲ ನಮ್ಮ ಹತ್ತಿರ ಸರ್ಕಾರಿ ನೌಕರರಿದ್ದಾರೆ ಅವರ ಹತ್ತಿರ ಮಾಡಿಸಿಕೊಳ್ತೀನಿ.
ಆಪರೇಟರ್ : ರಾಜ್ಯಪಾಲರ ಆದೇಶ ಇದೆಯಲ್ಲ ಸರ್ ಮಾಡಿ ಸರ್. ಅದರ ಆಧಾರದ ಮೇಲಾದ್ರು ಮಾಡಿ ಸರ್
ಮೌದ್ಗಿಲ್ : ಇಲ್ಲಪ್ಪ, ಫೋನಲ್ಲಿ ನಿಮ್ಮ ಜೊತೆ ಚರ್ಚೆ ಮಾಡೋದಕ್ಕೆ ಆಗಲ್ಲ .
ಆಪರೇಟರ್ : ಆರ್ಡರ್ ಗಳಿಗೂ ಬೆಲೆ ಇಲ್ವ ಸರ್. ರಾಜ್ಯಪಾಲರ ಆದೇಶಕ್ಕೂ ಬೆಲೆ ಇಲ್ವಾ ಸರ್
ಮೌದ್ಗಿಲ್ : ಹಾಗೆಲ್ಲ ಮಾಡೋದಕ್ಕೆ ಆಗಲ್ಲ
ಆಪರೇಟರ್ : ನಿಮ್ಮ ಆಫೀಸ್ ಮುಂದೆಗಡೆ ಇದ್ದೀವಿ, ಭೇಟಿ ಮಾಡೊದಕ್ಕೆ ಅವಕಾಶ ಕೊಡಿ ಸರ್
ಮೌದ್ಗಿಲ್ : ನಾನು ಭೇಟಿ ಆಗೋದಕ್ಕೆ ಆಗಲ್ಲ
ಆಪರೇಟರ್ : ಪಬ್ಲಿಕ್ ನಾ ಭೇಟಿ ಮಾಡೋ ರೀತಿಯಲ್ಲಿ ಮಾಡಿ ಸರ್
ಮೌದ್ಗಿಲ್ : ಆಗಲ್ಲಪ್ಪ ಭೇಟಿ ಮಾಡೋದಕ್ಕೆ ಆಗಲ್ಲ .
ಆಪರೇಟರ್ : ಪಬ್ಲಿಕ್ ನಾ ಯಾಕ್ ಭೇಟಿ ಮಾಡೋದಕ್ಕೆ ಆಗಲ್ಲ ಸರ್ .
ಅಪರೇಟರ್ : ತಲೆ ತಿನ್ನದು ಅಲ್ಲ ಸರ್ ಭೇಟಿ ಮಾಡಿ ಸರ್
ಮೌದ್ಗಿಲ್ : ಗೆಟ್ ಲಾಸ್ಟ್ ಮೈ ಆಫೀಸ್,
ಆಪರೇಟರ್ : ಸರ್ ರಾಜ್ಯಪಾಲರ ಆದೇಶ ಇದೆಯಲ್ಲ ಮಾಡಿ ಸರ್
ಮೌದ್ಗಿಲ್ : ನೋಡಿ ರಾಜ್ಯಪಾಲರು ಮತ್ತು ನನ್ನ ಮಧ್ಯೆ ಮಧ್ಯಸ್ಥಿಕೆ ಇಲ್ಲ ನಾನು ಮಾಡಲ್ಲ.
ಆಪರೇಟರ್ : ನಿಮ್ಮ ಕೈ ಮುಗಿಯುತ್ತೇನೆ, ಕಾಲಿಗೆ ಬೀಳ್ತೆನೆ ಸರ್ ಮಾಡಿ ಸರ್
ಮೌದ್ಗಿಲ್ : ಆಯ್ತು, ಓಕೆ, ಟೈಂ ವೇಸ್ಟ್ ಮಾಡಬೇಡಾ.