ಸೈಫ್ ಮೇಲಿನ ಅಟ್ಯಾಕ್: ಸುದ್ದಿ ಕೇಳಿ ಶಾಕ್ ಆಯ್ತು ಎಂದ ಚಿರಂಜೀವಿ, ಜ್ಯೂ.ಎನ್‌ಟಿಆರ್

Public TV
2 Min Read
saif ali khan jr ntr chiranjeevi

ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ (Saif Ali Khan) ಚಾಕು ಇರಿದಿರುವ ಘಟನೆ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮತ್ತು ಜ್ಯೂ.ಎನ್‌ಟಿಆರ್ (Jr.Ntr) ಪ್ರತಿಕ್ರಿಯೆ ನೀಡಿದ್ದಾರೆ. ಸೈಫ್ ಮೇಲಿನ ಅಟ್ಯಾಕ್ ವಿಚಾರ ಕೇಳಿ ಆಘಾತವಾಯ್ತು ಎಂದು ಚಿರಂಜೀವಿ, ತಾರಕ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸೈಫ್‌ಗೆ ಚಾಕು ಇರಿದ ಘಟನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚಿರಂಜೀವಿ ಪ್ರತಿಕ್ರಿಯಿಸಿ, ಸೈಫ್ ಅಲಿ ಖಾನ್ ಮೇಲಿನ ದಾಳಿಯ ವಿಚಾರ ಕೇಳಿ ವಿಚಲಿತನಾಗಿದ್ದೇನೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ ಎಂದು ಬರೆದಿದ್ದಾರೆ.‌

ಇನ್ನೂ ಸೈಫ್ ಸರ್ ಮೇಲಿನ ದಾಳಿಯ ವಿಷ್ಯ ಕೇಳಿ ಆಘಾತ ಮತ್ತು ದುಃಖವಾಯಿತು. ಅವರು ಶೀಘ್ರವಾಗಿ ಚೇತರಿಕೊಳ್ಳಲು ಮತ್ತು ಉತ್ತಮ ಆರೋಗ್ಯಕ್ಕಾಗಿ ಹಾರೈಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ ಎಂದು ತೆಲುಗಿನ ಸ್ಟಾರ್ ಜ್ಯೂ.ಎನ್‌ಟಿಆರ್ ಬರೆದುಕೊಂಡಿದ್ದಾರೆ. ಇನ್ನೂ ‘ದೇವರ’ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್ ಎದುರು ವಿಲನ್ ಆಗಿ ಸೈಫ್ ಅಬ್ಬರಿಸಿದ್ದರು. ಈ ಚಿತ್ರದಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದರು.

jr.ntr 1 1

ಇನ್ನೂ ಮುಂಬೈನ ಬಾಂದ್ರಾದಲ್ಲಿರುವ ನಟನ ನಿವಾಸಕ್ಕೆ ತಡರಾತ್ರಿ ದರೋಡೆ ಮಾಡಲು ಕೆಲ ದುಷ್ಕರ್ಮಿಗಳು ನುಗ್ಗಿದ್ದಾರೆ. ಈ ವೇಳೆ, ದರೋಡೆಕೋರನಿಗೆ ಪ್ರತಿರೋಧ ತೋರುವಾಗ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ, ಸೈಫ್ ಕುತ್ತಿಗೆ, ಕೈ ಸೇರಿ 6 ಕಡೆ ಗಾಯವಾಗಿದೆ. 2 ಕಡೆ ಗಂಭೀರವಾಗಿ ಪೆಟ್ಟಾಗಿದೆ. ಹೆಚ್ಚು ರಕ್ತಸ್ರಾವ ಆಗಿರುವ ಹಿನ್ನೆಲೆ ಕೂಡಲೇ ನಟನನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದು, ಎರಡೂವರೆ ಗಂಟೆಗಳ ಕಾಲ ಆಪರೇಷನ್ ನಡೆದಿದೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.

Share This Article