ಮೈಸೂರು: ನರಸಿಂಹರಾಜ ಕ್ಷೇತ್ರದಿಂದ (N.R. Constituency) ಇದುವರೆಗೂ ನಡೆದಿರುವ 16 ಚುನಾವಣೆಗಳ ಪೈಕಿ 12 ಚುನಾವಣೆಗಳಲ್ಲಿ ಒಂದೇ ಕುಟುಂಬದವರು ಆಯ್ಕೆಯಾಗುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.
ಈ ಕ್ಷೇತ್ರ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. 1952 ರಿಂದ 1962 ರವರೆಗೆ ಮೈಸೂರು ನಗರ ಉತ್ತರ ಎಂದಾಗಿತ್ತು. 1967 ರಿಂದ ನರಸಿಂಹರಾಜ ಕ್ಷೇತ್ರ ಎಂದು ಹೆಸರಿಸಲಾಯಿತು. 1957 ರಲ್ಲಿ ಪಕ್ಷೇತರ ಅಭ್ಯರ್ಥಿ ಎ.ಮಹಮ್ಮದ್ ಸೇಠ್ ಆಯ್ಕೆಯಾಗಿದ್ದರು. ಇವರು ಮಾಜಿ ಸಚಿವ ದಿ.ಅಜೀಜ್ ಸೇಠ್ (Azeez Sait) ಅವರ ದೊಡ್ಡಪ್ಪ. ಆದರೆ 1962 ರ ಚುನಾವಣೆಯಲ್ಲಿ ಮೊಹಮ್ಮದ್ ಸೇಠ್ ಅವರು ಪಿಎಸ್ಪಿಯ ಬಿ.ಕೆ. ಪುಟ್ಟಯ್ಯ ಅವರ ಎದುರು ಪರಾಭವಗೊಂಡರು. ಇದನ್ನೂ ಓದಿ: ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ VIP ಅಭ್ಯರ್ಥಿ ಹಾಕಲು ತಯಾರಿ
Advertisement
Advertisement
1967 ರ ಚುನಾವಣೆ ವೇಳೆಗೆ ಅಜೀಜ್ ಸೇಠ್ ಅಖಾಡ ಪ್ರವೇಶಿಸಿದರು. ಅಜೀಜ್ ಸೇಠ್ 1967 ರಲ್ಲಿ ಎಸ್‌ಎಸ್‌ಪಿ, 1972 ರಲ್ಲಿ ಕಾಂಗ್ರೆಸ್, 1977 ರಲ್ಲಿ ಇಂದಿರಾ ಕಾಂಗ್ರೆಸ್, 1983 ರಲ್ಲಿ ಜನತಾಪಕ್ಷದ ಟಿಕೆಟ್ ಮೇಲೆ ಆಯ್ಕೆಯಾದರು. 1984 ರಲ್ಲಿ ಅವರು ಧಾರವಾಡ ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರಿಂದ 1985 ರ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. 1989 ರಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದರು.
Advertisement
1994 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದರೂ ಸಕಾಲದಲ್ಲಿ ‘ಬಿ’ ಫಾರಂ ಸಲ್ಲಿಸದೇ ಕಾಂಗ್ರೆಸ್ ಬೆಂಬಲಿತ ಪಕ್ಷೇತರರಾಗಿ ಸ್ಪರ್ಧಿಸಿ, ಬಿಜೆಪಿಯ ಇ. ಮಾರುತಿರಾವ್ ಪವಾರ್ ಎದುರು ಅಜೀಜ್ ಸೇಠ್ ಸೋತರು. 1999 ರಲ್ಲಿ ಮತ್ತೆ ಕಾಂಗ್ರೆಸ್ ಟಿಕೆಟ್ ಮೇಲೆ ಅಜೀಜ್ ಸೇಠ್ ಆಯ್ಕೆಯಾದರು. ಸೇಠ್ ಅವರ ನಿಧನದಿಂದಾಗಿ 2002 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಅವರ ಪುತ್ರ ತನ್ವಿರ್ ಸೇಠ್ (Tanveer Sait) ಕಾಂಗ್ರೆಸ್ ಅಭ್ಯಥಿಯಾಗಿ ಆಯ್ಕೆಯಾದರು. ಇದನ್ನೂ ಓದಿ: ಜಾರಕಿಹೊಳಿ – ಸವದಿ ಬಣ ರಾಜಕೀಯಕ್ಕೆ ಬ್ರೇಕ್; ಹೈಕಮಾಂಡ್ ಸಂದೇಶ ರವಾನಿಸಿದ ಜೋಶಿ
Advertisement
2004 ಹಾಗೂ 2008ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಅವರು ಕಾಂಗ್ರೆಸ್ ಟಿಕೆಟ್ ಮೇಲೆ ಆಯ್ಕೆಯಾಗಿ ಹ್ಯಾಟ್ರಿಕ್ ಬಾರಿಸಿದರು. 2013 ರಲ್ಲಿ ನಾಲ್ಕನೇ ಬಾರಿ ಗೆದ್ದರು. 2018 ರ ಚುನಾವಣೆಯಲ್ಲೂ ಆಯ್ಕೆಯಾದರು. ಈ ಚುನಾವಣೆಯಲ್ಲೂ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.