ಸೈಫ್‌ ಅಲಿ ಖಾನ್‌ಗೆ ಚಾಕು ಇರಿತ ಕೇಸ್‌ – 1 ಕೋಟಿಗೆ ಬೇಡಿಕೆಯಿಟ್ಟಿದ್ದ ಹಂತಕನ ಫೋಟೋ ಬಹಿರಂಗ

Public TV
1 Min Read
Saif Ali Khans Attacker

ಮುಂಬೈ: ನಟ ಸೈಫ್‌ ಅಲಿ ಖಾನ್‌ (Saif Ali Khan) ಅವರ ಮನೆಗೆ ನುಗ್ಗಿ 6 ಬಾರಿ ಚಾಕುವಿನಿಂದ ಇರಿದು ಘಾಸಿಗೊಳಿಸಿದ್ದ ಶಂಕಿತ ಆರೋಪಿಯ ಫೋಟೋ ಮತ್ತು ಸಿಸಿಟಿವಿ ದೃಶ್ಯಾವಳಿ ಬಹಿರಂಗವಾಗಿದೆ.

ಇಂದು (ಜ.16) ಬೆಳಗ್ಗಿನ ಜಾವ 2:33ಕ್ಕೆ ಸೈಫ್‌ ಅಲಿ ಖಾನ್‌ ಅವರ ಅಪಾರ್ಟ್‌ಮೆಂಟ್‌ನ ಮೆಟ್ಟಿಲುಗಳಲ್ಲಿ ಶಂಕಿತ ಆರೋಪಿ ಇಳಿದು ಹೋಗುತ್ತಿರುವುದು ಸಿಟಿಟಿವಿಯಲ್ಲಿ ಸೆರೆಯಾಗಿದೆ. ಈ ಬೆನ್ನಲ್ಲೇ ಮುಂಬೈ ಪೋಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ರಮೇಶ್ ಕುಮಾರ್ ಅರಣ್ಯ ಭೂಮಿ ವಿವಾದ| ಜಂಟಿ ಸರ್ವೆ ಮುಕ್ತಾಯ – ಒಮ್ಮತಕ್ಕೆ ಬಾರದ ಅರಣ್ಯ, ಕಂದಾಯ ಇಲಾಖೆ

ಶಂಕಿತ ಆರೋಪಿಯ ಫೋಟೋ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಮುಂಬೈ ಪೊಲೀಸರೇ ಬಹಿರಂಗಪಡಿಸಿದ್ದಾರೆ. ಟೀ-ಶರ್ಟ್‌, ಜೀನ್ಸ್‌ ಪ್ಯಾಂಟ್‌ ಧರಿಸಿರುವ ಶಂಕಿತ, ಬ್ಯಾಗ್‌ವೊಂದನ್ನ ಹಾಕಿಕೊಂಡಿದ್ದಾನೆ. ಕಿತ್ತಳೆ ಬಣ್ಣದ ಸ್ಕಾಫ್‌ ಧರಿಸಿದ್ದಾನೆ. ಮೆಟ್ಟಿಲುಗಳಿಂದ ಇಳಿದು ಹೋಗುತ್ತಿರುವಾಗ ಸಿಟಿಟಿವಿ ಕ್ಯಾಮೆರಾ ನೋಡಿದ್ದು ವಿಡಿಯೋನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಬೀದರ್‌ನಲ್ಲಿ ಎಟಿಎಂ ಹಣ ದರೋಡೆ ಕೇಸ್‌ – ಹೈದರಾಬಾದ್‌ನಲ್ಲೂ ಫೈರಿಂಗ್‌, ದರೋಡೆಕೋರರು ಎಸ್ಕೇಪ್‌

1 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ದುಷ್ಕರ್ಮಿ
ಸೈಫ್‌ ಅಲಿಖಾನ್‌ ಮನೆಯಲ್ಲಿ ಅಡುಗೆ ಮಾಡುವವರಲ್ಲಿ ಒಬ್ಬರಾದ ಎಲಿಯಾಮಾ ಫಿಲಿಪ್ಸ್‌ ಅಲಿಯಾಸ್‌ ಲಿಮಾ, ಶಂಕಿತನನ್ನ ಮೊದಲು ನೋಡಿದ್ದರಂತೆ. ದುಷ್ಕರ್ಮಿಯನ್ನ ನೋಡಿದ ಕೂಡಲೇ ಭಯದಲ್ಲಿ ಜೋರಾಗಿ ಕಿರುಚಿದ್ದಾರೆ. ಇದರಿಂದ ಎಚ್ಚರಗೊಂಡ ಸೈಫ್‌, ಹಂತಕನನ್ನ ಒಳ ನುಗ್ಗದಂತೆ ತಡೆಯಲು ಹೋರಾಡಿದ್ದಾರೆ. ಈ ವೇಳೆ ಹಂತಕ 6 ಬಾರಿ ಇರಿದು, ಎಡಗೈ ಮತ್ತು ಗುತ್ತಿಗೆ ಭಾಗವನ್ನ ಗಾಯಗೊಳಿಸಿದ್ದಾನೆ. ಹಂತಕ ಒಳ ನುಗ್ಗಲು ಪ್ರಯತ್ನಿಸಿದಾಗ ನಿನಗೇನು ಬೇಕು ಎಂದು ಕೇಳಲಾಗಿತ್ತಂತೆ. ಆಗ 1 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ದಾಳಿಯಲ್ಲಿ ಇಬ್ಬರು ಮನೆಯ ಸಹಾಯಕರೂ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಶ್ರೀಹರಿಕೋಟಾದಲ್ಲಿ 3ನೇ ಉಡಾವಣಾ ಕೇಂದ್ರ ಸ್ಥಾಪನೆಗೆ ಸಂಪುಟ ಅಸ್ತು

ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟನ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗಿದೆ.  ಇದನ್ನೂ ಓದಿ: Chhattisgarh| ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ- 12 ಮಾವೋವಾದಿಗಳು ಬಲಿ

Share This Article