11 ದಿನದಲ್ಲಿ 250 ಕೋಟಿ ರೂ. ದಾಟಿದ `ಸೈಯಾರಾ’ ಕಲೆಕ್ಷನ್

Public TV
1 Min Read
Saiyaara Cinema

ಮೋಹಿತ್ ಸೂರಿ ನಿರ್ದೇಶನದ `ಸೈಯಾರಾ’ (Saiyaara) ಸಿನಿಮಾ ಯಶಸ್ವಿ 11 ದಿನಗಳನ್ನು ಪೂರೈಸುತ್ತಿದ್ದು, ಈ ಮೂಲಕ ತನ್ನ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 250 ಕೋಟಿ ರೂ. ಬಾಚಿಕೊಂಡಿದೆ.

ಜು.18ರಂದು ತೆರೆಕಂಡ `ಸೈಯಾರಾ’ ಸಿನಿಮಾ ಮೊದಲ ದಿನವೇ 21.5 ಕೋಟಿ ರೂ. ಗಳಿಸಿತು. ದಿನಗಳೆದಂತೆ ಸಿನಿಮಾ ಕ್ರೇಜ್ ಹೆಚ್ಚುತ್ತಲೇ ಇದೆ. ಇದೀಗ ಎರಡನೇ ವಾರದಲ್ಲಿದ್ದು, ಈವರೆಗೆ ಒಟ್ಟು 250 ಕೋಟಿ ರೂ. ಕಲೆಕ್ಷನ್ ಮಾಡಿದೆ.ಇದನ್ನೂ ಓದಿ: ಚಿಕ್ಕಮಗಳೂರು | ಪಶ್ಚಿಮ ಘಟ್ಟದಲ್ಲಿ ಮಳೆಯಬ್ಬರ – ಕೋಡಿ ಬಿದ್ದ 2 ಸಾವಿರ ಎಕರೆಯ ಬೃಹತ್ ಕೆರೆ

ಸಾಮಾನ್ಯವಾಗಿ ವಾರದ ದಿನಗಳಲ್ಲಿ ಕಡಿಮೆ ಕಲೆಕ್ಷನ್ ಆದರೂ ಕೂಡ ಈವರೆಗೂ ಎರಡಂಕಿಗಿಂತ ಕೆಳಗಿಳಿದಿಲ್ಲ. ಆದರೆ ವೀಕೆಂಡ್‌ನಲ್ಲಿ ಮಾತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಸೈಯಾರಾ ಮೂಲಕ ಬಾಲಿವುಡ್‌ಗೆ (Bollywood) ಪಾದಾರ್ಪಣೆ ಮಾಡಿರುವ ಅಹಾನ್ ಪಾಂಡೆ (Ahaan Panday) ಹಾಗೂ ಅನೀತ್ ಪಡ್ಡಾ (Anit Padda) ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚೊಚ್ಚಲ ಸಿನಿಮಾದಿಂದಲೇ ಭರ್ಜರಿ ಎಂಟ್ರಿಕೊಟ್ಟಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.

ಸೈಯಾರಾ ಸಿನಿಮಾ ದಾಖಲೆಯ ಗಳಿಕೆ ಕಂಡಿದ್ದು, ಈ ಮೂಲಕ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ ದೃಶ್ಯಂ 2, ದಿ ಕೇರಳ ಫೈಲ್ಸ್, ಕ್ರಿಶ್ 3 ಸಿನಿಮಾಗಳನ್ನು ಹಿಂದಿಕ್ಕಿದೆ. ಸೈಯಾರಾ ಸಿನಿಮಾ ಉತ್ತಮ ಕಥಾಹಂದರವನ್ನು ಹೊಂದಿದ್ದು, ಪ್ರೇಕ್ಷಕರನ್ನು ಭಾವನಾತ್ಮಕವಾಗಿ ತನ್ನೆಡೆಗೆ ಸೆಳೆಯುತ್ತದೆ. ಜೊತೆಗೆ ಸಿನಿಮಾದಲ್ಲಿರುವ ಹಾಡುಗಳು ಸಂಗೀತ ಪ್ರಿಯರನ್ನು ಹಿಡಿದಿಟ್ಟುಕೊಳ್ಳುತ್ತದೆ.ಇದನ್ನೂ ಓದಿ: ಮಿರಾಯ್ ಸಿನಿಮಾದ ಮೊದಲ ಹಾಡಿಗೆ ಭರ್ಜರಿ ರೆಸ್ಪಾನ್ಸ್: ಹನುಮಾನ್ ಹುಡುಗನ ಚಿತ್ರ

Share This Article