ಮುಂಬೈ: ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದ ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಅವರ ಮೂವರು ಸಿಬ್ಬಂದಿಯನ್ನು ಪೊಲೀಸರು (Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಮುಖ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದು, ಸೈಫ್ ಅಲಿ ಖಾನ್ ಅವರನ್ನು ಯಾರು ಇರಿದಿದ್ದಾರೆ ಎಂಬುದರ ಕುರಿತು ನಿಖರವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ವಶಕ್ಕೆ ಪಡೆದ ಮೂವರ ಪೈಕಿ ದಾಳಿ ನಡೆಸಿದ ವ್ಯಕ್ತಿಯ ಜೊತೆ ಸಂಬಂಧ ಹೊಂದಿರುವ ಮನೆಯ ಕೆಲಸದಾಕೆಯನ್ನು ವಿಚಾರಣೆ ನಡೆಸುತ್ತಾರೆ. ಇದನ್ನೂ ಓದಿ: Saif Ali Khan ಮೇಲೆ ಅಟ್ಯಾಕ್ ಆದಾಗ ಕರೀನಾ ಕಪೂರ್ ಎಲ್ಲಿದ್ದರು?
Advertisement
Advertisement
ರಾತ್ರಿ ಏನಾಯ್ತು?
ನಸುಕಿನ ಜಾವ 2:30 ರ ವೇಳೆಗೆ ಸೈಫ್ ಮೇಲೆ ದಾಳಿ ನಡೆದಿದೆ. ರಾತ್ರಿ ದಾಳಿಕೋರ ಸೈಫ್ ಮನೆಗೆ ಬಂದಿದ್ದಾನೆ. ಈತ ಮನೆಗೆ ಬಂದಿದ್ದನ್ನು ನೋಡಿ ಕೆಲಸದಾಕೆ ಗಲಾಟೆ ಮಾಡಿದ್ದಾಳೆ. ಈ ಗಲಾಟೆಯ ಶಬ್ದ ಕೇಳಿ ಸೈಫ್ ಇಬ್ಬರು ಇರುವ ಸ್ಥಳಕ್ಕೆ ಬಂದಿದ್ದಾರೆ. ಇಬ್ಬರ ಮಧ್ಯೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದಾಗ ಸೈಫ್ ಮೇಲೆ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
ಒಳಗೆ ನುಗ್ಗಿದವನು ಮತ್ತು ಸೈಫ್ ಅವರ ಮನೆ ಕೆಲಸದಾಕೆಯ ಜೊತೆ ಸಂಬಂಧ ಇರಬಹುದು ಶಂಕೆ ವ್ಯಕ್ತವಾಗಿದೆ. ದಾಳಿಗೆ ಎರಡು ಗಂಟೆಗಳ ಮೊದಲು ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಳಿಕೋರನ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ. ಹೀಗಾಗಿ ಅಪಾರ್ಟ್‌ಮೆಂಟ್ ಒಳಗಡೆ ಇರುವ ವ್ಯಕ್ತಿಯೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
Advertisement
ದಾಳಿಕೋರನ ಗುರುತು ಮತ್ತು ಉದ್ದೇಶದ ಕುರಿತು ಹೆಚ್ಚಿನ ವಿವರ ತಿಳಿಯಲು ಪೊಲೀಸರು ಮನೆಯ ಸಹಾಯಕ ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದಾರೆ. ದಾಳಿಕೋರನೊಂದಿಗೆ ಕೆಲಸದಾಕೆಯ ಸಂಬಂಧವನ್ನು ತನಿಖೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.