ಸೌತ್ ಬ್ಯೂಟಿ ಸಾಯಿ ಪಲ್ಲವಿ (Sai Pallavi) ಅವರ ತಂಗಿ ಮದುವೆಯಾಗಿ 3 ತಿಂಗಳ ಬಳಿಕ ಮದುವೆ ಫೋಟೋವನ್ನು ಹಂಚಿಕೊಂಡಿದ್ದಾರೆ. ತಂಗಿ ಮದುವೆ ಬಗ್ಗೆ ಎಮೋಷನಲ್ ಪೋಸ್ಟ್ ಶೇರ್ ಮಾಡಿದ್ದಾರೆ. ಸಹೋದರಿ ಮದುವೆ ಫೋಟೋಸ್ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ತ್ರಿವಿಕ್ರಮ್ ವಿಚಾರಕ್ಕೆ ಕಾಲೆಳೆದ ಕಿಚ್ಚ- ನಾಚಿ ನೀರಾದ ಭವ್ಯಾ
View this post on Instagram
Advertisement
ಎಲ್ಲ ವಿಷಯದಲ್ಲಿಯೂ ನಾನು ತಂಗಿ ಪೂಜಾಗೆ ಸಲಹೆ ನೀಡುತ್ತಿದ್ದೆ. ಆದರೆ ಮದುವೆ ವಿಷಯದಲ್ಲಿ ನಾನು ಯಾವುದೇ ಸಲಹೆ ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ನಾನು ಹೆದರಿದ್ದೆ, ಆದರೆ ಆ ಹೆದರಿಕೆ ಈಗ ಹೊರಟು ಹೋಗಿದೆ ಎಂದಿದ್ದಾರೆ. ತಂಗಿಯ ಮದುವೆ ಆಗಿ ಮೂರು ತಿಂಗಳಾಗಿದ್ದು, ಒಂದು ಬಾರಿಯೂ ಸಹ ನನ್ನ ತಂಗಿ ತಪ್ಪು ಮಾಡಿದಳು, ಅಥವಾ ನಾನು ಆಕೆಗೆ ಮಾರ್ಗದರ್ಶನ ಮಾಡಲಿಲ್ಲ ಎಂಬ ಅಳುಕೇ ನನಗೆ ಮೂಡಿಲ್ಲ ಎಂದಿದ್ದಾರೆ ಸಾಯಿ ಪಲ್ಲವಿ.
Advertisement
View this post on Instagram
Advertisement
ಅಂದಹಾಗೆ, ಬಹುಕಾಲದ ಗೆಳೆಯ ವಿನೀತ್ ಶಿವಕುಮಾರ್ ಜೊತೆ ಸೆಪ್ಟೆಂಬರ್‌ನಲ್ಲಿ ಪೂಜಾ ಮದುವೆಯಾದರು. ಅವರು ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಸಾಯಿ ಪಲ್ಲವಿಯಂತೆ ಪೂಜಾಗೆ ಸಕ್ಸಸ್ ಸಿಗಲಿಲ್ಲ.
Advertisement
ಇನ್ನೂ ರಣ್‌ಬೀರ್ ಕಪೂರ್ (Ranbir Kapoor) ಜೊತೆ ‘ರಾಮಾಯಣ’, ನಾಗ ಚೈತನ್ಯ ಜೊತೆ ‘ತಾಂಡೇಲ್’, ಆಮೀರ್ ಖಾನ್ ಪುತ್ರನ ಜೊತೆ ಬಾಲಿವುಡ್ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಸಾಯಿ ಪಲ್ಲವಿ ಕೈಯಲ್ಲಿವೆ.