ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಆಪ್ ಸರ್ಕಾರವನ್ನು ಕೆಡವಲು ಸಂಚು ರೂಪಿಸಿರುವ ಬಿಜೆಪಿ 7 ಆಮ್ ಆದ್ಮಿ ಪಕ್ಷದ ಶಾಸಕರನ್ನ (AAP MLAs) ಖರೀದಿಸಲು ಪ್ರಯತ್ನಿಸುತ್ತಿದೆ. 7 ಶಾಸಕರಿಗೆ ಬಿಜೆಪಿ ತಲಾ 25 ಕೋಟಿ ರೂ. ಆಫರ್ ನೀಡಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಹೊಸ ಬಾಂಬ್ ಸಿಡಿಸಿದ್ದಾರೆ.
Advertisement
ಈ ಕುರಿತು ಸೋಶಿಯಲ್ ಮೀಡಿಯಾ X ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಕೇಜ್ರಿವಾಲ್, ಬಿಜೆಪಿ (BJP) ಆಪ್ ಶಾಸಕರೊಂದಿಗೆ ಮಾತುಕತೆಯಲ್ಲಿ ತೊಡಗಿದೆ. ಆಪ್ ಸರ್ಕಾರವನ್ನು ಸಂಪೂರ್ಣವಾಗಿ ಮುಗಿಸಲು ಪ್ಲ್ಯಾನ್ ಮಾಡಿದೆ. ಆದ್ದರಿಂದ ದೆಹಲಿ ಮದ್ಯ ನೀತಿ ಪ್ರಕರಣಕ್ಕೆ (Delhi liquor Policy Case) ಸಂಬಂಧಿಸಿದಂತೆ ಮುಖ್ಯಮಂತ್ರಿಗಳನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮರಾಠ ಮೀಸಲಾತಿ ಹೋರಾಟಕ್ಕೆ ಜಯ – ಬೇಡಿಕೆಗಳಿಗೆ ಮಹಾರಾಷ್ಟ್ರ ಸರ್ಕಾರ ಅಸ್ತು
Advertisement
Advertisement
ಸರ್ಕಾರವನ್ನೇ ಮುಗಿಸೋದಕ್ಕೆ ಬಿಜೆಪಿ ಪ್ಲ್ಯಾನ್:
ಇತ್ತೀಚೆಗೆ ಬಿಜೆಪಿ ನಾಯಕರು ಎಎಪಿಯ 7 ಶಾಸಕರನ್ನ ಸಂಪರ್ಕಿಸಿದ್ದಾರೆ. ಕೆಲ ದಿನಗಳ ನಂತರ ನಾವು ಕೇಜ್ರಿವಾಲ್ ಅವರನ್ನ ಬಂಧಿಸುತ್ತೇವೆ. ನಂತರ ಶಾಸಕರನ್ನ ಇಬ್ಭಾಗ ಮಾಡುತ್ತೇವೆ. ದೆಹಲಿಯ ಆಪ್ ಸರ್ಕಾರವನ್ನ ಸಂಪೂರ್ಣವಾಗಿ ಉರುಳಿಸುತ್ತೇವೆ. ಈಗಾಗಲೇ 21 ಶಾಸಕರೊಟ್ಟಿಗೆ ಮಾತುಕತೆ ನಡೆಸಿದ್ದೇವೆ. ನೀವೂ ಬಂದುಬಿಡಿ, ಪ್ರತಿಯೊಬ್ಬರಿಗೆ ತಲಾ 25 ಕೋಟಿ ರೂ. ಕೊಡುತ್ತೇವೆ. ಜೊತೆಗೆ ಬಿಜೆಪಿಯಿಂದ ಟಿಕೆಟ್ ನೀಡುತ್ತೇವೆ ಎಂದು ಆಮಿಷ ತೋರಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಎಂಜಿ ರೋಡ್- ಬೈಯಪ್ಪನಹಳ್ಳಿ ಮೆಟ್ರೋ ಸಂಚಾರದಲ್ಲಿ ತಾತ್ಕಾಲಿಕ ಸ್ಥಗಿತ- ಪ್ರಯಾಣಿಕರ ಪರದಾಟ
Advertisement
9 ವರ್ಷಗಳಿಂದಲೂ ಷಡ್ಯಂತ್ರ ಫಲಿಸಿಲ್ಲ:
ಇದು ಬಿಜೆಪಿಯ ನಡವಳಿಕೆಯನ್ನು ತೋರಿಸುತ್ತದೆ. ಮದ್ಯ ನೀತಿ ಹಗರಣ ತನಿಖೆಯಲ್ಲಿ ನನ್ನನ್ನು ಬಂಧಿಸಲಾಗುತ್ತಿಲ್ಲ. ಆದ್ದರಿಂದ ಆಪ್ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸುತ್ತಿದ್ದಾರೆ. ಅವರ ಷಡ್ಯಂತ್ರ ಇದೇ ಮೊದಲೇನಲ್ಲ. ಕಳೆದ 9 ವರ್ಷಗಳಿಂದಲೂ ಇಂತಹ ಅನೇಕ ಷಡ್ಯಂತ್ರಗಳನ್ನು ಮಾಡುತ್ತಲೇ ಬಂದಿದ್ದಾರೆ. ಯಾವುದೂ ಸಕ್ಸಸ್ ಆಗಿಲ್ಲ. ಏಕೆಂದರೆ ದೇವರು ಮತ್ತು ಈ ರಾಜ್ಯದ ಜನತೆ ಸದಾ ನಮ್ಮನ್ನ ಬೆಂಬಲಿಸಿದ್ದಾರೆ. ನಮ್ಮ ಎಲ್ಲ ಶಾಸಕರೂ ಬಲವಾಗಿ ಜೊತೆಯಲ್ಲಿದ್ದು ಆಫರ್ ಅನ್ನು ದೃಢವಾಗಿ ತಿರಸ್ಕರಿಸಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಇಡೀ ವಿಶ್ವವೇ ತಿರುಗಿ ನೋಡುವ ಕೆಲಸ ಮಾಡಿದ್ದಾರೆ: ಮೋದಿ ಹೊಗಳಿದ ರೆಡ್ಡಿ