ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಈಗಾಗಲೇ ಜ್ಯೂ.ಎನ್‌ಟಿಆರ್‌ಗೆ ವಿಲನ್ ಆಗಿ ನಟಿಸಿದ್ದಾರೆ. ಈ ಬೆನ್ನಲ್ಲೇ ಪ್ರಭಾಸ್ ಮುಂದೆ ವಿಲನ್ ಆಗಿ ಅಬ್ಬರಿಸಲು ಸೈಫ್ ಮತ್ತು ಕರೀನಾ ಕಪೂರ್ (Kareena Kapoor) ದಂಪತಿಗೆ ಆಫರ್ ನೀಡಲಾಗಿದೆ ಎಂಬ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
‘ದೇವರ’ (Devara) ಸಿನಿಮಾ ರಿಲೀಸ್‌ಗೂ ಮುನ್ನ ಸೌತ್‌ನ ಮತ್ತೊಬ್ಬ ಸೂಪರ್ ಸ್ಟಾರ್ ಪ್ರಭಾಸ್ (Prabhas) ಚಿತ್ರದಲ್ಲಿ ನಟಿಸಲು ಬುಲಾವ್ ಬಂದಿದೆ. ಸೈಫ್ ಮಾತ್ರವಲ್ಲ ಕರೀನಾ ಕಪೂರ್ ಕೂಡ ಸಿನಿಮಾದಲ್ಲಿ ನಟಿಸಲು ಕೇಳಲಾಗಿದೆಯಂತೆ. ಸೈಫ್ ಮತ್ತು ಕರೀನಾ ಇಬ್ಬರೂ ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರದಲ್ಲಿ ವಿಲನ್ ನಟಿಸ್ತಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ.
ಚಿತ್ರತಂಡ ಸೈಫ್ ದಂಪತಿಯನ್ನು ಭೇಟಿ ಮಾಡಿ ಕಥೆ ಹೇಳಿದ್ದಾರೆ ಎನ್ನಲಾಗಿದೆ. ಅವರು ಕೂಡ ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ ಇದರ ಬಗ್ಗೆ ಅಧಕೃತ ಮಾಹಿತಿ ಹೊರಬಿದ್ದಿಲ್ಲ. ಚಿತ್ರತಂಡ ಈ ಕುರಿತು ಘೋಷಣೆ ಮಾಡುವವರೆಗೂ ಕಾದುನೋಡಬೇಕಿದೆ.ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ- ತಂದೆಯಾದ ಖುಷಿಯಲ್ಲಿ ಚಂದನ್
ಇನ್ನೂ ಕರೀನಾ ಕಪೂರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 25 ವರ್ಷಗಳಾಗಿವೆ. ಹೊಸ ಬಗೆಯ ಪಾತ್ರ ಮಾಡೋಕೆ ನಟಿ ನಿರ್ಧರಿಸಿದ್ದಾರೆ. ‘ಕ್ರಿವ್’ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಹಲವು ಸಿನಿಮಾಗಳ ಆಫರ್‌ಗಳು ಅವರನ್ನು ಅರಸಿ ಬರುತ್ತಿವೆ. ಇದರ ಸ್ಪಿರಿಟ್ ಸಿನಿಮಾದ ಲೇಟೆಸ್ಟ್ ಅಪ್‌ಡೇಟ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.