ಅಂದು ಗರ್ಭಿಣಿ, ಇದೀಗ ಮದುವೆ: ಸಾಯಿ ಪಲ್ಲವಿ ಫೋಟೋ ವೈರಲ್

Public TV
1 Min Read
Sai Pallavi 2

ಖ್ಯಾತ ನಟಿ ಸಾಯಿ ಪಲ್ಲವಿ (Sai Pallavi) ಸದ್ದಿಲ್ಲದೇ ಮದುವೆ  (Marriage)ಆಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸಹ ನಟ ಶಿವಕಾರ್ತಿಕೇಯನ್ (Shivakarthikeyan) ಜೊತೆ ಹಾರ ಹಾಕಿಕೊಂಡು ನಿಂತಿರುವ ಫೋಟೋ ವೈರಲ್ ಆಗಿದ್ದು, ಅನೇಕರು ಸಾಯಿ ಪಲ್ಲವಿ ಮತ್ತು ಶಿವಕಾರ್ತಿಕೇಯನ್ ಜೋಡಿಗೆ ಶುಭ ಹಾರೈಸಿದ್ದಾರೆ.

sai pallavi in amarnath yatra 2

ಸಾಯಿ ಪಲ್ಲವಿ ಫ್ಯಾನ್ಸ್ ಪೇಜ್‍ ನಲ್ಲಿ ಫೋಟೋಗಳು ಹೆಚ್ಚಾಗಿ ಶೇರ್ ಆಗಿದ್ದು, ಯಾವುದೇ ಬಣ್ಣ, ಬ್ಯೂಟಿ ನೋಡದೇ ತಮ್ಮ ನೆಚ್ಚಿನ ನಟಿ ಮದುವೆಯಾಗಿದ್ದಾರೆ ಎಂದು ಹೆಮ್ಮೆಯಿಂದ ಸಂದೇಶಗಳನ್ನು ಬರೆದಿದ್ದಾರೆ. ಈ ಹಿಂದೆ ಸಾಯಿ ಪಲ್ಲವಿ ಗರ್ಭಿಣಿ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದೀಗ ಮದುವೆಯ ಫೋಟೋವನ್ನೂ ಎಲ್ಲರೂ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಅಭಿನವ ಹಾಲಶ್ರೀ ನೇತೃತ್ವದಲ್ಲಿ ಗೋವಿಂದ್ ಬಾಬು ಪೂಜಾರಿ ಬಯೋಪಿಕ್

Sai Pallavi 1

ಆ ಫೋಟೋ ವೈರಲ್ ಆಗುತ್ತಿದ್ದಂತೆಯೇ ಅಸಲಿಯತ್ತು ಹೊರ ಬಿದ್ದಿದೆ. ಅದು ಸಿನಿಮಾ ಮುಹೂರ್ತವೊಂದರ ಫೋಟೋವಾಗಿದ್ದು, ಸಹನಟನ ಜೊತೆ ಹಾರ ಹಾಕಿಕೊಂಡು ನಿಂತಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿ ಮುಹೂರ್ತದ ದಿನದಂದು ಹೂವಿನ ಹಾರ ಹಾಕಿ ಗೌರವಿಸುವುದು ಸಂಪ್ರದಾಯ. ಆ ಫೋಟೋವನ್ನೇ ವೈರಲ್ ಮಾಡಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

 

ಸಾಯಿ ಪಲ್ಲವಿ ಕೆಲ ತಿಂಗಳಿಂದ ಸಿನಿಮಾ ರಂಗದಿಂದಲೇ ದೂರವಿದ್ದರು. ಕಾಶಿಯಾತ್ರೆಯನ್ನೂ ಸಹ ಪಾಲಕರೊಂದಿಗೆ ಮಾಡಿದ್ದರು. ಇದೀಗ ಮತ್ತೆ ಸಿನಿಮಾಗಳನ್ನು ಒಪ್ಪಿಕೊ‍ಳ್ಳುತ್ತಿದ್ದು, ಈ ಸಂದರ್ಭದ ಫೋಟೋವನ್ನು ಮದುವೆ ಎಂದು ಹಬ್ಬಿಸಲಾಗುತ್ತಿದೆ.

Web Stories

Share This Article