ಬಾಲಿವುಡ್‌ನಲ್ಲಿ ಈಗಾಗಲೇ ಬಯೋಪಿಕ್‌ಗಳ ಹಾವಳಿ ಹೆಚ್ಚಾಗಿದೆ. ಇದೀಗ ದೇಶದ ಮೊದಲ ಚುನಾವಣಾ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ ಸುಕುಮಾರ್ ಸೇನ್ (Sukumar Sen) ಅವರ ಜೀವನ ಚರಿತ್ರೆ ಸಿನಿಮಾ ರೂಪದಲ್ಲಿ ಬರಲಿದೆ. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ (Saif Ali Khan) ಪ್ರಮುಖ ಪಾತ್ರದಲ್ಲಿ ಅವರು ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ಮುಂದಿನ ಜನ್ಮದಲ್ಲಿ ಪ್ರಭಾಸ್ ನನ್ನ ಮಗನಾಗಬೇಕು: ಹಿರಿಯ ನಟಿ ಜರೀನಾ ವಹಾಬ್
ದೇಶದ ಮೊದಲ ಚುನಾವಣಾ ಆಯುಕ್ತರ (Election Commissioner) ಪಾತ್ರದಲ್ಲಿ ಸೈಫ್ ಕಾಣಿಸಿಕೊಳ್ತಿದ್ದಾರೆ. ಏ.20ರಿಂದ ಈ ಸಿನಿಮಾದ ಕೆಲಸ ಶುರುವಾಗಿದೆ. ಶೀಘ್ರದಲ್ಲಿ ಚಿತ್ರತಂಡವನ್ನು ಸೈಫ್ ಸೇರಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ರಾಹುಲ್ ಧೋಲಾಕಿಯಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಜಾಮೀನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮೇ 14ಕ್ಕೆ ಮುಂದೂಡಿಕೆ
ಮೊದಲ ಬಾರಿ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿರೋ ಸೈಫ್ ಜೊತೆ ಪ್ರತೀಕ್ ಗಾಂಧಿ ಹಾಗೂ ದೀಪಕ್ ಡೋಬ್ರಿಯಾಲ್ ನಟಿಸುತ್ತಿದ್ದಾರೆ.