Connect with us

Bengaluru City

ಬಸವಣ್ಣನ ಹೆಸರಲ್ಲೂ ಭರ್ಜರಿ ಪಾಲಿಟಿಕ್ಸ್

Published

on

– ಸರ್ಕಾರಿ ಕಚೇರಿಗಳಲ್ಲಿ ವಿಶ್ವಗುರುವಿನ ಫೋಟೋ
– ಎಲೆಕ್ಷನ್ ಹೊಸ್ತಿನಲ್ಲಿ ಸಿಎಂ ಆದೇಶ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದೆ. ಆದರೆ ಈಗಲೇ ರಾಜಕೀಯ ಜೋರಾಗಿದೆ. ಕಾಂಗ್ರೆಸ್ ಮಕ್ತ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರೋ ಪ್ರಧಾನಿ ಮೋದಿ, ಇದೇ 29ಕ್ಕೆ ದಿಲ್ಲಿಯಲ್ಲಿ ಬಸವಣ್ಣನ ಜಯಂತಿ ಆಚರಿಸಲಿದ್ದಾರೆ.

ಈ ಮೂಲಕ ಕರ್ನಾಟಕದ ಲಿಂಗಾಯತ ವರ್ಗದ ಗಮನ ಸೆಳೆಯೋಕೆ ಸಖತ್ ಪ್ಲಾನ್ ಮಾಡಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಕೂಡಾ ಬಸವಣ್ಣ ಹೆಸರಿನಲ್ಲಿ ಪಾಲಿಟಿಕ್ಸ್ ಶುರು ಮಾಡಿದಂತೆ ಕಾಣ್ತಿದೆ.ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಇಡುವಂತೆ  ಆದೇಶ ಮಾಡಲಾಗುವುದು ಎಂದು ಹೇಳಿದ್ದಾರೆ.

ಇವತ್ತು ಗುಂಡ್ಲುಪೇಟೆಯಲ್ಲಿ ಬೈ ಎಲೆಕ್ಷನ್‍ನಲ್ಲಿ ಗೆಲ್ಲಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸಿ ಮಾತಾಡಿದ ಸಿಎಂ, ನಾನೂ ಬಸವಣ್ಣನ ತತ್ವ, ಆದರ್ಶದ ಮೇಲೆ ನಂಬಿಕೆ ಇಟ್ಟಿದ್ದೇನೆ. ಹೀಗಾಗಿಯೇ ಬಸವ ಜಯಂತಿಯಂದು ನಾನು ಅಧಿಕಾರ ಸ್ವೀಕರಿಸಿದ್ದೇನೆ ಅಂದ್ರು. ಈ ಮೂಲಕ ರಾಜಕೀಯಕ್ಕೆ ಬಸವಣ್ಣನನ್ನೂ ಎಳೆದು ತಂದಂತಾಗಿದೆ.

ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಹಾಕಿ ಪೂಜೆ ಮಾಡುವಂತೆ ಈ ಹಿಂದೆ ಜಗದೀಶ್ ಶೆಟ್ಟರ್ ಹಾಗೂ ವಿನಯ ಕುಲಕರ್ಣಿ ಒತ್ತಾಯ ಮಾಡಿದ್ರು. ಇನ್ನೊಂದು ವಿಷಯ ಅಂದ್ರೆ ದಿಲ್ಲಿಯಲ್ಲಿ ನಡೆಯೋ ಬಸವಣ್ಣನ ಕಾರ್ಯಕ್ರಮಕ್ಕೆ ಸಿಎಂ ಹೋಗ್ತಿಲ್ಲ ಬದಲಾಗಿ ನಾಳೆಯಿಂದ 3 ದಿನ ದುಬೈ ಪ್ರವಾಸಕ್ಕೆ ತೆರಳಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಭೀಮನಂತೆ ಗದೆ ಹೊತ್ತು ನಿಂತಿದ್ದು ಎಲ್ಲರ ಗಮನ ಸೆಳೀತು. ಈಗಾಗ್ಲೇ ಮಹಾರಾಷ್ಟ್ರದಲ್ಲಿ ಇಂಥದೊಂದು ಆದೇಶ ಜಾರಿಯಲ್ಲಿದೆ.

Click to comment

Leave a Reply

Your email address will not be published. Required fields are marked *