ಮರಾಠಿ ಸಿನಿಮಾಗಳಲ್ಲಿ ಜನಪ್ರಿಯತೆ ಗಳಿಸಿರುವ ಸಾಯಿ ತಮ್ಹಂಕರ್ (Sai Tamhankar) ಇದೀಗ ಕಾಸ್ಟಿಂಗ್ ಕೌಚ್ (Casting Couch) ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಆಫರ್ ನೀಡಿ ನಿರ್ಮಾಪಕರ ಜೊತೆ ಮಲಗಲು ಹೇಳ್ತಾರೆ ಎಂದು ನಟಿ ಸಾಯಿ ಕರಾಳ ಘಟನೆ ಬಗ್ಗೆ ಮಾತನಾಡಿದ್ದಾರೆ.
ಒಂದು ಬಾರಿ ನನಗೆ ಚಿತ್ರತಂಡದಿಂದ ಫೋನ್ ಕರೆ ಬಂದಿತ್ತು. ನಮ್ಮ ಚಿತ್ರಕ್ಕೆ ನೀವೇ ನಾಯಕಿ ಎಂದು ಹೇಳಿದರು. ಬಳಿಕ ಕತೆ ಬಗ್ಗೆ ವಿಚಾರಿಸಿದಾಗ ಇದಕ್ಕೂ ಮುನ್ನ ಒಮ್ಮೆ ನೀವು ನಿರ್ಮಾಪಕರ ಜೊತೆ ಮಲಗಬೇಕು ಎಂದರು. ನೀವಾಗಿರುವ ಕಾರಣ ಹೀರೋ ಜೊತೆ ಮಲಗಿ ಎಂದು ನಾನು ಹೇಳಲ್ಲ ಎಂದು ಮಾತನಾಡಿದರು. ಇದನ್ನೂ ಓದಿ:ಪತ್ತೆದಾರಿ ಸಿನಿಮಾದಲ್ಲಿ ಆಲಿಯಾ ಭಟ್- ಜು.15ರಿಂದ ಶೂಟಿಂಗ್ ಸ್ಟಾರ್ಟ್
ಅವರ ಆ ಮಾತು ನನಗೆ ಕೆರಳಿಸಿತ್ತು. ಕೊಡಲೇ ನಿಮ್ಮ ತಾಯಿಯನ್ನು ಅವರ ಜೊತೆ ಮಲಗಿಸಿ ಎಂದೆ. ಅವರ ಕಡೆಯಿಂದ ಉತ್ತರ ಬರಲಿಲ್ಲ. ಇನ್ನೋಮ್ಮೆ ಕಾಲ್ ಮಾಡಿದರೆ ನೆಟ್ಟಗೆ ಇರಲ್ಲ ಎಂದು ಗದರಿದೆ. ಆ ನಂತರ ಕರೆ ಬರಲಿಲ್ಲ ಎಂದು ನಟಿ ಸಾಯಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ವಿರೋಧಿಸಿದರೆ ಇಂತಹ ಕೆಟ್ಟ ಸಂದರ್ಭಗಳಿಂದ ನಾವು ದೂರ ನಿಲ್ಲಬಹುದು ಎಂದು ನಟಿ ಮಾತನಾಡಿದ್ದಾರೆ.